Pini Village Culture: ಭಾರತದ ಈ ಹಳ್ಳಿಯಲ್ಲಿ ಮಹಿಳೆಯರು ಬಟ್ಟೆನೇ ಧರಿಸಲ್ವಂತೆ! ಅಪ್ಪಿ ತಪ್ಪಿ ಧರಿಸಿದರೂ ಇವರು ಬಂದು ಹೊತ್ತೊಯ್ತಾರಂತೆ!

Pini Village: ಭಾರತದಲ್ಲಿ ನಾವು ಹೆಜ್ಜೆ ಹೆಜ್ಜೆಗೂ ಸಂಸ್ಕೃತಿ ಬದಲಾಗುವುದನ್ನು ಕಾಣಬಹುದು. ವಾವಿಧತೆಯಲ್ಲಿ ಏಕತೆಯನ್ನು ಹೊಂದಿರೋ ಈ ರಾಷ್ಟ್ರದಲ್ಲಿ ಇದು ಸಾಮಾನ್ಯ. ಕೆಲವು ಪ್ರದೇಶಗಳಲ್ಲಿನ ಸಂಸ್ಕೃತಿಗಳು ನಮ್ಮನ್ನು ವಿಶೇಷವಾಗಿ ಗಮನ ಸೆಳೆದರೆ ಇನ್ನು ಕೆಲವು ವಿಚಿತ್ರವೆನಿಸಿ ಅಚ್ಚರಿಗೊಳ್ಳುವಂತೆ ಮಾಡಿಬಿಡುತ್ತವೆ. ಅಂತೆಯೇ ಭಾರತದ ಈ ಒಂದು ಹಳ್ಳಿಯಲ್ಲಿ ಮಹಿಳೆಯರಿಗೆ ವಿಚಿತ್ರವಾದ ಸಂಪ್ರದಾಯವನ್ನು ಹೇರಲಾಗಿದೆ. ಇದನ್ನು ತಿಳಿದರೆ ನೀವೂ ಆಶ್ಚರ್ಯಪಡುತ್ತೀರ.

ಹೌದು, ಹಿಮಾಚಲ ಪ್ರದೇಶದ ಮಣಿಕರ್ಣ ಕಣಿವೆಯ ಪಿನಿ ಗ್ರಾಮದಲ್ಲಿ ಶತಮಾನಗಳಿಂದಲೂ ಆಚರಿಸಿಕೊಂಡು ಬಂದಿರುವ ಆ ಒಂದು ಸಂಪ್ರದಾಯ ನಿಮಗೆ ಹುಬ್ಬೇರಿಸುವಂತೆ ಮಾಡುತ್ತದೆ. ಯಾಕೆಂದರೆ ಈ ಗ್ರಾಮದ ಮಹಳೆಯರು ಅದೊಂದು ಕಾರಣಕ್ಕಾಗಿ ಇಲ್ಲಿ ಇಂದಿಗೂ ಬಟ್ಟೆ ಧರಿಸುವುದಿಲ್ಲ. ಇದು ಅಚ್ಚರಿ ಅನಿಸಿದರೂ ಸತ್ಯ. ಅಂದಹಾಗೆ ಸಂಪ್ರದಾಯದ ಪ್ರಕಾರ, ವರ್ಷದಲ್ಲಿ 5 ದಿನಗಳು ಮಹಿಳೆಯರು ಯಾವುದೇ ಬಟ್ಟೆಯನ್ನು ಧರಿಸುವುದಿಲ್ಲ.

ಪ್ರತಿ ವರ್ಷ ಪಿನಿ ಗ್ರಾಮದ (Pini Village) ಮಹಿಳೆಯರು ಶ್ರಾವಣ ಮಾಸದಲ್ಲಿ 5 ದಿನ ಬಟ್ಟೆ ಧರಿಸುವುದಿಲ್ಲ. ಈ ಸಂಪ್ರದಾಯವನ್ನು ಅನುಸರಿಸದ ಮಹಿಳೆ ಕೆಲವೇ ದಿನಗಳಲ್ಲಿ ಕೆಟ್ಟ ಸುದ್ದಿ ಕೇಳುತ್ತಾರೆ ಎಂದು ಹೇಳಲಾಗುತ್ತದೆ. ಈ ಮಧ್ಯೆ, ಇಡೀ ಗ್ರಾಮದಲ್ಲಿ ಗಂಡ ಮತ್ತು ಹೆಂಡತಿ ಪರಸ್ಪರ ಮಾತನಾಡುವುದಿಲ್ಲ. ಈ ಅವಧಿಯಲ್ಲಿ ಗಂಡ ಮತ್ತು ಹೆಂಡತಿ ಪರಸ್ಪರ ಸಂಪೂರ್ಣವಾಗಿ ದೂರವಿರುತ್ತಾರೆ.

ಅದೇ ಸಮಯದಲ್ಲಿ, ಈ ಗ್ರಾಮವು ಪುರುಷರಿಗೆ ಸಹ ಕಟ್ಟುನಿಟ್ಟಾದ ಸಂಪ್ರದಾಯವನ್ನು ಆಚರಿಸುವಂತೆ ಮಾಡಿದೆ. ಆದರೆ ಈ ಸಂಪ್ರದಾಯದ ನಿಯಮಗಳು ಪುರುಷರಿಗೆ ಸ್ವಲ್ಪ ವಿಭಿನ್ನವಾಗಿವೆ. ಅದನ್ನು ಅವರು ಅನುಸರಿಸಲೇಬೇಕು. ಅದೇನೆಂದರೆ ಪುರುಷರು ಸಹ ಆಲ್ಕೋಹಾಲ್ ಕುಡಿಯುವಂತಿಲ್ಲ. ಪುರುಷರು ಈ ಸಂಪ್ರದಾಯವನ್ನು ಅನುಸರಿಸುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶ್ರಾವಣದ ಈ ಐದು ದಿನಗಳಲ್ಲಿ ಪುರುಷರು ಮದ್ಯ ಮತ್ತು ಮಾಂಸವನ್ನು ತಿನ್ನುವಂತಿಲ್ಲ. ಒಂದು ವೇಳೆ ಇದನ್ನು ಅನುಸರಿಸದಿದ್ದರೆ ದೇವರು ಕೋಪಗೊಂಡು ಏನಾದರು ಸಮಸ್ಯೆ ನೀಡುತ್ತಾರೆ ಎಂಬ ನಂಬಿಕೆಯಿದೆ.

ಪಿನಿ ಗ್ರಾಮವು ಈ ಸಂಪ್ರದಾಯದ ಕುತೂಹಲಕಾರಿ ಇತಿಹಾಸವನ್ನು ಹೊಂದಿದೆ. ಏನೆಂದರೆ ಪಿನಿ ಗ್ರಾಮವು ಒಮ್ಮೆ ರಾಕ್ಷಸರಿಂದ ಭಯಭೀತವಾಗಿತ್ತು ಎಂದು ಹೇಳಲಾಗುತ್ತದೆ. ಇದಾದ ನಂತರ ‘ಲಹುವಾ ಘೋಂಡ್’ ಎಂಬ ದೇವತೆ ಪಿನಿ ಗ್ರಾಮಕ್ಕೆ ಬಂದಿತು. ದೇವತೆಯು ರಾಕ್ಷಸನನ್ನು ಕೊಂದು ಪಿನಿ ಗ್ರಾಮವನ್ನು ರಾಕ್ಷಸರ ಭಯದಿಂದ ರಕ್ಷಿಸಿದರು. ಅಲ್ಲದೆ ಈ ಎಲ್ಲಾ ರಾಕ್ಷಸರು ಹಳ್ಳಿಯ ವಿವಾಹಿತ ಮಹಿಳೆಯರಿಗೆ ಸುಂದರವಾದ ಬಟ್ಟೆಗಳನ್ನು ನೀಡುತ್ತಿದ್ದರಂತೆ. ಇದನ್ನೆಲ್ಲಾ ತಡೆದು ದೇವತೆಗಳು ಅಸುರರನ್ನು ಸಂಹರಿಸಿ ಮಹಿಳೆಯರನ್ನು ರಕ್ಷಿಸಿದರು.

ಅಂದಿನಿಂದ ಮಹಿಳೆಯರು 5 ದಿನಗಳವರೆಗೆ ಉಡುಪುಗಳನ್ನು ಧರಿಸದೇ ಇರುವ ಸಂಪ್ರದಾಯವಿದೆ. ಒಂದು ವೇಳೆ ಬಟ್ಟೆಯಲ್ಲಿ ಸುಂದರವಾಗಿ ಕಾಣಿಸಿಕೊಂಡರೆ, ರಾಕ್ಷಕರು, ದೆವ್ವಗಳು ಅವರನ್ನು ಒಯ್ಯುತ್ತವೆ ಎಂದು ಇಲ್ಲಿ ನಂಬಲಾಗಿದೆ. ಅದಕ್ಕಾಗಿ ಈ ಸಂಪ್ರದಾಯವನ್ನು ಮಾಡಿದ್ದಾರೆ.

ಇದನ್ನೂ ಓದಿ: Devanuru mahadeva : ಸಂಘ ಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಿ: ಬಿಜೆಪಿ ವಿರುದ್ಧ ಸಾಹಿತಿ ದೇವನೂರು ಮಹಾದೇವ ಕಿಡಿ!!

 

Leave A Reply

Your email address will not be published.