Madhya Pradesh: ಸಾರ್ವಜನಿಕ ವಿವಾಹ ಸಂದರ್ಭದಲ್ಲಿ ನಡೆಸ್ತಾರಾ ಪ್ರೆಗ್ರೆನ್ಸಿ ಟೆಸ್ಟ್: ಶಾಕಿಂಗ್ ನ್ಯೂಸ್ !
Mukhyamantri Kanyadaan Yojana : ಏಪ್ರಿಲ್ 22 ರಂದು ‘ಮುಖ್ಯಮಂತ್ರಿ ಕನ್ಯಾದಾನ ಯೋಜನೆ’ಯಡಿ (Mukhyamantri Kanyadaan Yojana) ಮಧ್ಯಪ್ರದೇಶದ (Madhya Pradesh) ದಿಂಡೋರಿಯಲ್ಲಿ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ಆದರೆ, ಆಶ್ಚರ್ಯವೆಂದರೆ ವಿವಾಹಕ್ಕೆ ಆಗಮಿಸಿದ್ದ ಯುವತಿಯರಿಗೆ ಇಲ್ಲಿ ಪ್ರೆಗ್ರೆನ್ಸಿ ಟೆಸ್ಟ್ (Pregnancy test) ನಡೆಸಲಾಗಿದೆ.
ಸಾಮೂಹಿಕ ವಿವಾಹಕ್ಕೆ ಆಗಮಿಸಿದ್ದ ಯುವತಿಯರಲ್ಲಿ 219 ಜನರಿಗೆ
ಗರ್ಭಧಾರಣೆಯ ಪರೀಕ್ಷೆಯನ್ನು ನಡೆಸಲಾಗಿದ್ದು, ಇದರಲ್ಲಿ 4 ವಧುಗಳು ಗರ್ಭಿಣಿಯರು ಎಂದು ತಿಳಿದುಬಂದಿದೆ. ಹಾಗಾಗಿ ಅವರನ್ನು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸೇರಿಸಿಕೊಳ್ಳಲಾಗಿಲ್ಲ. ಸದ್ಯ ಗರ್ಭಧಾರಣೆ ಪರೀಕ್ಷೆಯ ಬಗ್ಗೆ ವಿವಾದ ಸೃಷ್ಟಿಯಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಹಾಗೂ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ (ಸಿಪಿಐ-ಎಂ) ಇದು ಮಹಿಳೆಯರಿಗೆ ಮಾಡಿದ ಅವಮಾನ ಎಂದಿದ್ದು, ತನಿಖೆಗೆ ಒತ್ತಾಯಿಸಿದೆ.
ಈ ಘಟನೆ ನಂತರ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಬಗ್ಗೆ ತನಿಖೆ ನಡೆಸಲು ಒತ್ತಾಯಿಸಿದ್ದಾರೆ. “ಯಾರ ಆದೇಶದ ಮೇರೆಗೆ ಮಧ್ಯಪ್ರದೇಶದ ಹೆಣ್ಣು ಮಕ್ಕಳನ್ನು ಈ ರೀತಿ ಅವಮಾನಿಸಲಾಗಿದೆ?
ಬಡವರ ಮತ್ತು ಬುಡಕಟ್ಟು ಸಮುದಾಯದ ಮಗಳಿಗೆ ಮುಖ್ಯಮಂತ್ರಿಗಳ ದೃಷ್ಟಿಯಲ್ಲಿ ಘನತೆ ಇಲ್ಲವೇ?” ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಪ್ರಶ್ನಿಸಿದ್ದಾರೆ.
“ಶಿವರಾಜ್ ಸರ್ಕಾರ ಕಾಲದಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ವಿಷಯದಲ್ಲಿ ಮಧ್ಯಪ್ರದೇಶ ಈಗಾಗಲೇ ದೇಶದಲ್ಲಿ ಅಗ್ರಸ್ಥಾನದಲ್ಲಿದೆ. ಇಡೀ ಪ್ರಕರಣದ ಬಗ್ಗೆ ನ್ಯಾಯಯುತ ಮತ್ತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ನಾನು ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸುತ್ತೇನೆ. ಈ ವಿಷಯವು ಗರ್ಭಧಾರಣೆಯ ಪರೀಕ್ಷೆಯ ಬಗ್ಗೆ ಮಾತ್ರವಲ್ಲ, ಇಡೀ ಸ್ತ್ರೀ ಜಾತಿಯ ಬಗ್ಗೆ ದುರುದ್ದೇಶಪೂರಿತ ಮನೋಭಾವದ ಬಗ್ಗೆಯೂ ಇದೆ” ಎಂದು ಕಮಲ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ದಿಂಡೋರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಕಾಸ್ ಮಿಶ್ರಾ, “ ಗಡಸರಾಯ್‌ನಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ 219 ಜೋಡಿಗಳಿಗೆ ಆನುವಂಶಿಕ ಕಾಯಿಲೆ ‘ಸಿಕಲ್ ಸೆಲ್’ಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಸೂಚಿಸಲಾಗಿದೆ.
ಸಿಕೆಲ್ ಸೆಲ್ ಕಾಯಿಲೆಯ ತನಿಖೆಯ ಸಮಯದಲ್ಲಿ, ನಾಲ್ವರು ಹುಡುಗಿಯರು ತಮ್ಮ ಮಾಸಿಕ ಋತುಬಂಧ ನಿಂತುಹೋಗಿರುವ ಕುರಿತು ಮಾಹಿತಿ ನೀಡಿದ್ದರು. ಹಾಗಾಗಿ ವೈದ್ಯರು ಗರ್ಭಧಾರಣೆಯ ಪರೀಕ್ಷೆಯನ್ನು ನಡೆಸಿದರು. ಈ ಬಗ್ಗೆ ಆಡಳಿತ ಮಟ್ಟದಿಂದ ಯಾವುದೇ ಸೂಚನೆ ನೀಡಿಲ್ಲ. ಸಿಕೆಲ್ ಸೆಲ್ ರೋಗ ಪತ್ತೆಹಚ್ಚಲು
ಇರುವ ವಿಧಾನಗಳು ವೈದ್ಯರಿಗೆ ಬಿಟ್ಟದ್ದು. ವೈದ್ಯರ ವರದಿ ನಂತರ, ಸಾಮೂಹಿಕ ವಿವಾಹದಲ್ಲಿ ಅಂತಹ ನಾಲ್ಕು ಜೋಡಿಗಳನ್ನು ಸೇರಿಸಲಾಗಿಲ್ಲ” ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಡಿ.ಶರ್ಮಾ “ ಸಿಕಲ್ ಸೆಲ್ ಅನೀಮಿಯಾ ಬಗ್ಗೆ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಲಾಗಿದೆ. ದಿಂಡೂರಿನ ಆಡಳಿತ ಮಂಡಳಿಯೂ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಆದರೆ, ಈ ಬಗ್ಗೆ ಕಾಂಗ್ರೆಸ್ ನಾಯಕರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ: Mangaluru: ಮಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ: ಸ್ಥಳ, ದಿನಾಂಕ ಗುರ್ತು ಹಾಕಿಕೊಳ್ಳಿ