Chanakya Niti And Marriage: ಈ ಗುಣಗಳಿರುವ ಹೆಣ್ಣನ್ನು ಖಂಡಿತಾ ಮದುವೆಯಾಗಬೇಡಿ- ಚಾಣಕ್ಯ

Chanakya Niti And Marriage: ಮದುವೆ (Marraige)ಪ್ರತಿಯೊಬ್ಬರ ಜೀವನದಲ್ಲಿಯೂ ಮುಖ್ಯ ಘಟ್ಟವಾಗಿದ್ದು ಆದರೆ ಈ ವಿಷಯದಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡುವಾಗ ತುಂಬಾ ಜಾಗರೂಕರಾಗಿರಬೇಕು. ಇಲ್ಲಿ ಸರಿಯಾದ ನಿರ್ಣಯ ತೆಗೆದುಕೊಳ್ಳಲು ಎಡವಿದರೆ ಜೀವನಪೂರ್ತಿ ಪರಿತಪಿಸಬೇಕಾಗಬಹುದು. ಈ ಕುರಿತು ಚಾಣಕ್ಯ ನೀತಿ ( Chanakya Niti And Marriage) ಕೆಲವು ಸಲಹೆಗಳನ್ನು ನೀಡಿದ್ದು, ಮದುವೆಯಾಗುವ ವರ ಈ ರೀತಿಯ ಗುಣಗಳಿರುವ ವಧುವನ್ನು ಯಾವುದೇ ಕಾರಣಕ್ಕೂ ವರಿಸಬಾರದಂತೆ.

ಮದುವೆ ಎಂಬ ವಿಚಾರಕ್ಕೆ ಬಂದಾಗ ವಧುವಾಗಲಿ ಇಲ್ಲವೇ ವರನಾಗಲಿ ಕೆಲವು ವಿಚಾರಗಳ ಬಗ್ಗೆ ಗಮನ ಹರಿಸಲೇಬೇಕು. ಬುದ್ಧಿವಂತಿಕೆ, ಮನೆತನ, ಆಚಾರ -ವಿಚಾರ, ಹೊಂದಾಣಿಕೆ, ಗುಣ ನಡತೆ, ಭವಿಷ್ಯದ ಯೋಜನೆ, ಆದಾಯ ಎಲ್ಲವನ್ನೂ ಪರಿಗಣಿಸಬೇಕಾಗುತ್ತದೆ. ಚಾಣಕ್ಯ ತನ್ನ ನೀತಿ ಗ್ರಂಥದಲ್ಲಿ ಶಿಕ್ಷಣಕ್ಕೆ ವಿಶೇಷ ಪ್ರಾಧಾನ್ಯತೆ ನೀಡಿದ್ದು, ವಿದ್ಯಾವಂತ ವ್ಯಕ್ತಿ ಎಲ್ಲಿಗೆ ಹೋದರೂ ಗೌರವಕ್ಕೆ ಭಾಜನನಾಗುತ್ತಾನೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಶಿಕ್ಷಣವು( Education)ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ತಿಳಿಸಲಾಗಿದ್ದು, ಒಬ್ಬ ವ್ಯಕ್ತಿಯು ದೈಹಿಕವಾಗಿ ದುರ್ಬಲನಾಗಿ ಅಶಕ್ತನಾಗಿದ್ದರು ಕೂಡ ಸೂಕ್ತವಾದ ರೂಪ ಇಲ್ಲದಿದ್ದರೂ ಇಲ್ಲವೇ ಸಾಕಷ್ಟು ಸಂಪತ್ತನ್ನು ಹೊಂದಿಲ್ಲದಿದ್ದರೂ, ಅವನು ಶಿಕ್ಷಣವನ್ನು ಹೊಂದಿದ್ದರೆ, ಅವನು ಜೀವನದಲ್ಲಿ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯ ಎಂಬುದನ್ನು ಚಾಣಕ್ಯ ಹೇಳಿದ್ದಾನೆ.

ಭಾರತದ ಮೊದಲ ಮಹಾನ್ ಅರ್ಥಶಾಸ್ತ್ರಜ್ಞನಾಗಿ ಜೊತೆಗೆ ತತ್ವಜ್ಞಾನಿಯಾಗಿ ಹೆಸರು ಪಡೆದ ಆಚಾರ್ಯ ಚಾಣಕ್ಯ ಅವರು ಜೀವನ ವಿಧಾನಗಳ ಬಗ್ಗೆ ಅನೇಕ ಕಟು ಸತ್ಯ ಗಳನ್ನ ಜೊತೆಗೆ ಜೀವನಪಾಠಗಳನ್ನು ಹೇಳಿದ್ದಾರೆ. ಅದೇ ರೀತಿ ಚಾಣಕ್ಯರು ಮದುವೆಯ ಕುರಿತು ಕೆಲ ವಿಚಾರಗಳನ್ನು ತಿಳಿಸಿದ್ದಾರೆ. ಮದುವೆಯಾಗುವ ಮೊದಲು ಸಾವಿರ ಬಾರಿ ಯೋಚಿಸಿ ಮದುವೆಯಾಗಬೇಕೆಂದು ತಿಳಿ ಹೇಳಿದ್ದು, ಆಚಾರ್ಯ ಚಾಣಕ್ಯರು ಮದುವೆಯಾಗುವ ವಧು ವರ ಸಮಾಲೋಚನೆ ನಡೆಸಿ ನಿರ್ಣಯ ತಿಳಿಸಬೇಕೆಂದು ಹೇಳಿದ್ದಾರೆ. ಉತ್ತಮ ದಾಂಪತ್ಯ ಜೀವನ ನಡೆಸಲು ಸತಿ ಪತಿಯ ನಡುವೆ ಕೆಲ ಗುಣಗಳು ಅವಶ್ಯಕ. ಯುವಕ(boy) ಯಾವುದೇ ಕಾರಣಕ್ಕೂ ಕೆಲವು ಗುಣಗಳಿರುವ ಹುಡುಗಿಯನ್ನು (Girl) ಮದುವೆಯಾಗುವುದು ತರವಲ್ಲ ಎಂದಿದ್ದಾರೆ.ಹಾಗಿದ್ರೆ, ಆ ಗುಣಗಳು ಯಾವುದೆಲ್ಲ? ಎಂಬ ಮಾಹಿತಿ ಇಲ್ಲಿದೆ ನೋಡಿ.

ಆಚಾರ್ಯ ಚಾಣಕ್ಯರ ಪ್ರಕಾರ ಬುದ್ಧಿವಂತನಾದವನು (brillant) ಯಾವಾಗಲೂ ತನ್ನದೇ ಕುಲದ ಕನ್ಯೆಯನ್ನು ವರಿಸುತ್ತಾನೆ. ಉತ್ತಮ ಕುಲದಲ್ಲಿ ಜನಿಸಿದ ಸೌಂದರ್ಯವಿಲ್ಲದ ಹುಡುಗಿಯನ್ನು ಮದುವೆಯಾದರು ಅಡ್ಡಿಯಿಲ್ಲ ಆದರೆ ನೀಚ ಕುಲದಲ್ಲಿ ಜನಿಸಿದ ಹುಡುಗಿಯನ್ನು ಎಂದಿಗೂ ಮದುವೆಯಾಗಬಾರದು. ಇವರು ಈ ಮಾತನ್ನು ಹೇಳಲು ಯಾವುದಾದರೂ ಬಲವಾದ ಕಾರಣವಿರಬಹುದು. ಆದರೂ ಒಂದೇ ಕುಲದವರನ್ನು ಮದುವೆಯಾದರೆ ತೊಡಕು, ಗಲಾಟೆ ಕಡಿಮೆ ಎಂದಿರಬಹುದು.ಇದರ ಜೊತೆಗೆ ಆಚಾರ ವಿಚಾರ, ಮನೆಯ ಪದ್ಧತಿಗಳು ಒಂದೇ ಇದ್ದಾಗ ಹೊಂದಾಣಿಕೆಗೆ ಹೆಚ್ಚು ಅವಕಾಶ ಇರುತ್ತದೆ. ಉತ್ತಮ ಮತ್ತು ನೀಚ ಅನ್ನೋದನ್ನು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ಗೊತ್ತಿಲ್ಲ. ಅದು ಜಾತಿಯ ಆಧಾರದ ಮೇಲೆ ಅಲ್ಲ ಎನ್ನಲಾಗಿದೆ.

ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿ ತನಗೆ ದೊರೆತಿರುವ ಅವಕಾಶವನ್ನು ಸದ್ಬಳಕೆ ಮಾಡಲು ಸದಾ ಚಿಂತಿಸಬೇಕು. ಗಲೀಜು ಬಟ್ಟೆಗಳನ್ನು ಧರಿಸುವುದು. ಕೊಳಕಿನಲ್ಲಿ ಮಲಗುವುದು ಹೀನ ಕುಲದವರ ಸ್ವಭಾವವಾಗಿರುತ್ತದೆ. ಆದರೆ, ಎಲ್ಲರಲ್ಲಿಯೂ ಒಂದಲ್ಲ ಒಂದು ಸದ್ಗುಣಗಳಿರುತ್ತವೆ. ಕುಲ ಯಾವುದಾದರೇನು ಒಳ್ಳೆಯ ವಿಚಾರ ಕಂಡರೆ ಅದನ್ನು ತನ್ನಲ್ಲಿ ರೂಡಿಸಿ ಕೊಳ್ಳುವ ಮನಸ್ಸು ಮಾಡಬೇಕು. ಹೀನ ಕುಲದಲ್ಲಿ ಜನಿಸಿದರು ಕೂಡ ವಿಷದಿಂದ ಅಮೃತವನ್ನು ತೆಗೆದುಕೊಳ್ಳುವ ಕಲೆ ಅವರಿಗೆ ಸಿದ್ದಿಸಿರಬಹುದು. ಅಂತಹ ಕಲೆಯನ್ನು ಕಳಿತುಕೊಳ್ಳಿ. ಇದರ ಹೊರತಾಗಿ, ಅವರನ್ನು ಮದುವೆಯಾಗುವ ವಿಚಾರದಲ್ಲಿ ಮಾತ್ರ ಯಾವಾಗಲೂ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಒಳ್ಳೆಯದು.

ಆಚಾರ್ಯ ಚಾಣಕ್ಯರ ಪ್ರಕಾರ, ಯಾವಾಗಲೂ ಮದುವೆಗಾಗಿ ಹುಡುಗಿಯ ಮತ್ತು ಅವಳ ಕುಲದ ಗುಣ ಸ್ವಭಾವವನ್ನು ತಿಳಿಯದೇ ಮದುವೆಯಾಗುವುದು ತರವಲ್ಲ. ಹೆಣ್ಣು ಮನೆಯ ಕಣ್ಣು ಎಂಬಂತೆ ಮದುವೆಯಾದ ವಧು ಒಳ್ಳೆಯ ಸಂಸ್ಕಾರ ಹೊಂದಿಲ್ಲದೆ ಇದ್ದಲ್ಲಿ ಮನೆಯ ಮರ್ಯಾದಿ ಹರಾಜಾಗಬಹುದು. ನೀಚ ಕುಲದಲ್ಲಿ ಹುಟ್ಟಿದ ಮಹಿಳೆಯ ಗುಣವೂ ಆಕೆಯ ಕುಲಕ್ಕೆ ಅನುಗುಣವಾಗಿ ಇರುತ್ತದೆ. ಇದು ಮನೆಯ ಆಚಾರ – ವಿಚಾರಗಳಲ್ಲಿ ಲೋಪಕ್ಕೆ ಕಾರಣವಾಗಿ ಸಮಸ್ಯೆ ತಲೆದೋರಬಹುದು ಎಂದಿದ್ದಾರೆ. ಹೀಗಾಗಿ, ನೀಚ ಕುಲದಲ್ಲಿ ಹುಟ್ಟಿದ ಸ್ತ್ರೀಯನ್ನು ಮದುವೆಯಾಗುವುದರಿಂದ ನಿಮ್ಮ ಇಡೀ ಕುಟುಂಬದ ಸಂಸ್ಕಾರ ಕೂಡ ಹಾಳಾಗುತ್ತದೆ ಎಂದಿದ್ದಾರೆ. ಆದರೆ ಉನ್ನತ ಕುಲದಲ್ಲಿ ಜನಿಸಿದ ಹೆಣ್ಣನ್ನು ಮದುವೆಯಾದರೆ ತನ್ನ ಕುಟುಂಬದ ಘನತೆ, ಗೌರವಕ್ಕೆ ಹೆಚ್ಚಿಸುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾಳೆ. ಅದೇ ರೀತಿ, ನೀಚ ಕುಲದಲ್ಲಿ ಜನಿಸಿದ ಹೆಣ್ಣು ಮನೆ ಒಡೆಯುವ ಇಲ್ಲವೇ ಕುತಂತ್ರದ ಮೂಲಕ ಮನೆಯ ಘನತೆಗೆ ಚ್ಯುತಿ ತರಬಹುದು. ಇದರಿಂದಾಗಿ, ನೀಚ ಕುಲದ ಹುಡುಗಿಯನ್ನು ವಿವಾಹವಾಗಬಾರದು ಎಂದು ಚಾಣಕ್ಯರು ಹೇಳಿದ್ದಾರೆ.

ಆಚಾರ್ಯ ಚಾಣಕ್ಯರ ಪ್ರಕಾರ, ಪುರುಷರಿಗೆ ಹೋಲಿಸಿದರೆ, ಅನೇಕ ವಿಚಾರಗಳನ್ನು ಬಹಿರಂಗಪಡಿಸುವ ಗುಣವನ್ನು ಕೂಡ ಮಹಿಳೆಯರು ಹೊಂದಿರುತ್ತಾರೆ. ಅತಿಯಾಸೆ ಗತಿಕೇಡು ಎಂಬಂತೆ ದುರಾಸೆಯ ಗುಣ ಉಳ್ಳ ಹೆಣ್ಣನ್ನು ಮದುವೆಯಾಗಬಾರದು ಎಂದು ಚಾಣಕ್ಯರು ಮದುವೆಯ ಕುರಿತು ಸಲಹೆ ನೀಡಿದ್ದಾರೆ.

 

ಇದನ್ನು ಓದಿ: Vir Electric Bicycle: ಸಶಸ್ತ್ರ ಪಡೆಯ ಸಿಬ್ಬಂದಿಗಳಿಗಾಗಿ ಹೊಸ ‘ವೀರ್ ಬೈಕ್’ ಬಿಡುಗಡೆ! 

 

Leave A Reply

Your email address will not be published.