Tamilnadu :ಎಲ್ಲೆಲ್ಲೂ ಮದ್ಯ, ಎಲ್ಲೆಲ್ಲೂ: ಮದುವೆ ಮನೆಯಿಂದ ಕ್ರೀಡಾಂಗಣದ ತನಕ ಮದ್ಯ ಸಪ್ಲೈಗೆ ಅನುಮತಿ ನೀಡಿದ ಸರ್ಕಾರ !

Tamil Nadu: ಮದ್ಯ (drinks) ಅಂದರೆ ಸಾಕು ಮಧ್ಯರಾತ್ರಿ ಎದ್ದು ಕೂರುವವರಿದ್ದಾರೆ. ಕೆಲವರಿಗೆ ಕಂಠಪೂರ್ತಿ ಕುಡಿಯದಿದ್ದರೆ ದಿನಸಾಗೋದಿಲ್ಲ. ಇದೀಗ ತಮಿಳುನಾಡು (Tamil Nadu) ಸರ್ಕಾರ ಕ್ರೀಡಾಂಗಣ, ಇನ್ನೀತರೆ ಸಾರ್ವಜನಿಕ ಸ್ಥಳಗಳಲ್ಲಿ ಮಧ್ಯ ಪೂರೈಕೆ ಮಾಡಲು ಅನುಮತಿ ನೀಡಿದೆ.

 

ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದ್ದು, ಮದುವೆ ಮಂಟಪ ಮತ್ತು ಕ್ರೀಡಾಂಗಣದಲ್ಲಿ ಮದ್ಯ ನೀಡಬಹುದು ಎಂದು ಸೂಚನೆ ನೀಡಿದೆ.

ಸರ್ಕಾರವು ರಾಜ್ಯದಲ್ಲಿನ ಮದುವೆ ಹಾಲ್‌ಗಳು, ಬ್ಯಾಂಕ್ವೆಟ್ ಹಾಲ್‌ಗಳು, ಕಾನ್ಸರೆನ್ಸ್ ಹಾಲ್‌ಗಳು, ಕನ್ವೆನ್ಸನ್ ಸೆಂಟರ್‌ಗಳು, ಸ್ಟೇಡಿಯಂಗಳು ಮತ್ತು ಮನೆಯ ಕಾರ್ಯಕ್ರಮಗಳಲ್ಲಿ ಮದ್ಯವನ್ನು ಪೂರೈಕೆ ಮಾಡಲು ಅನುಮತಿ ನೀಡಿದ್ದು, ಅದಕ್ಕಾಗಿ ಲೈಸೆನ್ಸ್ ನೀಡುವ ವಿಧಾನವನ್ನು ಜಾರಿಗೆ ತಂದಿದೆ.

ಲೈಸೆನ್ಸ್ ಕೆಲಕಾಲ ಮಾತ್ರ ಮಾನ್ಯವಾಗಿದ್ದು, ಜಿಲ್ಲಾಧಿಕಾರಿ ಅಥವಾ ಸಹಾಯಕ ಆಯುಕ್ತರು ಪರವಾನಗಿಯನ್ನು ನೀಡಬಹುದು ಎನ್ನಲಾಗಿದೆ. ಈ ಪರವಾನಗಿಗಾಗಿ ಅರ್ಜಿ ಸಲ್ಲಿಸುವರು ಕಾರ್ಯಕ್ರಮಕ್ಕೆ 7 ದಿನಗಳ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ತಮಿಳುನಾಡಿನಲ್ಲಿ ಇತ್ತೀಚೆಗೆ 21 ವರ್ಷದೊಳಗಿನವರಿಗೆ ಮದ್ಯ ಮಾರಾಟ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬಂದಿದ್ದು, ಇದರಿಂದಾಗಿ ಮದ್ರಾಸ್ ಹೈಕೋರ್ಟ್, ತಮಿಳುನಾಡು ಸರ್ಕಾರ ಮಧ್ಯ ಮಾರಾಟಕ್ಕೆ ಪರವಾನಗಿ ನೀಡುವಂತೆ ಸೂಚಿಸಿತ್ತು. ಇದೀಗ ಅನುಮತಿ ನೀಡಿದೆ. ಜೊತೆಗೆ ಮದ್ಯದಂಗಡಿಗಳು ಮಧ್ಯಾಹ್ನ 2 ರಿಂದ ರಾತ್ರಿ 8 ರವರೆಗೆ ಮಾತ್ರ ತೆರೆದಿರಬೇಕು ಎಂದು ಹೇಳಿದೆ.

 

ಇದನ್ನು ಓದಿ : Priyanka Gandhi: ನಾಳೆ ರಾಜ್ಯಕ್ಕೆ ಪ್ರಿಯಾಂಕ ಗಾಂಧಿ ಆಗಮನ; ಹಳೇ ಮೈಸೂರು ಭಾಗದಲ್ಲಿ ಚುನಾವಣಾ ಅಬ್ಬರ ಜೋರು!! 

Leave A Reply

Your email address will not be published.