Puttur: ಪುತ್ತೂರು ವಿಧಾನಸಭಾ ಕ್ಷೇತ್ರ ಚುನಾವಣೆ : ಅಭ್ಯರ್ಥಿಗಳಾಗಿ ಸುಳ್ಯ ಕ್ಷೇತ್ರದವರೇ ಸಿಂಹಪಾಲು

Puttur constituency: ಚುನಾವಣೆಯ ಹಿನ್ನೆಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ (Puttur constituency) ಸುಳ್ಯ ವಿಧಾನಸಭಾ ಕ್ಷೇತ್ರದ ಐವರು ಸ್ಪರ್ಧಾ ಕಣದಲ್ಲಿದ್ದಾರೆ.ಸುಳ್ಯ ಪ.ಜಾ.ಮೀಸಲು ಕ್ಷೇತ್ರವಾದ ಕಾರಣ ಬೇರೆಯವರಿಗೆ ಸ್ಪರ್ಧಿಸಲು ಅವಕಾಶವಿಲ್ಲ.ಈ ಕಾರಣದಿಂದ ಸುಳ್ಯದವರು ಸತ್ವಪರೀಕ್ಷೇಗೆ ಬೇರೆ ಕಡೆ ಚುಮಾವಣೆಗೆ ಇಳಿಯುವುದು ಅನಿವಾರ್ಯವಾಗಿದೆ.

 

ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಆಶಾ ತಿಮ್ಮಪ್ಪ ಗೌಡ ಅವರ ತವರುಮನೆ ಸುಳ್ಯ. ಈಗ ವಾಸ್ತವ್ಯ ಇರುವ ಕಡಬ ತಾಲೂಕಿನ‌ ಕುಂತೂರು ಕುಂಡಡ್ಕ ಕೂಡಾ ಸುಳ್ಯ ವಿಧಾನಸಭಾ ಕ್ಷೇತ್ರ. ಇದೇ ಸುಳ್ಯ ಕ್ಷೇತ್ರದಲ್ಲಿ ಅವರು ಒಂದು ಬಾರಿ ನಗರ ಪಂಚಾಯತ್ ಅಧ್ಯಕ್ಷರಾಗಿ, ಮೂರು ಬಾರಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದಾರೆ.

ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿ ಚುನಾವಣೆಗೆ ಸ್ಪರ್ಧಿಸುತ್ತಿರುವ ದಿವ್ಯಪ್ರಭಾ ಚಿಲ್ತಡ್ಕ ಅವರು ಸುಳ್ಯ ತಾಲೂಕಿನ ಗುತ್ತಿಗಾರಿನವರು. ರಾಜಕೀಯ ಹಿನ್ನೆಲೆಯಿಂದಲೇ ಬಂದಿರುವ ದಿವ್ಯ ಪ್ರಭಾ ಈ ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷರಾಗಿದ್ದರು.

ಪುತ್ತೂರಿನಲ್ಲಿ ಎಸ್‌ಡಿಪಿಐ ಅಭ್ಯರ್ಥಿಯಾಗಿರುವ ಶಾಫಿ ಬೆಳ್ಳಾರೆಯವರು ಸುಳ್ಯ ತಾಲೂಕಿನ ಬೆಳ್ಳಾರೆಯವರು. ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿಯಾಗಿರುವ ಇವರು ಈಗ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿದ್ದು, ಅಲ್ಲಿಂದಲೇ ಸ್ಪರ್ಧೆ ನಡೆಸುತ್ತಿದ್ದಾರೆ.

ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಯಾಗಿರುವ ಡಾ.ಬಿ.ಕೆ. ವಿಶುಕುಮಾರ್ ಅವರು ಮೂಲತಃ ಸುಳ್ಯ ತಾಲೂಕಿನವರು. ಇಲ್ಲಿನ ಪಂಜದಲ್ಲಿ ಹುಟ್ಟಿ ಬೆಳೆದ ಅವರು ಮೈಸೂರಿನಲ್ಲಿ ಕೃಷಿ ವಿಜ್ಞಾನಿಯಾಗಿ ಸ್ವಂತ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಪ್ರಸ್ತುತ ಪುತ್ತೂರಿನಲ್ಲಿ ವಾಸ್ತವ್ಯ ಹೊಂದಿದ್ದಾರೆ.

ಕರ್ನಾಟಕ ರಾಷ್ಟ್ರ ಸಮಿತಿಯಿಂದ ಸ್ಪರ್ಧಿಸುತ್ತಿರುವ ಐವನ್ ಫೆರಾವೋ ಸುಳ್ಯ ತಾಲೂಕಿನ ಬೆಳ್ಳಾರೆಯ ಪನ್ನೆಯವರು.

ಈ ಬಾರಿ ಸುಳ್ಯ ತಾಲೂಕಿನ ಐವರು ಪುತ್ತೂರಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿರುವುದು ವಿಶೇಷ. ಅಲ್ಲದೆ ರಾಜಕೀಯದಲ್ಲಿ ಉನ್ನತ ಸ್ಥಾನ ಪಡೆದಿರುವ ಡಿ.ವಿ.ಸದಾನಂದ ಗೌಡ ,ಶೋಭಾ ಕರಂದ್ಲಾಜೆ,ನಳಿನ್ ಕುಮಾರ್ ಕಟೀಲ್, ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಕೂಡ ಸುಳ್ಯ ವಿಧಾನಸಭಾ ಕ್ಷೇತ್ರದವರು ಎನ್ನುವುದು ವೈಶಿಷ್ಟ್ಯ.

ಇದನ್ನೂ ಓದಿ: Shivamogga: ಶಿವಮೊಗ್ಗ ಚುನಾವಣೆ ಪ್ರಚಾರಕ್ಕೆ ರಾಹುಲ್ ಗಾಂಧಿ ಆಹ್ವಾನಿಸಿದ ಈಶ್ವರಪ್ಪ : ಹೆಲಿಕಾಪ್ಟರ್ ಖರ್ಚು ನಾನೇ ಭರಿಸುತ್ತೇನೆ ಎಂದ ಬಿಜೆಪಿ ನಾಯಕ

Leave A Reply

Your email address will not be published.