Mukesh Ambani: ಮುಖೇಶ್ ಅಂಬಾನಿ ಉದ್ಯೋಗಿಗೆ ಕೊಟ್ರು 1500 ಕೋಟಿ ರೂ. ಮನೆ ಗಿಫ್ಟ್: ಕೊಟ್ಟದ್ದು ಯಾಕ್ ಗೊತ್ತಾ ?

Mukesh Ambani: ಮುಖೇಶ್ ಅಂಬಾನಿ ಅವರ ಆಂಟಿಲಿಯಾದ ಎಂಬ ಮನೆ ದಶ ಸಹಸ್ರ ಕೋಟಿ ಬೆಳೆಬಾಳುವಂತದ್ದು. ಅದರ ಬೆಲೆ 15,000 ಕೋಟಿ ರೂಪಾಯಿ. ಅದರ ಬಗ್ಗೆ ನೀವು ಈಗಾಗಲೇ ಓದಿದ್ದೀರಿ. ಓದಿ ಅಚ್ಚರಿಪಟ್ಟಿದ್ದೀರಿ. ಭಾರತದ ಶ್ರೀಮಂತ ವ್ಯಕ್ತಿಯ ವೈಭವಯುಪೇತ ಜೀವನ ಕಂಡು ಬೆರಗಾಗಿದ್ದೀರಿ. ಆದರೆ ಅದೇ ರಿಲಯನ್ಸ್ ಸಂಸ್ಥೆಯ ಧಣಿ ಮುಖೇಶ್ ಅಂಬಾನಿ (Mukesh Ambani) ತನ್ನ ಉದ್ಯೋಗಿಯೊಬ್ಬರಿಗೆ ಮುಂಬೈನಲ್ಲಿ 1500 ಕೋಟಿ ರೂ. ಮೌಲ್ಯದ ಮನೆಯನ್ನು ಉಡುಗೊರೆ ನೀಡಿದ್ದಾರೆ ಎಂದರೆ ನೀವು ನಂಬ್ತೀರಾ ? ಯೆಸ್, ನಂಬಲೇ ಬೇಕು, ಅಂತಹಾ ಬೃಹತ್ ಮನೆಯನ್ನು ತನ್ನ ಒಂದು ಉದ್ಯೋಗಿಗೆ ನೀಡಿದ್ದಾರೆ ಮುಕೇಶ್ ಅಂಬಾನಿ.

ಅದೇನು ಸಾಮಾನ್ಯ ಮನೆಯಲ್ಲ. ಒಂದೆರಡು ಅಥವಾ 10 ನೂರು ಕೋಟಿಗಳ ಮೌಲ್ಯದ ಮಹಲಲ್ಲ. ಅದು ಬರೋಬ್ಬರಿ 22 ಅಂತಸ್ತುಗಳ ಮನೆ. ಒಟ್ಟು 1.7 ಲಕ್ಷ ಚದರ ಅಡಿ ವಿಸ್ತೀರ್ಣದ ಬೃಹತ್ ಮಹಾಮನೆ. ಈ ಮುಖೇಶ್ ಅಂಬಾನಿ ಈ ಮನೆಯನ್ನು ಉಡುಗೊರೆಯಾಗಿ ನೀಡಿದ್ದು ಯಾರಿಗೆ ಗೊತ್ತಾ ?

ದಿಗ್ಗಜ ಮುಖೇಶ್ ಅಂಬಾನಿ ಮನೆಯಲ್ಲಿರುವ ಕೆಲಸಗಾರರಿಗೆ ಕೂಡ ತಿಂಗಳಿಗೆ ಲಕ್ಷಾಂತರ ರೂಪಾಯಿ ವೇತನ ನೀಡಲಾಗುತ್ತಿದೆ ಎಂಬ ವಿಚಾರ ಈಗಾಗಲೇ ಎಲ್ಲೆಡೆ ವರದಿಯಾಗಿದೆ. ಮುಖೇಶ್ ಅಂಬಾನಿ ತನ್ನ ರಿಲಯನ್ಸ್ ಸಂಸ್ಥೆಯ ಉದ್ಯೋಗಿಗಳಿಗೂ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟಿದ್ದಾರೆ. ಆದರೆ ಈ ಓರ್ವ ಉದ್ಯೋಗಿಗೆ ಮುಕೇಶ್ ಅಂಬಾನಿಯವರು (Mukesh Ambani) ಕೊಟ್ಟ ಉಡುಗೊರೆ ಇದೆಯಲ್ಲ, ಇಂಥ ಬೃಹತ್ ಗಿಫ್ಟ್ ಅನ್ನು ಈತನಕ ಯಾರು ನೀಡಿರಲಾರರು, ಮುಂದೆಯೂ ನೀಡುವುದಕ್ಕೆ ಅಸಾಧ್ಯ ಎನ್ನುವಂತಹ ಕೊಡುಗೆಯನ್ನು ತಮ್ಮ ಆಪ್ತ ನಂಬಿಕಸ್ತ ಉದ್ಯೊಗಿಗೆ ಮುಖೇಶ್ ಅಂಬಾನಿ ನೀಡಿದ್ದಾರೆ.

ಉದ್ಯೋಗಿಯೊಬ್ಬರಿಗೆ ಮುಖೇಶ್ ಅಂಬಾನಿ (Mukesh Ambani) ಮುಂಬೈನಲ್ಲಿ ಮನೆಯೊಂದನ್ನು ಇತ್ತೀಚೆಗೆ ಉಡುಗೊರೆಯಾಗಿ ನೀಡಿದ್ದಾರೆ. ಅಂದಹಾಗೇ ಈ ಮನೆಯ ಮೌಲ್ಯ ಕೇಳಿದ್ರೆ ನೀವು ಶಾಕ್ ಆಗದೆ ಇದ್ರೆ ಮತ್ತೆ ಕೇಳಿ. ಹೌದು, ಮುಖೇಶ್ ಅಂಬಾನಿ ಉಡುಗೊರೆಯಾಗಿ ನೀಡಿರುವ ಮನೆಯ ಮೌಲ್ಯ ಬರೋಬ್ಬರಿ 1500 ಕೋಟಿ ರೂ !! ಈ ಅಬ್ಬರದ ಮನೆಯನ್ನು ಮುಖೇಶ್ ಅಂಬಾನಿ ಉಡುಗೊರೆಯಾಗಿ ನೀಡಿರೋದು ತನ್ನ ಸಂಬಂಧಿಕರಿಗೆ ಅಲ್ಲ ಯಾವುದೋ ಬಿಸಿನೆಸ್ ಪಾರ್ಟ್ನರ್ ಗೆ ಕೂಡ ಅಲ್ಲ. ಅದನ್ನು ಕೊಟ್ಟದ್ದು ಯಕಶ್ಚಿತ್ ಮನೋಜ್ ಮೋದಿ ತನ್ನ ಉದ್ಯೋಗಿಗೆ.

ಮನೋಜ್ ಮೋದಿಯನ್ನು ಮುಖೇಶ್ ಅಂಬಾನಿಯ ಬೃಹತ್ ಸಾಮ್ರಾಜ್ಯದಲ್ಲಿ ಅವರ ಬಲಗೈ ಬಂಟ ಎಂದೇ ಕರೆಯಲಾಗುತ್ತದೆ. ರಿಲಯನ್ಸ್ ಸಂಸ್ಥೆಯಲ್ಲಿ ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಮನೋಜ್ ಮೋದಿ ಅಂಬಾನಿ ಕುಟುಂಬದೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಮುಕೇಶ್ ಅಪ್ಪ, ರಿಲಯನ್ಸ್ ಸ್ಥಾಪಕ ಧೀರೂಬಾಯಿ ಅಂಬಾನಿ ಅವರ ಕಾಲದಿಂದಲೂ ರಿಲಯನ್ಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಿಲಯನ್ಸ್ ಸಾಮ್ರಾಜ್ಯದ ವಿಸ್ತರಣೆಯಲ್ಲಿ ಮನೋಜ್ ಮೋದಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗುತ್ತಿದೆ. ಸರಳ ಹಾಗೂ ಮೃದು ವ್ಯಕ್ತಿತ್ವದ ಅವರು ವ್ಯಾಪಾರ, ಒಪ್ಪಂದಗಳ ವಿಷಯದಲ್ಲಿ ಬೆಣ್ಣೆಯಲ್ಲಿ ಕೂದಲು ಎಳೆದು ತೆಗೆದಂತೆ ನಯವಾಗಿ ಕೆಲಸ ಮಾಡಿಸಿಕೊಳ್ಳುವ ಕಲೆ ಬಲ್ಲವರು. ರಿಲಯನ್ಸ್ ಸಂಸ್ಥೆಗೆ ನಷ್ಟವಾಗದ ರೀತಿಯಲ್ಲಿ ಅನೇಕ ಒಪ್ಪಂದಗಳನ್ನು ಅವರು ಕುದುರಿಸಬಲ್ಲ ವೃತ್ತಿ ನಿಪುಣ ಈ ಮೋದಿ.

ಮನೋಜ್‌ ಮೋದಿ ಅವರಿಗೆ ಮುಖೇಶ್ ಅಂಬಾನಿಯವರು ಉಡುಗೊರೆಯಾಗಿ ನೀಡಿರುವ ಮನೆ 22 ಅಂತಸ್ತುಗಳನ್ನು ಹೊಂದಿದ್ದು, 1.7 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದೆ. ಈ ಮನೆ ಮುಂಬೈ ನೆಪಿಯನ್ ಸೀ ರೋಡ್ ನಲ್ಲಿದೆ. ಮ್ಯಾಜಿಕ್ ಬ್ರಿಕ್ಸ್ ಡಾಟ್ ಕಾಮ್ ವೆಬ್ ಸೈಟ್ ಹೇಳಿಕೆಯ ಪ್ರಕಾರ ಈ ಮನೆಯ ಮೌಲ್ಯ 1500 ಕೋಟಿ ರೂಪಾಯಿ !!!

ಅಷ್ಟೇ ಅಲ್ಲ ವಿಶೇಷ. ಮುಖೇಶ್‌ ಅಂಬಾನಿ ಮತ್ತು ಮನೋಜ್‌ ಮೋದಿ ಇಬ್ಬರ ಮಧ್ಯೆ ಒಂದು ವಿಶೇಷವಾದ ಬಾಂಧವ್ಯವಿದೆ. ಅವರಿಬ್ಬರೂ ಒಂದೇ ಸ್ಕೂಲ್‌ನಲ್ಲಿ, ಒಟ್ಟಿಗೇ ಒಂದೇ ಕ್ಲಾಸ್‌ನಲ್ಲಿ ಓದಿದವರು. ಇಬ್ಬರೂ ಮುಂಬಯಿಯ ಹಿಲ್‌ ಗ್ರೇಂಜ್ ಸ್ಕೂಲ್‌ನ ಸಹಪಾಠಿಗಳು. ತಮ್ಮ ಕೆಮಿಕಲ್ ಇಂಜಿನಿಯರಿಂಗ್ ಅನ್ನು ಕೂಡ ಮುಂಬೈ ವಿಶ್ವವಿದ್ಯಾಲಯದಲ್ಲಿ ಜೊತೆಯಾಗಿ ಪೂರ್ಣಗೊಳಿಸಿದ್ದರು. 1980 ರಲ್ಲಿ ಮನೋಜ್ ಮೋದಿ ರಿಲಯನ್ಸ್ ಸಂಸ್ಥೆಗೆ ಸೇರುತ್ತಾರೆ. ಆಗ ಧೀರೂಬಾಯಿ ಅಂಬಾನಿ ಅವರು ರಿಲಯನ್ಸ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದರು. ಮನೋಜ್ ಮೋದಿ ತಂದೆ ಹರಿಜೀವನ್‌ದಾಸ್‌ ಅವರು ಕೂಡ ಮುಖೇಶ್‌ ತಂದೆ ಧೀರುಭಾಯ್‌ ಜೊತೆ ಕೆಲಸ ಮಾಡುತ್ತಿದ್ದರು. ಈಗ ಮನೋಜ್‌ ಮುಖೇಶ್‌ರೊಂದಿಗೆ ಹಾಗೂ ಅವರ ಮಕ್ಕಳಾದ ಇಶಾ ಮತ್ತು ಆಕಾಶ್‌ರೊಂದಿಗೆ ಕೆಲಸ ಮಾಡುತ್ತಾ ರಿಲಯನ್ಸ್ ಕಂಪನಿಯ ಯಶಸ್ಸಿಗೆ ದುಡಿಯುತ್ತಿದ್ದಾರೆ.

ಮನೋಜ್‌ ಮೋದಿ ಪ್ರಸ್ತುತ ರಿಲಯನ್ಸ್ ರಿಟೇಲ್ ಹಾಗೂ ರಿಲಯನ್ಸ್ ಜಿಯೋ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಖೇಶ್ ಅಂಬಾನಿ ಅವರು ಮನೋಜ್ ಮೋದಿಗೆ ಉಡುಗೊರೆಯಾಗಿ ನೀಡಿರುವ ಮನೆಯಲ್ಲಿ ಮನೋಜ್ ಬಾಯ್ ಮಕ್ಕಳು ಸೊಸೆಯಂದಿರು ವಾಸ್ ಇತರ ಹತ್ತಿರದ ಕುಟುಂಬಸ್ಥರು ಒಟ್ಟಿಗೆ ಆದರೆ ಹಲವು ಅಂತಸ್ತುಗಳಲ್ಲಿ ವಾಸಿಸಲಿವೆ.

 

ಇದನ್ನೂ ಓದಿ: Amala Paul : ಬೆತ್ತಲೆಯಾಗಿ ನಟಿಸಿರೋ ನನಗೆ ‘ಲಿಪ್ ಲಾಕ್’ ಯಾವ ಲೆಕ್ಕ! ಪಡ್ಡೆಗಳಿಗೆ ಅಮಲೇರಿಸಿದ ಅಮಲಾ ಪೌಲ್!

Leave A Reply

Your email address will not be published.