Congress: ದಕ್ಷಿಣ ಕನ್ನಡಕ್ಕೆ ಮೆಡಿಕಲ್ ಕಾಲೇಜು ಕೊಡೋದಾಗಿ ಬಿಗ್ ಆಫರ್ ನೀಡಿದ ಮಲ್ಲಿಕಾರ್ಜುನ ಖರ್ಗೆ
Mallikarjuna Kharge: ದಕ್ಷಿಣ ಕನ್ನಡ ಕಮಲ ಪಾಳಯದ ಭದ್ರ ಕೋಟೆ ಎಂಬುದು ಗೊತ್ತಿರುವ ವಿಚಾರವೇ! ಈ ನಡುವೆ ರಾಜಕೀಯ ಸಮರಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಜನರ ಮನವೊಲಿಸಲು ನಾನಾ ಬಗೆಯ ಆಶ್ವಾಸನೆ ನೀಡುವುದು ಮಾಮೂಲಿ. ಇದರ ನಡುವೆ ರಾಜಕಾರಣಿಗಳ ಭರವಸೆಗಳು ಎಲೆಕ್ಷನ್ ಮುಗಿಯುವವರೆಗಷ್ಟೇ ಸೀಮಿತ ಎಂಬ ಸತ್ಯ ಜನಸಾಮಾನ್ಯರಿಗೆ ಗೊತ್ತಿರುವುದರಿಂದ ಯಾರ ಭರವಸೆಗೂ ಹೆಚ್ಚು ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸದಲ್ಲಿ ನಿರತರಾಗುವುದು ವಾಡಿಕೆ.
ಸದ್ಯ, ಈ ವಾರದಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಕರಾವಳಿಯಲ್ಲಿ ತಮ್ಮ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಿದ್ದತೆ ನಡೆಸುತ್ತಿದ್ದಾರೆ. ಇದೀಗ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು (Mallikarjuna Kharge) ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಅನೇಕ ಅಭಿವೃದ್ದಿ ಕಾರ್ಯಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿರುವ ಮಲ್ಲಿಕಾರ್ಜುನ ಖರ್ಗೆಯವರು ಸುಳ್ಯದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಸಂದರ್ಭ ಮುಖ್ಯಮಂತ್ರಿ ಯಾರೇ ಆದರೂ ಕೂಡ ಕೊಟ್ಟ ಭರವಸೆಯನ್ನು ಈಡೇರಿಸುವತ್ತ ಗಮನ ನೀಡಬೇಕು. ಕಾಂಗ್ರೆಸ್ ಪಕ್ಷದಲ್ಲಿರುವವರು ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಬೇಕು. ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವುದಾಗಿ ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಘೋಷಣೆ ಮಾಡಿದರು.
ಇದನ್ನೂ ಓದಿ: ಸಾರ್ವಜನಿಕ ವಿವಾಹ ಸಂದರ್ಭದಲ್ಲಿ ನಡೆಸ್ತಾರಾ ಪ್ರೆಗ್ರೆನ್ಸಿ ಟೆಸ್ಟ್!