Matrimonial Fraud: ತನಗಿಂತ 20 ವರ್ಷ ಕಿರಿಯಳೊಂದಿಗೆ ಆನ್ಲೈನ್ ನಲ್ಲಿ ಮುದಕಪ್ಪನ ಲವ್ವಿಡವ್ವಿ! 63 ವರ್ಷದ ವೃದ್ಧ ಕಳೆದುಕೊಂಡ ಹಣ ಎಷ್ಟು ಗೊತ್ತಾ?

Online Love Story: ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ ಎಂಬ ಮಾತು ಹೆಚ್ಚು ಪ್ರಚಲಿತ. ಆದರೆ ಹಣ ಲಪಟಾಯಿಸಲು ಜನರು ಬಳಸುವ ತಂತ್ರಗಳು ಹಲವಾರು. ಅದರಲ್ಲಿಯೂ ಇತ್ತೀಚೆಗೆ ಆನ್ಲೈನ್ ವಂಚನೆಗಳು ದಿನೆ ದಿನೇ ದಿನೇ ಹೆಚ್ಚಾಗುತ್ತಿದೆ. ಸೋಷಿಯಲ್ ಮೀಡಿಯಾ (Social Media) ಮುಖಾಂತರ ಆನ್‌ಲೈನ್ ವಂಚನೆಗಳು (Online Scams)ಹನಿ ಟ್ರ್ಯಾಪ್ ಹಗರಣಗಳು (Honey Trap) ಆಗಾಗ ವರದಿಯಾಗುತ್ತಲೇ ಇವೆ. ಮಹಿಳೆಯ ನವಿರಾದ ಮಾತಿನ ಜೊತೆಗೆ ಮಾಯಾಜಾಲದಲ್ಲಿ ಸಿಲುಕಿ ಲಕ್ಷಗಟ್ಟಲೇ ದುಡ್ಡು ಕಳೆದುಕೊಂಡ ಬ್ಯಾಂಕ್ ಅಧಿಕಾರಿಯೊಬ್ಬರು ಸಂಗಾತಿಯನ್ನು ಪಡೆಯಲು (Online Love Story)ಹೋಗಿ ಲಕ್ಷ ಗಟ್ಟಲೆ ಜೇಬಿಗೆ ಕತ್ತರಿ ಹಾಕಿದ ವ್ಯಥೆಯ ಕಥೆ ಕೇಳಿದರೆ ಬೇಸರವಾಗದಿರದು.
ಉತ್ತರಾಖಂಡದ ರಾಜಧಾನಿ ಡೆಹರಾಡೂನ್​ನಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿಯೊಬ್ಬರು ನಿವೃತ್ತಿಯಾಗುವ ಮುನ್ನ ಪತ್ನಿಯಿಂದ ವಿಚ್ಛೇಧನ ಪಡೆದುಕೊಂಡಿದ್ದಾರೆ. ಮಡದಿಯಿಂದ ದೂರಾದ ಬಳಿಕ ಏಕಾಂಗಿಯಾಗಿ ಜೀವನ ನಡೆಸುವಾಗ ಖಿನ್ನತೆಗೆ ಒಳಗಾಗಿದ್ದರಂತೆ. ಇದರಿಂದ ಸೂಕ್ತ ಜೊತೆಗಾತಿಯನ್ನು ಪಡೆಯುವ ಸಲುವಾಗಿ ಸುಂದರ ಪ್ರಕಾಶ್ ಮ್ಯಾಟ್ರಿಮೋನಿಯಲ್ ಸೈಟ್​ಗಳಲ್ಲಿ ಹುಡುಕಾಟ ನಡೆಸಿದಾಗ ಬ್ಯಾಂಕ್ ಉದ್ಯೋಗಿಗಿಂತ ಸುಮಾರು 20 ವರ್ಷ ಚಿಕ್ಕವಳಾದ ಮಹಿಳೆಯ ಮೋಸದ ಬಲೆಗೆ ಸಿಲುಕಿಬಿಟ್ಟಿದ್ದಾರೆ.

ತನಗಿಂತ 20 ವರ್ಷ ಕಿರಿಯ ಮಹಿಳೆಯೊಂದಿಗೆ ಸ್ನೇಹವಾಗಿ,ಆ ಬಳಿಕ ಪ್ರೇಮಕ್ಕೆ ಟರ್ನ್ ಅದ ಬಳಿಕ ಮಹಿಳೆ ತನಗೆ 43 ವರ್ಷ ಎಂದು ಹೇಳಿಕೊಂಡು ಈಗಾಗಲೇ ಪತಿಯಿಂದ ವಿಚ್ಛೇದನ ಹೊಂದಿರುವ ಮಾಹಿತಿ ನೀಡಿದ್ದಾಳೆ. ಹೀಗಾಗಿ, ಸಂಗಾತಿ ಆಗಲು ಯಾವುದೇ ತೊಡಕು ಇಲ್ಲದೆ ಮುಂದಿನ ಹಾದಿ ಸುಗಮವಾಯಿತು ಎಂದು ಬ್ಯಾಂಕ್ ಉದ್ಯೋಗಿ ಭಾವಿಸಿದ್ದರೇನೋ! ಆದರೆ, ನಿಜವಾದ ಸಮಸ್ಯೆ ಶುರುವಾಗಿದ್ದೇ ಇಲ್ಲಿಂದ! ಹೀಗೆ ಬ್ಯಾಂಕ್ ನೌಕರನನ್ನು ಬಲೆಗೆ ಬೀಳಿಸಿದ ಮಹಿಳೆ ಮದುವೆಯಾಗುವುದಕ್ಕೆ ಸಮ್ಮತಿ ಸೂಚಿಸಿ ಒಟ್ಟಿಗೆ ಜೀವನ ನಡೆಸಲು ಇಬ್ಬರು ಸೇರಿ ಒಂದು ಮನೆ ಕಟ್ಟುವ ಯೋಜನೆ ಹಾಕಿ, ಅದಕ್ಕಾಗಿ ನಿವೇಶನ​ ಖರೀದಿಸುತ್ತಿದ್ದೇನೆ ಎಂದು ಹೇಳಿ ಬ್ಯಾಂಕ್ ನೌಕರನ ಜೇಬಿಂದ ಹಣ ಪೀಕಿಸಲು ಆರಂಭಿಸಿದ್ದಾಳೆ.

ಮಹಿಳೆಯ ಮೋಸ ಅರಿಯದೆ ಆಕೆಯನ್ನೇ ಪ್ರೀತಿಸುತ್ತಿದ್ದ ಸುಂದರ ಪ್ರಕಾಶ್ ಆಕೆ ಕೇಳಿದಾಗ ಪ್ರೀತಿ ಆತನಿಗೆ ನಿವೇಶನ ಖರೀದಿಸಲು 20 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದಾಳೆ. ಹಣ ಕೊಟ್ಟ ಬಳಿಕ 3-4 ದಿನಗಳಲ್ಲಿ ಅವರು ಈ ಮೊತ್ತವನ್ನು ಸುಂದರ್​ಗೆ ವಾಪಸ್​ ನೀಡಿದ್ದಾಳೆ. ಇದರಿಂದಾಗಿ ಪ್ರೀತಿಯವರ ಮೇಲೆ ವಿಶ್ವಾಸ ಮೂಡಿದೆ. ಡಿಸೆಂಬರ್ 2021ರಿಂದ ಮೇ 2022ರವರೆಗೆ ಪ್ರೀತಿಯ ಖಾತೆಗೆ ಒಟ್ಟು 70 ಲಕ್ಷ ರೂಪಾಯಿ ನೀಡಿದ್ದಾರೆ. ಇಷ್ಟು ದಿನಗಳಲ್ಲಿ ಆಕೆ ಒಮ್ಮೆಯೂ ಮನೆಯ ವಿಳಾಸವನ್ನು ಕೇಳಿದಾಗಲೆಲ್ಲ ಕೆನಾಲ್ ರಸ್ತೆಯಲ್ಲಿರುವ ತನ್ನ ಮನೆ ಮತ್ತು ಕೆಲವೊಮ್ಮೆ ಜಖಾನ್‌ನಲ್ಲಿದೆ ಎಂದು ಹೇಳಿ ಟೋಪಿ ಹಾಕಿದ್ದಾಳೆ.

ಮತ್ತೆಯೂ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಾಗ ನಿರಾಕರಿಸಿದ್ದು, ಆದರೆ ಭೇಟಿಯಾದ ಸಂದರ್ಭ 10 ಲಕ್ಷ ರೂಪಾಯಿ ನೀಡಿದ್ದಾರೆ. ಅಕ್ಟೋಬರ್ 5, 2022ರಂದು ದೇವಸ್ಥಾನದ ಮದುವೆಯ ದಿನಾಂಕವನ್ನು ಸುಂದರ್ ಪ್ರಕಾಶ್ ನಿಗದಿ ಮಾಡಿ, ಮದುವೆಗೆ ಎಲ್ಲ ವ್ಯವಸ್ಥೆ ಮಾಡಿಕೊಂಡು ದೇವಸ್ಥಾನಕ್ಕೆ ಬಂದಿದ್ದಾರೆ. ಆದರೆ, ಫೋನ್ ಮಾಡಿದರೆ ಕರೆಯನ್ನು ಸ್ವೀಕರಿಸುವುದಿರಲಿ ಕೊನೆಗೆ ಸಂಜೆ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾಳೆ. ಆಗ ಸುಂದರ್​ಗೆ ತಾನು ಮೋಸ ಹೋಗಿರುವುದು ಅರಿವಾಗಿದೆ. ಸದ್ಯ, ಮೋಸ ಹೋದ ಸಂತ್ರಸ್ತ ಸುಂದರ್ ಪ್ರಕಾಶ್ ದೂರಿನ ಮೇರೆಗೆ ಪ್ರೀತಿ ಎಂಬ ಮಹಿಳೆ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದು, ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

 

ಇದನ್ನು ಓದಿ: Eating by hand: ಕೈಯಿಂದ ಊಟ ಮಾಡಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿದ್ಯಾ? 

Leave A Reply

Your email address will not be published.