Srinivasa prasad- Siddaramaiah: ಸಿದ್ದರಾಮಯ್ಯ ಇಲ್ಲಿ ಗುಡುಗಿದ್ರೆ ಅಲ್ಲಿ ಆಸ್ಪತ್ರೆಯಲ್ಲಿ ಹೆರಿಗೆ ಆಗ್ಬಿಡುತ್ತೆ: ಶ್ರೀನಿವಾಸ್ ಪ್ರಸಾದ್ ಲೇವಡಿ

Srinivasa prasad- Siddaramaiah:  ಸಿದ್ದರಾಮಯ್ಯನವರು ಇಲ್ಲಿ ಗುಡುಗಿದ್ರೆ ಅಲ್ಲಿ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆಯೇ ಆಗ್ಬಿಡುತ್ತೆ ಎಂದು ಚಾಮರಾಜನಗರದ ವಿ. ಶ್ರೀನಿವಾಸ ಪ್ರಸಾದ್ (Srinivasa prasad- Siddaramaiah) ಲೇವಡಿ ಮಾಡಿದ್ದಾರೆ. ಅಲ್ಲಿ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ನಡೆಸುತ್ತಿರುವ ಅಬ್ಬರದ ಪ್ರಚಾರದ ಕುರಿತು ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ್ ಪ್ರಸಾದ್ ಅವರು ಮಾತನಾಡುತ್ತಿದ್ದರು.
” ಸಿದ್ದರಾಮಯ್ಯ ಗುಡುಗಿದ್ರೆ, ಅಲ್ಲಿ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆಯೇ ಆಗುತ್ತೆ. ಲೋಕಸಭೆಯಲ್ಲೂ ರಾಹುಲ್ ಗಾಂಧಿನ ನಿಲ್ಲಿಸಿಕೊಂಡು ಗುಡುಗಿದ್ರು. ಅತ್ತ ಮೋದಿ ಮುಳುಗೇ ಹೋದರು ಅನ್ನೋ ಹಾಗೇ ಗುಡುಗಿದ್ರು. ಕೊನೆಗೆ ಏನಾಯ್ತು ಹೇಳಿ ? ರಾಜ್ಯದಲ್ಲಿ ಕೇವಲ 1 ಸೀಟು ಮಾತ್ರ ಗೆದ್ದರು ” ಎಂದು ಅವರು ವ್ಯಂಗ್ಯವಾಡಿದ್ದಾರೆ.

“ಎಷ್ಟು ಬೇಕಾದ್ರೂ ಗುಡುಗಿ..ಗುಡುಗಿ..ಚಾಮುಂಡೇಶ್ವರಿಯನ್ನು 30 ಸಾವಿರ ವೋಟ್‌ನಲ್ಲಿ ಸೋತರು. ಈಗ ವರುಣಾ ಕ್ಷೇತ್ರದಲ್ಲಿ 1 ಲಕ್ಷ ವೋಟ್ ನಲ್ಲಿ ಗೆಲ್ಲುತ್ತೇನೆ ಅನ್ನುತ್ತಿದ್ದಾರೆ. ಹಾಗೆ ಗೆಲ್ಲೋಕೆ ಸಾಧ್ಯನಾ ಹೇಳಿ ? ಓರ್ವ ಪ್ರತಿಪಕ್ಷ ನಾಯಕನಾಗಿ ಅವರು ಮಾತನಾಡುವ ಮಾತಾ ಅದು? ಈಗ ಸೋಮಣ್ಣ ಹೊರಗಿನವರು ಅನ್ನೋ ಸಿದ್ದರಾಮಯ್ಯ, ತಾವು ಬಾದಾಮಿಗೆ ಯಾಕೆ ಹೋದ್ರು? ” ಎಂದು ಸಿದ್ದುನ ತಿವಿದಿದ್ದಾರೆ.

ನಿನ್ನೆಯ ಪತ್ರಿಕಾ ಹೇಳಿಕೆಯ ಸಂದರ್ಭ ಬಿಜೆಪಿಯಲ್ಲಿ ಲಿಂಗಾಯತ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿದ ಪ್ರಸಾದ್ ಅವ್ರು, ‘ ಅಮಿತ್ ಶಾ ಈ ಬಗ್ಗೆ ಮಾತನಾಡಬೇಡಿ ಅಂತಾ ಈಗಾಗಲೇ ಹೇಳಿದ್ದಾರೆ. ಮುಖ್ಯಮಂತ್ರಿ ಬಗ್ಗೆ ಫಲಿತಾಂಶದ ನಂತರ ಯೋಚನೆ ಮಾಡೋಣ ಅಂತಾ ಹೇಳಿದ್ದಾರೆ. ಫಲಿತಾಂಶದ ಮೇಲೆ ದಲಿತ ಸಿಎಂ, ಅಥವಾ ಲಿಂಗಾಯತ ಸಿಎಂ ಅನ್ನೋದು ನಿರ್ಧಾರವಾಗುತ್ತೆ. ಪಕ್ಷದ ವರಿಷ್ಠರು ಅದನ್ನ ತೀರ್ಮಾನ ಮಾಡ್ತಾರೆ ‘ ಎಂದಿದ್ದಾರೆ.

ಅನುಕಂಪವನ್ನು ಅಭಿವೃದ್ಧಿಗೆ ತಳುಕು ಹಾಕುವುದು ಸರಿಯಲ್ಲ ಎಂದು ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಚಾರಕ್ಕೆ ಅವರು ಹೇಳಿದ್ದಾರೆ. ನಂಜನಗೂಡಿನ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ ಹಾಗೂ ಅವರ ಪತ್ನಿ ಸಾವನ್ನಪ್ಪಿದ ಬಗ್ಗೆ ನಮಗೂ ಅನುಕಂಪವಿದೆ. ನಿಮಗೂ, ಎಲ್ಲರಿಗೂ ಅನುಕಂಪವಿದೆ. ಈ ಬಗ್ಗೆ ಪಕ್ಷಾತೀತವಾಗಿ ಅನುಕಂಪ ವ್ಯಕ್ತವಾಗಿದೆ. ಸಂಸದ ಪ್ರತಾಪ್ ಸಿಂಹ ಹಾಗೂ ನಾನು ಸಹ ಹೋಗಿ ಸಂತಾಪ ವ್ಯಕ್ತಪಡಿಸಿ ಬಂದಿದ್ದೇವೆ. ಅನುಕಂಪ ಅಂದ ತಕ್ಷಣ ಈ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಮಾಯ ಆಗ್ತವಾ ಎಂದು ಅವರು ಪ್ರಶ್ನಿಸಿದ್ದಾರೆ.

” ಇಲ್ಲಿ ನಮ್ಮ ಹರ್ಷವರ್ಧನ್ 500 ಕೋಟಿ ರೂಪಾಯಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ಇದನ್ನು ಸ್ವತಃ ಮುಖ್ಯಮಂತ್ರಿ ಹೇಳಿದ್ದಾರೆ. ಅನುಕಂಪದ ‌ನಡುವೆ, ಅಭಿವೃದ್ಧಿ ಕಾರ್ಯಗಳನ್ನು ಕಡೆಗಣಿಸಲು ಆಗುತ್ತಾ ? ಅನುಕಂಪವನ್ನು ಅಭಿವೃದ್ಧಿಗೆ ತಳುಕು ಹಾಕುವುದು ಸರಿಯಲ್ಲ. ಹಾಗಾದ್ರೆ ಅಭಿವೃದ್ಧಿಗಳು ಲೆಕ್ಕಕ್ಕೇ ಬರಲ್ವಾ ?” ಎಂದವರು ಮರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Karnataka polls: ನಾಮಪತ್ರ ಹಾಕಿದ್ದಾರೆ, ಆದ್ರೆ ಸಹಿಯೇ ಹಾಕಿಲ್ಲ ಆಸಾಮಿ: ಈ ಮಹಾ ಯಡವಟ್ಟ ಈಗ ಏನ್ ಮಾಡ್ತಾರೆ ಗೊತ್ತೇ ?

Leave A Reply

Your email address will not be published.