D Boss Apology: ಕೊನೆಗೂ ಮಾಧ್ಯಮಗಳ ಕ್ಷಮೆ ಕೇಳಿದ ನಟ ದರ್ಶನ್, ಅವತ್ತು ಮುನಿಸು ಯಾಕಾಗಿತ್ತು ಗೊತ್ತಾ ?

D Boss Apology: ಇಂದು ಛಾಲೆಂಜಿಂಗ್ ಸ್ಟಾರ್ ದರ್ಶನ್(Darshan Thoogudeep) ಅಭಿಮಾನಿಗಳಿಗೆ ಸಂತಸದ ಸುದ್ದಿ. ಬಹುಶ ಅವರ ಆನಂದಕ್ಕೆ ಪಾರವೇ ಇಲ್ಲ. ಯಾಕೆಂದರೆ ವರ್ಷಗಳ ಹಿಂದೆ ಕನ್ನಡದ ಡಿ ಬಾಸ್ ದರ್ಶನ್ ಅವರು ಮಾಧ್ಯಮಗಳ ವಿರುದ್ಧ ಅವಹೇಳನವಾಗಿ ಮಾತನಾಡಿದ್ದಾರೆಂದು, ಇಡೀ ಕನ್ನಡ ಮಾಧ್ಯಮ ಲೋಕವೇ ಅವರನ್ನು ಕೆಲ ವರ್ಷಗಳ ಕಾಲ ಬ್ಯಾನ್ ಮಾಡಿದ್ದು ಎಲ್ಲರಿಗೂ ತಿಳಿದೇ ಇದೆ. ಆದರೀಗ ದರ್ಶನ್ ಅವ್ರು ಕೊನೆಗೂ ಸುದೀರ್ಘವಾದ ಪತ್ರ ಬರೆಯೋ ಮೂಲಕ ಮಾದ್ಯಮಗಳ ಕ್ಷಮೆ (D Boss Apology) ಕೋರಿದ್ದಾರೆ. ಆ ಪತ್ರವೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

 

Image Source: Karnataka Box Office

 

ಉಮಾಪತಿ ಗೌಡ(Umapati Gowda) ಹಾಗೂ ದರ್ಶನ್(Darshan) ರವರ ನಡುವೆ ನಡೆದಂತಹ ಒಂದು ಘಟನೆಯ ಸಂದರ್ಭದಲ್ಲಿ ದರ್ಶನ್ ರವರು ಮಾಧ್ಯಮಗಳನ್ನು ತಮ್ಮ ಫಾರ್ಮ್ ಹೌಸ್ ಗೆ ಕರೆಸಿ ನಂತರ ಅಲ್ಲಿ ಮಾಧ್ಯಮಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎನ್ನುವಂತಹ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಅದರ ಅಡಿಯೋ ಕೂಡ ಎಲ್ಲೆಡೆ ವೈರಲ್ ಆಗಿತ್ತು. ಇದರಿಂದ ಕುಪಿತಗೊಂಡ ಮಾಧ್ಯಮಗಳು ಅಘೋಷಿತವಾಗಿ ದರ್ಶನ್ ರವರ ವಿಚಾರಗಳನ್ನು ತಾವು ಪ್ರಸಾರ ಮಾಡುವುದಿಲ್ಲ ಎಂದು ಬ್ಯಾನ್ ಮಾಡಿದ್ದವು. ಆದರೀಗ ದರ್ಶನ್ ಈ ಬಗ್ಗೆ ಮೊದಲ ಬಾರಿಗೆ ತಮ್ಮ ಅಪಲಾಜಿಯನ್ನು ಸಲ್ಲಿಸಿದ್ದಾರೆ.

ಹೌದು, ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಮಾಧ್ಯಮಕ್ಕೆ ಬಹಿರಂಗವಾಗಿ ಪತ್ರವನ್ನು ಕಳುಹಿಸಿದ್ದು, ಯಾವುದೋ ಒಂದು ಗಳಿಗೆಯಲ್ಲಿ ಕೆಲವು ಅಚಾತುರ್ಯದಿಂದ ಮಾತನಾಡಿರುತ್ತೇನೆ. ಮಾಧ್ಯಮ ಸಹೋದರರಿಗೆ ಸಹೋದರಿಯರಿಗೆ ನೋವು ಉಂಟಾಗಿರುವುದರಿಂದ ಅದನ್ನು ನಾನು ವಿಷಾದಿಸುತ್ತೇನೆ. ಎಲ್ಲರೂ ನಗು ನಗುತಾ ಬಾಳೋಣ ಎಂದು ಹೇಳಿದ್ದಾರೆ.

ಅಂದಹಾಗೆ ಪತ್ರದಲ್ಲಿ ದರ್ಶನ್(Darshan) ಎಲ್ಲಾ ಪರಿಸ್ಥಿತಿಯನ್ನು ವಿವರಿಸಿ ನಂತರ ನಿಜ ಜೀವನದಲ್ಲಿ ಸಹ ಯಾವುದೋ ಒಂದು ಗಳಿಗೆಯಲ್ಲಿ ಕೆಲವು ಆಚಾತುರ್ಯದಿಂದ ಮಾತನಾಡಿರುತ್ತೇನೆ ಮಾಧ್ಯಮ ಸಹೋದರ ಸಹೋದರಿಯರಿಗೆ ನೋವು ಉಂಟಾಗಿರುವುದರಿಂದ ಅದನ್ನು ನಾನು ವಿಷಾದಿಸುತ್ತೇನೆ ಎಂಬುದಾಗಿ ಹೇಳುವ ಮೂಲಕ ಕ್ಷಮೆಯನ್ನು ಕೋರಿದ್ದಾರೆ.

ಪತ್ರದಲ್ಲಿನ ಸಾಲುಗಳನ್ನು ನೋಡೋದಾದ್ರೆ ʼ750ಕೋಟಿಯನ್ನು ವರ್ಷಗಳ ಇತಿಹಾಸವಿರುವ ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಕೆಲವು ವ್ಯಕ್ತಿಗಳು ಮತ್ತು ಕೆಲವು ಹೆಸರುಗಳು ಮಾತ್ರ ಚರಿತ್ರೆಯಲ್ಲಿ ಉಳಿದಿರುತ್ತವೆ. ಆ ಸಾಲಿನಲ್ಲಿ ಡಾ| ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ತೂಗುದೀಪ ಶ್ರೀನಿವಾಸ್, ಬಾಲಕೃಷ್ಣ, ದಿನೇಶ್, ಇವರ ಸಮಕಾಲೀನ ದಿಗ್ಗಜರುಗಳನ್ನು ಕರ್ನಾಟಕದ ಜನತೆ ಮೆಚ್ಚಿಕೊಂಡು ಮೆರೆಸಿದರು. ಒಪ್ಪುವ ಮಾಧ್ಯಮಗಳು ಮತ್ತು ದೃಶ್ಯ ಮಾಧ್ಯಮಗಳು ಪ್ರೋತ್ಸಾಹಿಸಿರುತ್ತೀರಿ.

ಈ ಸಾಲಿನಲ್ಲಿ ಇದ್ದಂತಹ ಕನ್ನಡ ಚಿತ್ರರಂಗ ಮರೆಯಲಾಗದಂತಹ ನಟ ತೂಗುದೀಪ ಶ್ರೀನಿವಾಸ್ ರವರ ಕುಟುಂಬದಿಂದ ಬಂದಂತಹ ಸಣ್ಣ ಕುಡಿ ನಾನು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗ ನನ್ನನ್ನು ಆಶೀರ್ವದಿಸಿ ಪ್ರೋತ್ಸಾಹಿಸಿ ಹಲವಾರು ಬಾರಿ ನಾನು ಮಾಡಿರುವ ಪಾತ್ರಗಳ ಬಗ್ಗೆ ವಿಶ್ಲೇಷಣೆ ಮಾಡಿ, ನನ್ನ ಪಾತ್ರದಲ್ಲಿರುವ ತಪ್ಪುಗಳನ್ನು ತಿದ್ದಿ ಹೇಳಿರುವಿರಿ, ನಾನು ಸಹ ಮುಂದಿನ ದಿನಗಳಲ್ಲಿ ಮಾಡಿರುವಂತೆ ಚಿತ್ರಗಳಲ್ಲಿ ನನ್ನ ಪಾತ್ರಗಳಲ್ಲಿ ಬರುವ ತಪ್ಪುಗಳ ಬಗ್ಗೆ ಎಚ್ಚೆತ್ತುಕೊಂಡು ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಿಕೊಂಡಿರುವೆನು”

“ಅದೇ ರೀತಿಯಲ್ಲಿ ನಿಜ ಜೀವನದಲ್ಲಿ ಸಹ. ಯಾವುದೋ ಒಂದು ಗಳಿಗೆಯಲ್ಲಿ ಕೆಲವು ಅಚಾತುರ್ಯದಿಂದ ಮಾತನಾಡಿರುತ್ತೇನೆ. ಮಾಧ್ಯಮ ಸಹೋದರರಿಗೆ ಸಹೋದರಿಯರಿಗೆ ನೋವು ಉಂಟಾಗಿರುವುದರಿಂದ ಅದನ್ನು ನಾನು ವಿಷಾದಿಸುತ್ತೇನೆ. ಜೀವನವೆಂಬುದು ಬಹಳ ಅಮೂಲ್ಯ ಹಾಗೂ ತುಂಬಾ ಚಿಕ್ಕದ್ದು. ಈ ಚಿಕ್ಕ ಸಮಯದಲ್ಲಿ ನಗು ನಗುತಾ ಬಾಳೋಣ, ನನ್ನ ಈ ಭಾವನೆಯನ್ನು ನನ್ನ ಎಲ್ಲಾ ಮಿತ್ರರು ಹಾಗೂ ಅಭಿಮಾನಿಗಳು ಅರ್ಥ ಮಾಡಿಕೊಂಡು ಗೌರವಿಸಬೇಕು. ಇಂತಿ ನಿಮ್ಮ ದಾಸ ಎಂದು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.

ಆದರೆ ಇದು ಫೇಕ್ ಪತ್ರ ಎಂಬುದಾಗಿ ಕೂಡ ಅಭಿಮಾನಿಗಳು ಹೇಳುತ್ತಿದ್ದು ಇದರ ಸತ್ಯಾಸತ್ಯತೆಗಳನ್ನು ಯಾವುದೇ ಅಧಿಕೃತ ಮೂಲಗಳು ಸ್ಪಷ್ಟಪಡಿಸಿಲ್ಲ.

 

ಇದನ್ನು ಓದಿ: Gold-Silver Price today :ಚಿನ್ನ ಪ್ರಿಯರೇ, ಇಂದು ಮತ್ತೊಮ್ಮೆ ಚಿನ್ನದ ದರ ಕುಸಿತ!

4 Comments
  1. MichaelLiemo says

    ventolin 100mcg price: buy Ventolin – ventolin usa
    can you buy ventolin over the counter nz

  2. Josephquees says

    prednisone brand name in usa: order prednisone on line – prednisone 20mg capsule

  3. Josephquees says

    neurontin 500 mg: neurontin 600 mg price – neurontin 200

  4. Timothydub says

    medicine in mexico pharmacies: mexican pharmacy – mexico pharmacies prescription drugs

Leave A Reply

Your email address will not be published.