Arecanut: ಅಡಿಕೆ ಬೆಲೆಯಲ್ಲಿ ಏರಿಕೆ ಸಂಭವ: ಎಲ್ಲಿಯತನಕ ಏರುತ್ತೆ, ಯಾವಾಗ ಇಳಿಯುತ್ತೆ, ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ!

Arecanut: ಮಾರುಕಟ್ಟೆಯಲ್ಲಿ (Market) ಬೆಳೆಗಳ ಬೆಲೆಯಲ್ಲಿ ಪ್ರತಿದಿನ ಏರಿಳಿತ ಆಗುತ್ತಲೇ ಇರುತ್ತದೆ. ಕೆಲವೊಮ್ಮೆ ಆಗಸಕ್ಕೆ ಏರಿದರೆ, ಇನ್ನೂ ಕೆಲವೊಮ್ಮೆ ಪಾತಾಳದಲ್ಲಿರುತ್ತದೆ. ಸದ್ಯ ಬಿಸಿಲ ಬೇಗೆ ಹೆಚ್ಚಿದ್ದು, ಸೂರ್ಯ ಮುನಿಸಿಕೊಂಡನೆಂಬಂತೆ ದಿನೇದಿನೇ ಹೆಚ್ಚೆಚ್ಚು ಪ್ರಕಾಶಮಾನವಾಗಿ ಬೆಳಗುತ್ತಿದ್ದಾನೆ. ಇದರಿಂದ ರೈತರು (former) ಕಂಗೆಟ್ಟಿದ್ದಾರೆ. ಕೃಷಿ ಭೂಮಿಗೆ ನೀರಿನ ಕೊರತೆ ಉಂಟಾಗಿದ್ದು, ಬೆಳೆದ ಬೆಳೆಗಳು ಕರಕಲಾಗುತ್ತಿದೆ. ಈ ಮಧ್ಯೆ ಅಡಿಕೆ (Arecanut) ಮಾರುಕಟ್ಟೆ ಕೆಲವೇ ದಿನಗಳಲ್ಲಿ ತುಟ್ಟಿಯಾಗಲಿದೆ ಎಂದು ಹೇಳಲಾಗಿದೆ.

ಹೌದು, ರಾಜ್ಯದಲ್ಲಿ ಅಡಿಕೆ ಬೆಳೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ವಾರ ಕೆಂಪಡಿಕೆ ಮಾರುಕಟ್ಟೆ ಪಾತಾಳಕ್ಕೆ ತಲುಪಿತ್ತು. ಆದರೆ, ಇದೀಗ ಚೇತರಿಸಿಕೊಂಡು ಮುಗಿಲಿನತ್ತ ಮುಖ ಮಾಡಿದೆ. ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಯಲ್ಲಿ ಸುಧಾರಣೆ ಆಗಿದ್ದು, ಈಗಾಗಲೇ ರಾಶಿ ಅಡಿಕೆ ಗರಿಷ್ಟ ಖರೀದಿ ದರ 49,600 ದಾಟಿದೆ ಎಂದು ತಿಳಿದುಬಂದಿದೆ. ಚಾಲಿ ಮಾರುಕಟ್ಟೆಯಲ್ಲಿಯೂ ಅಡಿಕೆ ಬೆಲೆಯಲ್ಲಿ ಏರಿಕೆ ಕಂಡಿದೆ.

ಅಡಿಕೆ ಧಾರಣೆ (Arecanut price) ಏರಿಕೆಯಾಗಲು ಕಾರಣ ಏನು ಗೊತ್ತಾ?

ಸ್ಥಳೀಯ ವ್ಯಾಪಾರಿಗಳಿಗೆ ಉತ್ತರ ಭಾರತದ ಖರೀದಿದಾರರಿಂದ ಬೇಡಿಕೆ ಹೆಚ್ಚಿರುವ ಹಿನ್ನೆಲೆ ಅಡಿಕೆ ಧಾರಣೆ ಏರಿಕೆಯಾಗುತ್ತಲಿದೆ. ಈ ಬೇಡಿಕೆ ಹೀಗೇ ಮುಂದುವರಿದರೆ ಬೆಲೆ ಕೂಡ ಏರುತ್ತಾ ಹೋಗುತ್ತದೆ. ಸದ್ಯ ಚುನಾವಣೆ ಹಿನ್ನೆಲೆ ದರ ಏರಿಕೆ ಆಗುವುದಿಲ್ಲ ಅಥವಾ ಆಗತ್ತೆ ಎಂದು ನಿಖರವಾಗಿ ಹೇಳಲಾಗುವುದಿಲ್ಲ. ಚುನಾವಣಾ ನೀತಿ ಸಂಹಿತೆಯ ಕಾರಣ ಕಪ್ಪು ಹಣದ ಚಲಾವಣೆ ಆಗುವುದಕ್ಕೆ ಅಡ್ಡಿಯಾಗುತ್ತದೆ, ಹಾಗಾಗಿ ಹಣದ ಕೊರತೆ ಉಂಟಾಗುತ್ತದೆ. ಹಾಗಾಗಿ ಅಡಿಕೆ ದರ ಇಳಿಕೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ವ್ಯಾಪಾರಿಗಳು ಈಗಾಗಲೇ ಈ ದೋ- ನಂಬರ್ ವ್ಯವಹಾರವನ್ನು ಕಡಿಮೆ ಮಾಡಿದ್ದಾರೆ. ಕಾರಣ ಸಿಕ್ಕಿಬಿದ್ದರೆ ದಂಡ ಕಟ್ಟಬೇಕಾಗುತ್ತದೆ. ನೇರ ವ್ಯವಹಾರಕ್ಕೆ ಚುನಾವಣೆ ಅಡ್ಡಿಯಾಗಲಾರದು. ಈ ಕಾರಣಕ್ಕಾಗಿ ಮತ್ತಷ್ಟು ದರ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ವ್ಯಾಪಾರಸ್ಥರ ಸ್ಟಾಕ್ ಕ್ಲೀಯರ್ ಆಗುವವರೆಗೂ ಹಾಗೂ ಉತ್ತರ ಭಾರತದ ಖರೀದಿದಾರರಿಗೆ ಎರಡು ಮೂರು ತಿಂಗಳಿಗೆ ಬೇಕಾಗುವಷ್ಟು ಸ್ಟಾಕು ಆಗುವ ತನಕ ದರ ಏರಿಕೆ ಆಗುತ್ತಲೇ ಇರುತ್ತದೆ. ನಂತರ ದರ ಏರಿಕೆ ಆಗಲಿಕ್ಕಿಲ್ಲ ಎಂದು ಹೇಳಲಾಗಿದೆ. ಸದ್ಯ ದರ ಏರಿಕೆಯಾಗಿದ್ದು, ಈ ದರ ಸ್ವಲ್ಪ ಸಮಯದವರೆಗೂ ಏರಲಿದೆ. ಮಳೆಗಾಲಕ್ಕೆ ಬೇಕಾದ ಅಡಿಕೆ ಸ್ಟಾಕ್ ಮಾಡಿಕೊಳ್ಳುವ ಕಾರಣ ಈಗ ಬೆಲೆ ಏರೋ ಸಂಭವ. ನಂತರ ಮಳೆಗಾಲದಲ್ಲಿ ವ್ಯವಹಾರ ಇಲ್ಲದ ಕಾರಣ ಕೆಲವು ಸಮಯ ತನಕ ಇಳಿಕೆಯಾಗುತ್ತದೆ. ಮತ್ತೆ ನಿಧಾನಕ್ಕೆ ಏರಿಕೆ ಖಚಿತ.

ಕಳೆದ ವರ್ಷ ಅಕಾಲಿಕ ಮಳೆಯ ಕಾರಣ ಅಡಿಕೆ ಕ್ವಾಲಿಟಿ ಕುಸಿದು ದರ ಇಳಿದಿತ್ತು. ಆದರೆ, ಈ ವರ್ಷ ಅಕಾಲಿಕ ಮಳೆ ಇಲ್ಲ. ಒಟ್ಟಾರೆ ಹೇಳೋದಾದ್ರೆ ಒಂದು ಮಳೆಯೂ ಇನ್ನೂ ಬಂದಿಲ್ಲ. ಆ ಕಾರಣದಿಂದ ಈ ಬಾರಿ ಅಡಿಕೆ ಚೆನ್ನಾಗಿ ಒಣಗಿದ್ದು, ಅದಕ್ಕೆ ಉತ್ತಮ ಗುಣಮಟ್ಟ ಇದೆ. ಹಾಗಾಗಿ ಹೊಸ ಅಡಿಕೆಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದ್ದು, ಜೊತೆಗೆ ಬೆಲೆಯೂ ಹೆಚ್ಚಾಗಬಹುದು. ಹೊಸ ಅಡಿಕೆಗೆ ಹೆಚ್ಚಾದರೆ ಹಳೆ ಅಡಿಕೆಗೆ ಬೆಲೆ ಏರಿದ ಹಾಗೆ ಲೆಕ್ಕ. ಸದ್ಯ ಅಡಿಕೆ ಬೆಳೆಗಾರರು ಬೆಲೆ ನೋಡಿಕೊಂಡು ತಮ್ಮ ಟಾರ್ಗೆಟ್ ಬೆಲೆ ಬಂದರೆ ಹಳೆಯ ಅಡಿಕೆಯನ್ನು ಮಾರಾಟ ಮಾಡುವುದು ಉತ್ತಮ. ಮೇ ಮೂರನೇ ಅಥವಾ ಕೊನೆಯ ವಾರದ ತನಕ ಬೆಲೆ ಏರಲಿದೆ. ಅಲ್ಲಿಂದ ಸಣ್ಣ ಇಳಿಕೆ ತೋರಿಬರಲಿದೆ.

ಇದನ್ನೂ ಓದಿ: UPI Payment : UPI ಮೂಲಕ ಹಣ ಕಳುಹಿಸಲು ಹೊಸ ಮಿತಿ ನಿಗದಿ! ಯಾವ ಬ್ಯಾಂಕ್ ಗ್ರಾಹಕರಿಗೆ ಎಷ್ಟು ಮಿತಿ ಇದೆ?

Leave A Reply

Your email address will not be published.