Second world war ship : 2ನೇ ಮಹಾಯುದ್ಧದ ಸಂದರ್ಭದಲ್ಲಿ ಸಮುದ್ರಪಾಲಾಗಿದ್ದ ಹಡಗು ಪತ್ತೆ!

Second world war ship : ಗತಕಾಲದ ಇತಿಹಾಸ ಬಗ್ಗೆ ತಿಳಿಯಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡಿ ಸಫಲತೆ ಮತ್ತು ವಿಫಲತೆಗಳನ್ನು ಕಂಡುಕೊಂಡಿರುವುದುಂಟು. ಇದೀಗ 84 ವರ್ಷಗಳ ಹಿಂದೆ 2ನೇ ವಿಶ್ವಯುದ್ಧದಲ್ಲಿ ನಾಪತ್ತೆಯಾಗಿದ್ದ ಹಡಗೊಂದು (Second world war ship) ಪತ್ತೆಯಾಗಿದ್ದು ಎಲ್ಲರನ್ನು ಬೆರಗು ಗೊಳಿಸಿದೆ.

 

ಹೌದು, ದ.ಚೀನಾ ಸಮುದ್ರವೆಂದು
ಕರೆಸಿಕೊಳ್ಳುವ ಫಿಲಿಪ್ಪಿನ್ಸ್‌ನ ಲುಝಾನ್ ದ್ವೀಪದ ಸಮುದ್ರದಾಳದಲ್ಲಿ ಶನಿವಾರದಂದು ಜಪಾನಿನ ಮಾಂಟೆವಿಡಿಯೊ ಮಾರು ಹಡಗು ಪತ್ತೆಯಾಗಿದೆ.

ಸಮುದ್ರ ಪುರಾತತ್ವಶಾಸ್ತ್ರ ಮತ್ತು ಆಳಸಮುದ್ರ ವಿಶೇಷಜ್ಞರ ಸರ್ವೆ ತಂಡವು ಆಸ್ಟ್ರೇಲಿಯಾದ ರಕ್ಷಣಾ ಇಲಾಖೆಯ ನೆರವಿನಿಂದ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಸಮುದ್ರದ ಸುಮಾರು 13,123 ಅಡಿ ಆಳದಲ್ಲಿ ಹಡಗಿನ ಅವಶೇಷ ಪತ್ತೆಯಾಗಿದೆ ಎಂದು ಸರಕಾರ ಘೋಷಿಸಿದೆ. ಅಲ್ಲದೆ ಈ ಹಡಗು ಸಿಕ್ಕನಂತರ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.

ಮುಖ್ಯವಾಗಿ ಆಸೀಸ್ ಇತಿಹಾಸದಲ್ಲೇ ಅತಿದೊಡ್ಡ ಸಮುದ್ರ ದುರಂತ ಎಂದು ದಾಖಲಾಗಿದ್ದು, ಆಸೀಸ್‌ 864 ಯೋಧರನ್ನು ಬಲಿಪಡೆದಿದೆ. ಈ ಘಟನೆಯು 1942, ಜುಲೈ ತಿಂಗಳಲ್ಲಿ ಪಪುವಾ ನ್ಯೂಗಿನಿಯದಿಂದ ಚೀನಾದ ಹೈನಾನ್‌ಗೆ ಹೊರಟಿದ್ದ ಹಡಗು ಅಮೆರಿಕದ ಸಬ್‌ಮರಿನ್‌ವೊಂದರ ಟಾಪೆಡೊ ದಾಳಿಗೆ ಒಳಗಾಗಿತ್ತು.

ಆದರೆ ಹಡಗಿನಲ್ಲಿ ಯುದ್ಧ ಕೈದಿಗಳಿದ್ದರೇ ಎನ್ನುವುದು ಖಚಿತವಿಲ್ಲ. ಇದರ ಶೋಧವನ್ನು ಆಸ್ಟ್ರೇಲಿಯಾದ ರಕ್ಷಣಾ ಇಲಾಖೆ ನೆರವಿನಿಂದ ಸಬ್‌ಮರಿನ್ ಪುರಾತತ್ವ ಇಲಾಖೆ, ಸಮುದ್ರದಾಳ ಶೋಧಪಡೆ ಕೈಗೊಂಡಿದ್ದು, ಮಾಹಿತಿ ಪ್ರಕಾರ ಕಾಣೆಯಾಗಿದ್ದ ಜಪಾನಿನ ಮಾಂಟೆವಿಡಿಯೊ ಮಾರು ಹಡಗು ವ್ಯಾಪಾರ ಹಡಗಾಗಿದ್ದರೂ ಯುದ್ಧ ಕಾರ್ಯಾಚರಣೆಗಳಿಗೂ ಬಳಸಲ್ಪಡುತ್ತಿತ್ತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Tapori Satya: ಸ್ಯಾಂಡಲ್‌ ವುಡ್‌ ನಟ, ನಿರ್ದೇಶಕ ಟಪೋರಿ ಸತ್ಯ ನಿಧನ

Leave A Reply

Your email address will not be published.