Vehicle Rules: ಇನ್ನುಮುಂದೆ ಯುವ ಕಾರು ಚಾಲಕರು ತಮ್ಮ ಸ್ನೇಹಿತರಿಗೆ ಲಿಫ್ಟ್ ಕೊಡುವಂತಿಲ್ಲ! ಯಾಕೆ ಈ ನಿಯಮ?
Vehicle Rules: ಕಾರು (Car) ಇದ್ದವರು ಇತರರಿಗೆ ಲಿಫ್ಟ್ ಕೊಡೋದು ಸಾಮಾನ್ಯ. ಅದರಲ್ಲೂ ಫ್ರೇಂಡ್ಸ್ ಸಿಕ್ಕಿದ್ರೆ ಹಾಗೇ ಬಿಟ್ಟೋಗೊ ಮಾತೇ ಇಲ್ಲ. ಆದರೆ, ಇಲ್ಲಿ ಕಾರು ಚಾಲಕರು ತಮ್ಮ ಸ್ನೇಹಿತರಿಗೆ ಲಿಫ್ಟ್ ಕೊಡುವಂತಿಲ್ಲ. ಎಲ್ಲಿ ಇಂತಾ ರೂಲ್ಸ್ ಗೊತ್ತಾ? ಅಷ್ಟಕ್ಕೂ ಯಾಕೆ ಈ ನಿಯಮ (Vehicle Rules)? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಯುಕೆ (UK) ಸರ್ಕಾರವು ಈ ಯೋಜನೆ ಮಾಡಿದ್ದು, 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಚಾಲಕರು ತಮ್ಮ ಸ್ನೇಹಿತರಿಗೆ ಲಿಫ್ಟ್ ನೀಡುವುದನ್ನು ನಿಷೇಧಿಸಿದೆ. ಯಾಕೆಂದರೆ, ಕಾರು ಅಪಘಾತಗಳ ಸಂಖ್ಯೆಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಗಳನ್ನು ರಸ್ತೆ ಸಚಿವ ರಿಚರ್ಡ್ ಹೋಲ್ಡನ್ (Richard Holden) ಅವರು ಮೇ 6 ರಂದು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ ಎಂದು ವರದಿ ತಿಳಿಸಿದೆ.
2017 ರಲ್ಲಿ ಡ್ರೈವಿಂಗ್ ಪರೀಕ್ಷೆಯಲ್ಲಿ (Driving test) ಉತ್ತೀರ್ಣರಾದ ಸ್ನೇಹಿತನೊಂದಿಗೆ ಲಿಫ್ಟ್ ತೆಗೆದುಕೊಂಡಿದ್ದು, ಕಾರು ಅಪಘಾತದಲ್ಲಿ 18 ವರ್ಷದ ಮಗಳು ಸಾವನ್ನಪ್ಪಿದಳು. ಈ ಬಗ್ಗೆ ಮಹಿಳೆಯ ಅಭಿಯಾನದ ನಂತರ ಈ ಪ್ರಸ್ತಾಪವು ಬಂದಿದೆ.
ರಸ್ತೆ ಸುರಕ್ಷತಾ ಚಾರಿಟಿ ಬ್ರೇಕ್ ಪ್ರಕಾರ, ಪರೀಕ್ಷೆ ಬರೆದ ಐದು ಚಾಲಕರಲ್ಲಿ, ಉತ್ತೀರ್ಣರಾದವರಲ್ಲಿ ಒಬ್ಬರು ಒಂದು ವರ್ಷದೊಳಗೆ ಅಪಘಾತಕ್ಕೀಡಾಗುತ್ತಾರೆ. ಹೊಸ ಚಾಲಕರು ಅಪಘಾತದಲ್ಲಿ ಸಾಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಈ ಅಂಕಿಅಂಶಗಳು ತಿಳಿಸಿದೆ. ಈ ಕಾರಣದಿಂದ ಐರ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸ್ವೀಡನ್ ಸೇರಿದಂತೆ ಕೆಲವು ದೇಶಗಳು ಇತ್ತೀಚೆಗೆ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಕಡಿಮೆ ಅಕ್ಕೋಹಾಲ್ ಮಿತಿಗಳು ಮತ್ತು ರಾತ್ರಿಯಲ್ಲಿ ಅಥವಾ ಇತರರೊಂದಿಗೆ ಚಾಲನೆ ಮಾಡುವ ನಿರ್ಬಂಧಗಳು ಸೇರಿದ ಪದವಿ ಪರವಾನಗಿ ಯೋಜನೆಗಳನ್ನು ತಂದಿವೆ.
ಇದನ್ನೂ ಓದಿ: Bengaluru-Tirupati E-buses: ಬೆಂಗಳೂರು -ತಿರುಪತಿಗೆ ಇ ಬಸ್ ಸಂಚಾರ! ಇ ಬಸ್‌ಗಳ ಸಮಯ, ದರದ ಕುರಿತು ಸಂಪೂರ್ಣ ವಿವರ ಇಲ್ಲಿದೆ!