Committed suicide: ದಕ್ಷಿಣ ಕನ್ನಡ: ಆಸ್ತಿ ಅತ್ತಿಗೆಯ ಜೊತೆ ಚೆಲ್ಲಾಟ ನವ ವಿವಾಹಿತೆಯ ಪ್ರಾಣಕ್ಕೇ ಬಂತು ಕಂಟಕ | 15 ವರ್ಷಗಳ ಪ್ರೀತಿ 5 ತಿಂಗಳಲ್ಲಿ ಖಲ್ಲಾಸ್ !

Newly married woman committed-suicide: ಬೆಳ್ತಂಗಡಿ: 22 ವರ್ಷದ ಗೆಳೆತನ, 15 ವರ್ಷದ ತಪಸ್ಸಿನಂತಹಾ ಪ್ರೀತಿ ದಾರುಣವಾಗಿ ಕೈ ಕೊಟ್ರೆ ಏನು ಮಾಡಬೇಕು ? ಹುಡುಗ ಆಗಿದ್ರೆ ದೊಡ್ಡದಾಗಿ ಜಗಳ ತೆಗೀತಿದ್ದ, ಆಕೆಯನ್ನು ಮನೆಯಿಂದ ಹೊರಕ್ಕೆ ಹಾಕ್ತಿದ್ದ, ಅಥವಾ ಒಂದೆರಡು ಪೆಗ್ ಬಗ್ಗಿಸಿ ನೋವು ಮರೀತಿದ್ದನೇನೋ ! ಆದ್ರೆ ಇದ್ಯಾವುದನ್ನೂ ಮಾಡಲು ಆಗದ ಅಸಹಾಯಕ ಹುಡುಗಿ ಏನು ಮಾಡ್ಕೊಂಡು ಗೊತ್ತೇ ?

ಮೊನ್ನೆ ಬೆಳ್ತಂಗಡಿ ತಾಲೂಕಿನಲ್ಲಿ ಅವರ ನವ ವಿವಾಹಿತ ಮಹಿಳೆಯೊಬ್ಬಳು(Newly married woman committed-suicide) ಆತ್ಮಹತ್ಯೆ ಮಾಡಿಕೊಂಡಿದ್ದಳು. ಕೇವಲ 5 ತಿಂಗಳ ಹಿಂದೆ ಮದ್ವೆ ಆಗಿದ್ದ, ಗಂಡನ ಮನೆ ಕಡೆ ತುಂಬಾ ಅನುಕೂಲದಲ್ಲಿದ್ದ, ಸ್ವತಃ ತಾನೇ ಒಳ್ಳೆಯ ಓದು ಓದಿ ಹತ್ತಿರದಲ್ಲೇ ಗೌರವಾನ್ವಿತ ಕೆಲಸದಲ್ಲಿದ್ದ ಈ ಹುಡುಗಿಯ ಆತ್ಮಹತ್ಯೆಗೆ ಬೆಳ್ತಂಗಡಿ ಬೆಚ್ಚಿಬಿದ್ದಿತ್ತು. ಇಷ್ಟೆಲ್ಲಾ ಸಂಪತ್ತು ಬದುಕಿನ ಆಯ್ಕೆಗಳು ಮತ್ತು ನೆಮ್ಮದಿ ಇದ್ದರೂ ಯಾಕೆ ಹುಡುಗಿ ಆತ್ಮಹತ್ಯೆ ಮಾಡಿಕೊಂಡು ಬಿಟ್ಟಳು ? ಎಂದು ಉತ್ತರವಿಲ್ಲದ ಪ್ರಶ್ನೆಯಿಂದ ಆಕೆಯ ಮನೆಯ ಅಕ್ಕಪಕ್ಕದವರು, ಹಿತೈಷಿಗಳು, ಗೆಳತಿಯರು ಮರುಗಿದ್ದರು. ಇದೀಗ ಆಕೆಯ ಆತ್ಮಹತ್ಯೆಯ ಸಿಕ್ಕು ಬಿಡಿಸಿಕೊಂಡಿದೆ. ‘ ಆ ‘ ಕಾರಣದಿಂದ ಹುಡುಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅದರ ಕಂಪ್ಲೀಟ್ ಡೀಟೇಲ್ಸ್ ನಾವಿಲ್ಲಿ ನೀಡುತ್ತಿದ್ದೇವೆ.

ಅವಳು ಕೌಸಲ್ಯ ಅವನು ಸುಕೇಶ್ :
ಅವರಿಬ್ಬರದ್ದೂ ಅಸಾಮಾನ್ಯ ಎನ್ನುವ ಗೆಳೆತನ. ಈಗಿನ ಕಾಲದಲ್ಲಿ ಒಂದೆರಡು ವರ್ಷಗಳಿಗೆ ಹೆಚ್ಚೆಂದರೆ ನಾಲ್ಕು ವರ್ಷಗಳಿಗೆ ಸ್ನೇಹದ ತಂತಿ ಹರಿದು ಹೋಗುತ್ತಿರುವ ಈ ಕಾಲದಲ್ಲಿ ಅವರು ಕಳೆದ ಎರಡು ದಶಕಗಳ ಕಾಲ ಗೆಳೆತನವನ್ನು ಗಟ್ಟಿ ಮಾಡಿಕೊಂಡು ಬಂದವರು. ಕೌಶಲ್ಯ ಹಾಗೂ ಆಕೆಯ ಪತಿ ಸುಕೇಶ್ ಅಕ್ಕ ಪಕ್ಕದ ಮನೆಯವರಾಗಿದ್ದು, ಬಾಲ್ಯದಿಂದಲೇ ಗೆಳೆತನ ಸಂಪಾದಿಸಿದ್ದ ಜೋಡಿ 15 ವರ್ಷಗಳ ಹಿಂದೆ ಪ್ರೀತಿಯಲ್ಲಿ ಬಿದ್ದಿತ್ತು. ಜೊತೆಯಾಗಿಯೇ ಶಾಲಾ ಕಾಲೇಜು ದಿನಗಳನ್ನು ಕಳೆದಿದ್ದ ಜೋಡಿ ಹಾಗೋ ಹೀಗೋ ಮನೆಯಲ್ಲಿ ಗೊತ್ತಾಗದಂತೆ ಪ್ರೀತಿಯನ್ನು ಗುಪ್ತವಾಗಿರಿಸಿ, ತಮ್ಮ ಕಾಲ ಮೇಲೆ ನಿಂತ ಬಳಿಕ ಪ್ರೀತಿಯನ್ನು ಮನೆಯವರಲ್ಲಿ ಹೇಳಿಕೊಂಡಿತ್ತು. ಬಾಲ್ಯದಲ್ಲೇ ಅಪ್ಪನನ್ನು ಕಳೆದುಕೊಂಡಿದ್ದ ಕೌಶಲ್ಯ ಅಮ್ಮನ ಆರೈಕೆಯಲ್ಲೇ ಬೆಳೆದ ಕೂಸಾಗಿದ್ದಳು. ಹಾಗೆ ಅವರದು ಸುದೀರ್ಘ 22 ವರ್ಷಗಳ ಸಾಂಗತ್ಯ. ಮೊದಲು ಗೆಳೆಯರಾಗಿದ್ದ ಅವರು ದೊಡ್ಡವರಾದ ಹಾಗೆ ಪ್ರೀತಿ ಬೆಳೆದಿದೆ.

ಇದೀಗಅವರಿಬ್ಬರೂ ಪ್ರೀತಿ ಮಾಡಿಯೇ 15 ಸುದೀರ್ಘ ಸಂವತ್ಸರಗಳಾಗಿವೆ. ಅಷ್ಟು ಬೇಗ ಕಾಲದವರೆಗೆ ಪ್ರೀತಿಯನ್ನು ಬೆಳೆಸಿಕೊಂಡು ಬಂದು ತೀರಾ ಇತ್ತೀಚೆಗೆ ಕೇವಲ ಐದು ತಿಂಗಳ ಹಿಂದೆ ಅವರಿಬ್ಬರೂ ಮದುವೆಯಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಳ್ಳೆಯ ಹುದ್ದೆಯಲ್ಲಿದ್ದಳು ಕೌಶಲ್ಯ. ಆಕೆಯ ಗಂಡ ಸುಕೇಶ್ ಅಮೆಜಾನ್ ಮತ್ತಿತರ e ಕಾಮರ್ಸ್ ಕಂಪನಿಗಳ ಮೂಲಕ ವಸ್ತುಗಳನ್ನ ಮಾರಾಟ ಮಾಡುತ್ತಿದ್ದ. ಅಷ್ಟು ದೀರ್ಘ ಕಾಲ ಗೆಳೆಯರಾಗಿ, 15 ವರ್ಷಗಳ ಕಾಲ ಪ್ರೀತಿಸಿ ಕಾದು. ಮದುವೆಯಾದ ಅವರಿಬ್ಬರ ಬಗ್ಗೆ ಊರಲ್ಲಿ ಎಲ್ಲರಿಗೂ ಗೌರವವಿತ್ತು.

ಮದುವೆ ನಂತರ ಕೌಸಲ್ಯ ತುಂಬಾ ಖುಷಿಯಲ್ಲಿಯೇ ಇದ್ದಳು. ತಾನು ಬೇರೊಂದು ಊರಿನಲ್ಲಿ ಕೆಲಸ ಮಾಡುತ್ತಿದ್ದು, ಈಗ ತಾನು ಸದಾ ಗಂಡನ ಜತೆ ಇರಬೇಕೆಂದು ಅಲ್ಲಿಂದ ಟ್ರಾನ್ಸ್ಫರ್ ಕೇಳಿದ್ದಳು. ಆಕೆಯ ಅದೃಷ್ಟವೇನೋ ಎಂಬಂತೆ ಆಕೆಗೆ ಗಂಡ ಇರುವ ಊರಿಗೇ ಟ್ರಾನ್ಸ್ಫರ್ ಸಿಕ್ಕಿತ್ತು. ಎಲ್ಲವೂ ಚೆನ್ನಾಗಿಯೇ ಇತ್ತು. ಇತ್ತೀಚೆಗೆ ಎಲ್ಲಾ ನವವಿವಾಹಿತ ಜೋಡಿಯಂತೆ ಅವರಿಬ್ಬರೂ ಹನಿಮೂನ್ ಗೆಂದು ದೂರ ದೂರಿಗೆ ಹೋಗಿದ್ದರು. ಗಂಡನ ಪ್ರೀತಿ ಏಕಾಂತದ ಸಾಂಗತ್ಯದ ದಿನವೇ ಆಕೆಗೆ ಒಂದು ಬರ ಸಿಡಿಲು ಬಡಿದಿತ್ತು. ಅವರಿಬ್ಬರ ಮದ್ಯೆ ಹಾಗೆ ಸಡನ್ನಾಗಿ ಬಂದು ನಿಂತದ್ದು ‘ ಆಸ್ತಿ ‘ !

ಕೌಸಲ್ಯಾ ಗಂಡ ಸುಕೇಶ್ ಹುಟ್ಟು ಶ್ರೀಮಂತನಾಗಿದ್ದ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಆಕೆ ಮದುವೆಯ ಬಳಿಕ ಗಂಡನೊಂದಿಗಿರುವ ಮಹದಾಸೆಯಿಂದ ವರ್ಗಾವಣೆ ಪಡೆದುಕೊಂಡಿದ್ದು, ಪ್ರತೀ ನಿತ್ಯವೂ ಮುಂಜಾನೆ ಸುಕೇಶ್ ಆಕೆಯನ್ನು ಕಚೇರಿಗೆ ತಂದು ಬಿಡುತ್ತಿದ್ದ. ಇಡೀ ಊರಿಗೆ ಊರೇ ಇವರಿಬ್ಬರ ಪ್ರೀತಿ, ಮದುವೆ, ಜೀವನವನ್ನು ಕೊಂಡಾಡಿದ್ದೇ ಒಂದು ರೀತಿಯ ದೃಷ್ಠಿ ತಾಗಿತ್ತೋ ಏನೋ, ಮದುವೆಯ ಐದನೇ ತಿಂಗಳಿನಲ್ಲಿ ಮಹಾ ದುರಂತವೊಂದು ನಡೆದು ಹೋಗಿದೆ.

ಹನಿಮೂನ್ ಸಂಭ್ರಮ-ಮೆಸೇಜ್ ನೀಡಿತ್ತು ಬಿಗ್ ಶಾಕ್ !

ವಿವಾಹವಾದ ಬಳಿಕ ಹನಿಮೂನ್ ತೆರಳಿದ್ದ ಜೋಡಿ ವಿವಾಹದ ಖುಷಿ, ಸುಖ ಕಾಣುತ್ತಿತ್ತು. ಅದೊಂದು ಕ್ಷಣ ಸುಕೇಶ್ ಮೊಬೈಲ್’ಗೆ ‘ ಆಸ್ತಿ ‘ ಯಿಂದ ಮೆಸೇಜು ಬಂದಿತ್ತು. ಸುಕೇಶ್ ತನ್ನ ಮೊಬೈಲ್’ನಲ್ಲಿ ತನ್ನ ಆಸ್ತಿ ಅತ್ತಿಗೆ ಅಂತ ಯಾರನ್ನೋ ಸೇವ್ ಮಾಡಿಕೊಂಡಿದ್ದು, ಆ ದಿನ ಸುಕೇಶ್ ಮನೆಯಲ್ಲಿ ಇಲ್ಲದ ಸಂದರ್ಭ ಬಂದ ಮೆಸೇಜ್ ಒಂದು ಇದೀಗ ಅಮಾಯಕ ಹುಡುಗಿಯ ಪ್ರಾಣವನ್ನೇ ಹಿಂಡಿ ತೆಗೆದಿದೆ.

ಆವತ್ತು ಗಂಡ ಮನೆಯಲ್ಲಿ ಇಲ್ಲದ ಸಂದರ್ಭ ‘ಈಗ ನಿನಗೆ ನಾನು ಬೇಡ ‘ ಎನ್ನುವುದನ್ನು ಕಂಡಿದ್ದ ಕೌಶಲ್ಯ ತನ್ನ ಪ್ರೀತಿಯಲ್ಲಿ ಮೊದಲ ಬಾರಿಗೆ ಏನೋ ಮೋಸ ನಡೆದಿದೆ ಎನ್ನುವ ಸಣ್ಣ ಅನುಮಾನದಿಂದ ಗಾಬರಿಗೊಂಡಿದ್ದಳು. ಮನಸ್ಸು ‘ ಛೇ ಇರಲಿಕ್ಕಿಲ್ಲ ‘ ಅನ್ನುತ್ತಿತ್ತು. ಆದರೂ ಮೂಲೆಯಲ್ಲಿ ಒಂದು ಸಣ್ಣ ಅನುಮಾನ ಬಂದು ನಿಲ್ಲುತ್ತೆ. ಇದರ ಮಧ್ಯೆ ಹೇಗಾದರೂ ಮಾಡಿ ಇದನ್ನು ಸರಿ ಮಾಡಿಕೊಳ್ಳಬೇಕು ಎನ್ನುವ ಹಠಕ್ಕಿಳಿದು ಈ ವಿಚಾರವನ್ನು ಮಾವನ ಮನೆಯಲ್ಲಿ ತಿಳಿಸುತ್ತಾಳೆ. ಅಲ್ಲಿ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ತಾಯಿ ಮನೆಯಲ್ಲಿ ತಿಳಿಸಿದ್ದಳು. ಪಾಪ ಆ ತಾಯಿ ತನ್ನ ಮಗಳ ಸಂಬಂಧ ಎಲ್ಲಿ ಮುರಿದು ಬೀಳುತ್ತದೆಯೋ ಎನ್ನುತ್ತಾ ಮಾತನಾಡಿ ಸರಿ ಮಾಡೋಣ ಎನ್ನುವ ಭರವಸೆ ಕೊಟ್ಟು ವಾಪಸ್ಸು ಕಳುಹಿಸಿದ್ದರು. ಆಗ ಪತ್ತೇದಾರಿ ಕೆಲಸಕ್ಕಿಳಿದ್ದಳು ಕೌಶಲ್ಯ.

ಅದು ಹೇಗೋ ಸುಕೇಶ್ ಮೊಬೈಲ್’ ಗೆ ಬರುವ ಅಲ್ಲಿಂದ ಹೋಗುವ ಸಮಸ್ತ ಇನ್ಫರ್ಮೇಶನ್ ತನ್ನ ಕೈಗೆ, ತನ್ನ ಮೊಬೈಲ್ ಗೆ ಬರುವಂತೆ ಆತನ ವಾಟ್ಸ್ ಆ್ಯಪ್ ಅನ್ನು ತನ್ನ. ಮೋಬೈಲ್ ನಲ್ಲಿ ನೋಡುವ ಥರ ಹ್ಯಾಕ್ ಮಾಡಿದ್ದಳು. ಆತನ ಮೇಲೆ ಹದ್ದಿನ ಕಣ್ಣಿರಿಸಿದ್ದಳು. ಹೀಗೆ ಪತ್ತೇದಾರಿ ಕೆಲಸಕ್ಕಿಳಿದ ಆಕೆಗೆ ಒಂದೊಂದೇ ಮಾಹಿತಿಗಳು ಸಿಕ್ಕಿದ್ದು, ಆತನ ಒಂದೊಂದೇ ಬಣ್ಣ ಬಯಲಾಗಿದೆ. ಅದರ ಜತೆ ಆತನ ಆಸ್ತಿ ಅತ್ತಿಗೆ ಅಲಿಯಾಸ್ ಆಸ್ತಿಕಾ ಜೊತೆಗಿದ್ದ ಆತನ ಅಕ್ರಮ ಸಂಬಂಧ, ಅಕ್ರಮ ಚಟುವಟಿಕೆ, ಮದುವೆಗೂ ಮುಂಚೆ ಅವರಿಬ್ಬರು ಆಡಿದ ಕಾಮದಾಟ ಹೀಗೆ ಎಲ್ಲವೂ ಆಸ್ತಿಕಾ ಮೆಸೇಜ್ ನಿಂದ ರಿವೀಲ್ ಆಗಿದೆ.

ನಿಜ ಹೇಳಬೇಕೆಂದರೆ, ಮದುವೆಯ ನಂತರ ಸುಕೇಶನಲ್ಲಿ ಬದಲಾವಣೆ ಕಂಡಿತ್ತು. ಆದರೆ, ಯಾವಾಗ ಸುಕೇಶ್ ಮದುವೆ ಆಗಿ ತನ್ನ ಪತ್ನಿ ಕೌಸಲ್ಯಾ ಕಡೆ ವಾಲಿದ್ದ. ಆಸ್ತಿ ಅತ್ತಿಗೆ ಆತನ ಪಾಲಿಗೆ ಹಳೆಯ ನೆನಪು ಮಾತ್ರ ಆಗಿತ್ತು. ಆದರೆ ಸುಕೇಶ್ ಬಿಟ್ಟರೂ ಅತ್ತ ಆಸ್ತಿ ಅತ್ತಿಗೆ ಬಿಡಬೇಕಲ್ಲ. ಯಾಕೋ ಇತ್ತೀಚಿಗೆ ಸುಕೇಶ ತನ್ನನ್ನು ಅವಾಯ್ಡ್ ಮಾಡುತ್ತಿದ್ದಾನೆ ಎಂದು ಆಕೆ ಪದೇ ಪದೇ ಸುಖೇಶನಿಗೆ ಸಂದೇಶ ಕಳಿಸುತ್ತಾ ಪೀಡಿಸಲು ಆರಂಭಿಸಿದಳು. ‘ ನನ್ನ ಮೇಲೆ ನಿನಗೆ ಹಿಂದಿನ ಪ್ರೀತಿ ಇಲ್ಲ, ನಾನು ಮೋಸ ಹೋದೆ. ಈಗ ನಾನು ನಿನಗೆ ಬೇಡ, ಮಗುವಿನ ಜತೆ ನಾನು ಸಾಯುತ್ತೇನೆ ‘ ಎಂದು ಪದೇ ಪದೇ ಸಂದೇಶ ಕಳಿಸಲು ಮತ್ತು ಕರೆ ಮಾಡಲು ಶುರುಮಾಡಿದ್ದಾಳೆ.

ಸುಕೇಶ್ ಕೂಡ ಆಕೆಗೆ ‘ ಬಾಬಾ ನಾನು ಎಲ್ಲೂ ಹೋಗಿಲ್ಲ ನಾನು ಸಾಯುವರೆಗೆ ನಿನಗೆ ಇರ್ತೇನೆ ‘ ಮುಂತಾದ ಮೆಸೇಜ್ ರಿಪ್ಲೈ ಹಾಕಿದ್ದ. ಅದರಲ್ಲೂ ಅದೊಂದು ಮೆಸೇಜ್ ಕೌಸಲ್ಯಾಳನ್ನು ಬಹುವಾಗಿ ಕಾಡಿತ್ತು. ಅದುವೇ ಸುಕೇಶ್ ಕೌಸಲ್ಯಾ ಅತ್ತಿಗೆಗೆ ಕಳಿಸಿದ್ದ ‘ ನನ್ನ ಮಗ ನಿನ್ ಜತೆ ಇದ್ದಾನಲ್ಲ ‘ ಅನ್ನೋ ಮೆಸೇಜ್ !

ಸತ್ಯ ವಿಚಾರ ಬಯಲಾಗುತ್ತಿದ್ದಂತೆ ಪ್ರೀತಿಸಿದ ತಪ್ಪು, ಆತನ ಮೇಲಿಟ್ಟ ನಂಬಿಕೆ ಎಲ್ಲವನ್ನೂ ಕಳೆದುಕೊಂಡು ನಿಸ್ಸಹಾಯಕಳಾದ ಕೌಶಲ್ಯ ಮಾನಸಿಕವಾಗಿ ನೊಂದು ಒಂದು ನಿರ್ಧಾರಕ್ಕೆ ಬಂದಿದ್ದಳು. ಎಂದಿನಂತೆ ಕಚೇರಿ ಕೆಲಸಕ್ಕೆ ತೆರಳಿದ ಕೌಶಲ್ಯ ವಾಪಸ್ಸು ಬರುವಾಗ ಸೀದಾ ಫರ್ಟಿಲೈಸರ್ ಅಂಗಡಿಗೆ ಹೋಗಿದ್ದಳು. ಅಲ್ಲಿ ಕಳೆನಾಶಕವನ್ನು ಖರೀದಿ ಮಾಡಿದ್ದಳು. ನಂತ್ರ ಆಕೆ ವಿಷ ಕುಡಿದಿದ್ದು, ತನ್ನ ತಾಯಿ ಮನೆಗೆ ಬಂದು ವಿಚಾರ ತಿಳಿಸಿದ್ದಾಳೆ. ಇದರಿಂದ ಗಾಬರಿಗೊಂಡ ಆಕೆಯ ತಾಯಿ ಹಾಗೂ ಇತರರು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಮೂರು ದಿನಗಳ ಕಾಲ ನಡೆದ ಸಾವು ಬದುಕಿನ ಹೋರಾಟದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೌಸಲ್ಯ ಕೊನೆಯುಸಿರಿಳೆದಿದ್ದಾಳೆ.

ಅವತ್ತು ಆಕೆಯ ಅಂತಿಮ ಸಂಸ್ಕಾರಕ್ಕೆ ಕಾಲೇಜಿನ ಗೆಳೆಯ-ಗೆಳತಿಯರಿಂದ ಹಿಡಿದು, ಆಕೆ ಸಂಪಾದಿಸಿದ್ದ ಗೆಳೆತನ ಹಾಜರಿತ್ತು. ಕಾಲೇಜು ದಿನಗಳಲ್ಲಿ ಅವರಿಬ್ಬರ ಪ್ರೀತಿ ಕಂಡಿದ್ದ ಹಲವರು ಆತನಿಗೆ ಹಿಡಿಶಾಪ ಹಾಕಿತ್ತು. ಸದ್ಯ ಆಕೆಯ ಪತಿ ಸುಕೇಶ್ ನಾಪತ್ತೆಯಾಗಿದ್ದು, ಮೊಬೈಲ್ ಲೊಕೇಶನ್, ಮೊಬೈಲ್ ಗೆ ಬಂದಿದ್ದ ಸಂದೇಶಗಳನ್ನು ಜಾಡು ಹಿಡಿದ ಪೊಲೀಸರು ಆತನ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

ದುರಂತ ಎಂದರೆ, ಈಗಲೂ ಮಗ ಸುಕೇಶಂದ್ದು ಏನೂ ತಪ್ಪಿಲ್ಲ ಅನ್ನುತ್ತಿದೆ ಆತನ ಕುಟುಂಬ. ಇಷ್ಟೆಲ್ಲಾ ಆದ ಮೇಲೂ ನಾವು ಕೌಸಲ್ಯಾಳನ್ನು ಅಥವಾ ಇಂತಹದೇ ನಿರ್ಧಾರ ತೆಗೆದುಕೊಳ್ಳುವ ಹುಡುಗಿಯರನ್ನು ಒಂದು ಪ್ರಶ್ನೆ ಕೇಳಲೇಬೇಕಿದೆ: ಇಂಥ ನಿರ್ಧಾರಗಳ ಬದಲಿಗೆ ಬೇರೆ ಯಾವುದೇ ಆಲ್ಟರ್ನೇಟಿವ್ ನಿರ್ಧಾರ ಯಾಕೆ ತೆಗೆದುಕೊಳ್ಳಬಾರದು ?!!

 

ಇದನ್ನು ಓದಿ: Malaika Arora: ಪೋಸ್ಟ್ ಕೇವಲ ನೆಪ, ಮೈ ತೋರಿಸೋದೆ ಅನುಕ್ಷಣದ ಜಪ !

Leave A Reply

Your email address will not be published.