Amit shah: ಗುಂಡ್ಲುಪೇಟೆಯಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ : ಅಭ್ಯರ್ಥಿ ನಿರಂಜನ್ ಕುಮಾರ್ ಪರ ಪ್ರಚಾರ!

Share the Article

Amit shah road show: ಚಾಮರಾಜನಗರ : ಮುಂದಿನ ವಿಧಾನ ಸಭೆ ಚುನಾವಣೆಗಾಗಿ ರಾಜ್ಯ ರಾಜಕೀಯಲ್ಲಿ ಭಾರೀ ರಣ ತಂತ್ರ ರೂಪಿಸುತ್ತಿದ್ದು, ಇಂದು ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಕೇಂದ್ರ ಅಮಿತ್ ಶಾ ಭರ್ಜರಿ ರೋಡ್ ಶೋ (Amit shah road show) ಮೂಲಕ ಮತ ಬೇಟೆ ನಡೆಸಿದ್ದಾರೆ.

ಗುಂಡ್ಲುಪೇಟೆಯಲ್ಲಿ ಕೇಂದ್ರ ಅಮಿತ್ ಶಾ ಭರ್ಜರಿ ರೋಡ್ ಶೋ ಮೂಲಕ  ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಅಮಿತ್ ಶಾ ಭರ್ಜರಿ ರೋಡ್ ಶೋಗೆ ನೂರಾರು ಜನರು ಆಗಮಿಸಿದ್ದು, ಅದ್ದೂರಿ ಮತ ಪ್ರಚಾರ ಮಾಡಲಾಯಿತು. ಅಷ್ಟೇ ಅಲ್ಲದೇ ಚುನಾವಣಾ ಜಾಥದಲ್ಲಿ ಮೋದಿ, ಅಮಿತ್‌ ಷಾ, ಯಡಿಯೂರಪ್ಪ ಪರ ಭಾರೀ ಘೋಷಣೆಗಳು ಕೇಳಿ ಬಂದಿತ್ತು.

ಚುನಾವಣಾ ಪ್ರಚಾರಕ್ಕೆಂದೇ ವಿಶೇಷವಾಗಿ ವಿನ್ಯಾಸಗೊಳಿಸಿರುವ ವಾಹನದಲ್ಲಿ ಅಮಿತ್ ಶಾ ಬಲಭಾಗದಲ್ಲಿ ಅಭ್ಯರ್ಥಿ ನಿರಂಜನ್ ಕುಮಾರ್ ಇದ್ದರೆ ಎಡಭಾಗದಲ್ಲಿ ಸಂಸದ ಪ್ರತಾಪ್ ಸಿಂಹ ಇರುವ ಮೂಲಕ ಮತದಾರರ ಗಮನ ಸೆಳೆದರು.

ಇದನ್ನೂ ಓದಿ: BS Yediyurappa: ಕಾಂಗ್ರೆಸ್‌ ಸೋಲುವುದು ನಿಶ್ಚಿತ; ಕಾಂಗ್ರೆಸ್‌ ವಿರುದ್ಧ ಬಿ.ಎಸ್‌ ಯಡಿಯೂರಪ್ಪ ವಾಗ್ದಾಳಿ

Leave A Reply