Dearness Allowance: Code Of Conduct ಮುಗಿದ ತಕ್ಷಣವೇ ಸಿಗಲಿದೆ ನೌಕರರಿಗೆ ತುಟ್ಟಿ ಭತ್ತೆ!

Dearness Allowance : ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನವು ಮೇ 10ರಂದು ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಸದ್ಯ ಕರ್ನಾಟಕ ವಿಧಾನಸಭೆಯಲ್ಲಿ ಚುನಾವಣೆಯ (election) ಸಿದ್ಧತೆ ಭರದಿಂದ ಸಾಗುತ್ತಿದ್ದು, ಚುನಾವಣೆ ಹಿನ್ನೆಲೆಯಲ್ಲಿ
ಚುನಾವಣಾ ನೀತಿ ಸಂಹಿತೆ ಪೂರ್ಣಗೊಂಡ ಬಳಿಕ ರಾಜ್ಯ ಸರಕಾರಿ ನೌಕರರಿಗೆ ತುಟ್ಟಿ ಭತ್ಯೆ (Dearness Allowance) ನೀಡುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಚುನಾವಣ ಆಯೋಗ ತಿಳಿಸಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ತಿಳಿಸಿದ್ದಾರೆ.

ಷಡಾಕ್ಷರಿ ಅವರ ಪ್ರಕಾರ, ಮೇ 13ರಂದು ರಾಜ್ಯದಲ್ಲಿ ಚುನಾವಣ ಸಂಹಿತೆ ಕೊನೆಗೊಳ್ಳಲಿದ್ದು, ಬಳಿಕ ಶೇ.4ರಷ್ಟು ತುಟ್ಟಿ ಭತ್ಯೆ ಯ ಆದೇಶವನ್ನು ಈ ವರ್ಷದ ಜನವರಿ 1ರಿಂದಲೇ ಅನ್ವಯ ಆಗುವಂತೆ ಆರ್ಥಿಕ ಇಲಾಖೆ ಆದೇಶ ಹೊರಡಿಸಲಿದೆ ಎಂದು ಜನರಿಗೆ ಸ್ಪಷ್ಟಪಡಿಸಿದ್ದಾರೆ.

ಮುಖ್ಯವಾಗಿ 1ರಿಂದ ಶೇ.17ರಷ್ಟು ಮಧ್ಯಾಂತರ ಪರಿಹಾರ ಮೊತ್ತವನ್ನು ಎಪ್ರಿಲ್ -2023ರ ವೇತನದಲ್ಲಿ ನೀಡಲು ಎಚ್‌ಆರ್‌ಎಂಎಸ್ ಅವಕಾಶ ಕಲ್ಪಿಸಿದ್ದು, ಸರಕಾರಿ ನೌಕರರು ಎಪ್ರಿಲ್ -2023ರ ತಿಂಗಳ ವೇತನದಲ್ಲಿ ಮಧ್ಯಾಂತರ ಪರಿಹಾರ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ಸದ್ಯ ಚುನಾವಣಾ ನೀತಿಸಂಹಿತೆ ಪೂರ್ಣಗೊಂಡ ನಂತರದಲ್ಲಿ ರಾಜ್ಯ ಸರಕಾರಿ ನೌಕರರಿಗೆ ತುಟ್ಟಿ ಭತ್ಯೆ ನೀಡುವ ಭರವಸೆ ನೀಡಲಾಗಿದೆ.

 

ಇದನ್ನು ಓದಿ: Plants: ಯಾವುದೇ ಕಾರಣಕ್ಕೂ ಈ ಗಿಡಗಳನ್ನು ಮನೆಯ ಹತ್ತಿರ ನೆಡಬೇಡಿ, ಪಾಪಗಳು ಸುತ್ತಿಕೊಳ್ಳುತ್ತೆ! 

Leave A Reply

Your email address will not be published.