Solar Flare: ಇನ್ನೆರಡು ದಿನಗಳ ಕಾಲ ಹೊತ್ತಿ ಉರಿಯಲಿದೆ ಪೃಥ್ವಿ! ಮನೆಯಿಂದ ಹೊರಗೆ ಕಾಲಿಡಬೇಡಿ: ನಾಸಾ ಎಚ್ಚರಿಕೆ!

Solar Flare: ಒಂದೆಡೆ ಮನೆಯಿಂದ ಹೊರಗೆ ಕಾಲಿಡಲು ಆಗದಷ್ಟು ರಣಬಿಸಿಲಿನ ಝಳ ಮತ್ತೊಂದೆಡೆ ಸೆಖೆಯ ಬೇಗೆಗೆ ಜನರು ಹೈರಾಣಾಗಿ ಹೋಗಿದ್ದಾರೆ. ಈ ನಡುವೆ ನಾಸಾ (NASA) ಇನ್ನೆರಡು ದಿನಗಳ ಕಾಲ ಮನೆಯಿಂದ ಹೊರ ಹೋಗದಂತೆ ಎಚ್ಚರಿಕೆ ನೀಡಿದೆ.

 

ಕಳೆದ ಕೆಲ ದಿನಗಳಿಂದ ಸೂರ್ಯನ ಪ್ರಖರತೆ ಹೆಚ್ಚಿದ್ದು ಕೆಲವೆಡೆ ಬಿಸಿ ಗಾಳಿ ಕೂಡ ಕಂಡುಬರುತ್ತಿದೆ. ಈ ನಡುವೆ ಮಳೆ ಕೂಡ ಇಲ್ಲದೆ ಇರುವುದರಿಂದ ಬಿರು ಬಿಸಿಲಿನ ಝಳ ಜನರನ್ನು ಕಂಗಾಲು ಮಾಡಿಬಿಟ್ಟಿದೆ. ಇನ್ನೆರಡು ದಿನಗಳ ಕಾಲ ಭೂಮಿ ಹೊತ್ತಿ ಉರಿಯುವ ಹಿನ್ನೆಲೆ ಮನೆಯಿಂದ ಹೊರಗೆ ಬರುವುದೇ ಬೇಡವೆಂದು ನಾಸಾ ಮುನ್ನೆಚ್ಚರಿಕೆ ನೀಡಿದೆ. ಎರಡು ದಿನಗಳಲ್ಲಿ ಸೂರ್ಯನು (Sun )ಮತ್ತಷ್ಟು ಪ್ರಖರಗೊಳ್ಳಲಿದ್ದು, ಇದರಿಂದಾಗಿ ಹೆಚ್ಚು ಬಿಸಿಲಿನ ತಾಪಮಾನದಿಂದ ಬಿಸಿಗಾಳಿಯನ್ನು (Heat Wind) ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಬಾಹ್ಯಾಕಾಶ ಸಂಸ್ಥೆ ನಾಸಾ ಸೂಚಿಸಿದೆ. ಸೂರ್ಯನು(Solar Flare) ಬಿಡುಗಡೆ ಮಾಡುವ ಬಿಸಿಗಾಳಿ ಅತ್ಯಂತ ಪ್ರಖರವಾಗಿರುವುದು ಮಾತ್ರವಲ್ಲದೆ ಇದರಿಂದ ಜೀವರಾಶಿಗೂ ಅಪಯವಿದ್ದು, ಇದರಿಂದ ಬಿಡುಗಡೆಯಾಗುವ ವಿಕಿರಣವು ರೇಡಿಯೋ ಸಂವಹನಗಳಿಗೆ ತಡೆಯುಂಟು ಮಾಡುವ ಕುರಿತು ನಾಸಾ ಸಂಸ್ಥೆ ಎಚ್ಚರಿಕೆ ನೀಡಿದೆ.

ಏಪ್ರಿಲ್ 24 ರಂದು ಸೌರ ಬಿರುಗಾಳಿ ಆರಂಭಗೊಂಡು ಭೂಮಿಗೆ ಅಪ್ಪಳಿಸಲಿದ್ದು ಜೊತೆಗೆ ಏಪ್ರಿಲ್ 25 ರಂದು ಹೆಚ್ಚು ಪ್ರಖರವಾದ ಬಿರುಗಾಳಿ ಭೂಮಿಯನ್ನು ಸ್ಪರ್ಶಿಸಲಿದೆ ಎಂದು ನಾಸಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಮಯದಲ್ಲಿ ಆದಷ್ಟು ಪ್ರಖರವಾದ ಬಿಸಿಲಿಗೆ ಜನರು ಹೊರಗೆ ಓಡಾಡುವುದನ್ನು ತಪ್ಪಿಸಿ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವ ಮೂಲಕ ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳುವಂತೆ ಸೂಚನೆ ನೀಡಿದೆ.

ದೊಡ್ದ ಪ್ರಮಾಣದ ಸ್ಫೋಟ ಉಂಟಾದ ಸಂದರ್ಭ ಆಗಾಗ ಕರೋನಲ್ ಮಾಸ್ ಎಜೆಕ್ಷನ್ ಸೌರ ಜ್ವಾಲೆಯನ್ನು ಉಂಟುಮಾಡುವ ಜೊತೆಗೆ ಇದು ಸೌರ ವಾತಾವರಣದಲ್ಲಿ ಚಾರ್ಜ್ಡ್ ಕಣಗಳನ್ನು ಹೆಚ್ಚು ವೇಗವಾಗುವಂತೆ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸೌರ ಬಿರುಗಾಳಿ ಉಂಟಾಗುತ್ತದೆ. ಕರೋನಲ್ ಮಾಸ್ ಎಜೆಕ್ಷನ್‌ಗಳ ಚಟುವಟಿಕೆಯಿಂದ ಸೌರ ಜ್ವಾಲೆಗಳು ಮತ್ತು ಸೌರ ಸ್ಫೋಟಗಳು ಒಳಗೊಂಡಂತೆ ಬಾಹ್ಯಾಕಾಶ ಹವಾಮಾನ ಘಟನೆಗಳಲ್ಲಿ ವೈಪರೀತ್ಯ ಉಂಟಾಗುತ್ತವೆ. ಬಿರುಗಾಳಿಯು ಅಂತರ್ಜಾಲದಿಂದ ಶಕ್ತಿಯವರೆಗೆ ಪ್ರತಿಯೊಂದು ಎಲೆಕ್ಟ್ರಾನಿಕ್ ಮತ್ತು ಸಂವಹನ ವ್ಯವಸ್ಥೆಯ ಮೇಲೆ ಪ್ರಭಾವ ಬೀರಿ ಉಪಗ್ರಹಗಳನ್ನು ಕೂಡ ದ್ವಂಸ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಇನ್ನು 2025 ರಲ್ಲಿ ಸೌರ ಗರಿಷ್ಠ ಸನಿಹವಾದಂತೆ ಸೌರ ಘಟನೆಗಳು ಹೆಚ್ಚಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನಾಸಾ ಇದು ಭೂಮಿಯ ಮೇಲಿನ ಜೀವ ರಾಶಿಯ ಜೀವನ ಮತ್ತು ತಂತ್ರಜ್ಞಾನದ ಮೇಲೆ ಗಂಭೀರ ಸ್ವರೂಪದ ಪ್ರಭಾವ ಬೀರುತ್ತದೆ. ಇಷ್ಟೇ ಅಲ್ಲದೆ, ಬಾಹ್ಯಾಕಾಶದಲ್ಲಿ ಉಪಗ್ರಹಗಳು ಮತ್ತು ಗಗನಯಾತ್ರಿಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ನಾಸಾ ಇತ್ತೀಚಿನ ತನ್ನ ಬ್ಲಾಗ್‌ನಲ್ಲಿ ಎಚ್ಚರಿಕೆಯ ಕರೆಗಂಟೆ ನೀಡಿದೆ.

 

ಇದನ್ನು ಓದಿ: Simple rules for happiness: ಈ ಸಿಂಪಲ್ 6 ನಿಯಮಗಳನ್ನು ಫಾಲೋ ಮಾಡಿದ್ರೆ ಸಾಕು; ಮನೆಯಲ್ಲಿ ಸುಖ, ನೆಮ್ಮದಿ ಎಲ್ಲವೂ ಸಿಗುತ್ತೆ!

Leave A Reply

Your email address will not be published.