Home Karnataka State Politics Updates Akhanda Srinivasa murthy: ಕೊನೆಗೂ ಆ ಪಕ್ಷದಿಂದ ಅಕಾಡಕ್ಕಿಳಿದ ಅಖಂಡ ಶ್ರೀನಿವಾಸ ಮೂರ್ತಿ! ಪುಲಿಕೇಶಿ ನಗರದ...

Akhanda Srinivasa murthy: ಕೊನೆಗೂ ಆ ಪಕ್ಷದಿಂದ ಅಕಾಡಕ್ಕಿಳಿದ ಅಖಂಡ ಶ್ರೀನಿವಾಸ ಮೂರ್ತಿ! ಪುಲಿಕೇಶಿ ನಗರದ ಜನತೆಗೆ ಶಾಕ್!

Akhanda Srinivasa murthy
Image Source- vijaya karnataka

Hindu neighbor gifts plot of land

Hindu neighbour gifts land to Muslim journalist

Akhanda Srinivasa murthy: ಈ ಸಲದ ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ಮೂರೂ ಪಕ್ಷಗಳ ಅನೇಕ ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿದೆ. ಈ ಹಿನ್ನೆಲೆಯಲ್ಲಿ ಬಂಡಾಯ ಪರ್ವ ಜೋರಾಗಿದೆ. ಅಂತೆಯೇ ಕಾಂಗ್ರೆಸ್(Congress) ಟಿಕೆಟ್ ಆಕಾಂಕ್ಷಿಯಾಗಿದ್ದ ಅಖಂಡ ಶ್ರೀನಿವಾಸಮೂರ್ತಿ(Akhanda Srinivasa murthy) ಅವರು ಟಿಕೆಟ್ ಸಿಗದ ಕಾರಣ ಕಾಂಗ್ರೆಸ್​ಗೆ ಗುಡ್ ಬೈ ಹೇಳಿ ಸದ್ಯ ಬಿಎಸ್​ಪಿ(BSP) ಪಕ್ಷ ಸೇರಿದ್ದಾರೆ. ಸದ್ಯ ಬೆಂಗಳೂರಿನ ಪುಲಿಕೇಶಿನಗರ(Pulakeshi Nagar) ಕ್ಷೇತ್ರದ ಬಿಎಸ್​ಪಿ ಅಭ್ಯರ್ಥಿಯಾಗಿ ಈ ಬಾರಿ ಚುನಾವಣೆ ಎದುರಿಸಲಿದ್ದಾರೆ

ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ಅಭ್ಯರ್ಥಿಗಳೆಲ್ಲರೂ ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದೆಡೆ ಟಿಕೆಟ್ ಕೈ ತಪ್ಪಿದ ಅಸಮಾಧಾನಿತರು ಮರದಿಂದ ಮರಕ್ಕೆ ಜಿಗಿಯುವಂತೆ ಆಕಡೆ ಇಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಹಾರಾಡುತ್ತ ಪಕ್ಷಾಂತರ ಪರ್ವ ನಡೆಸಿದ್ದಾರೆ. ಅಂತೆಯೇ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಖಂಡ ಶ್ರೀನಿವಾಸಮೂರ್ತಿ ಅವರು ಟಿಕೆಟ್ ಸಿಗದ ಕಾರಣ ಕಾಂಗ್ರೆಸ್​ಗೆ ಗುಡ್ ಬೈ ಹೇಳಿ ಬಿಎಸ್​ಪಿ ಪಕ್ಷ ಸೇರಿದ್ದಾರೆ. ಬೆಂಗಳೂರಿನ ಪುಲಿಕೇಶಿನಗರ ಕ್ಷೇತ್ರದ ಬಿಎಸ್​ಪಿ ಅಭ್ಯರ್ಥಿಯಾಗಿ ಈ ಬಾರಿ ಚುನಾವಣೆ ಎದುರಿಸಲಿದ್ದಾರೆ. ಕಾಂಗ್ರೆಸ್​ಗೆ ಪ್ರಬಲ ಪೈಪೋಟಿ ನೀಡಲು ಅಖಂಡ ಶ್ರೀನಿವಾಸ ಮೂರ್ತಿ ಸಜ್ಜಾಗಿದ್ದಾರೆ.

ಅಂದಹಾಗೆ ಪುಲಿಕೇಶಿ ನಗರದ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ಸಿನ ಹಾಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು, ಕಳೆದ ಚುನಾವಣೆಯಲ್ಲಿ 83,000 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಅಲ್ಲದೆ ಪ್ರಮುಖ ದಲಿತ ಶಾಸಕ ಎಂದೂ ಗುರುತಿಸಿಕೊಂಡಿದ್ದರು. ಆದರೆ ಈ ಬಾರಿ ಅವರಿಗೆ ಕೈ ಟಿಕೆಟ್‌ ತಪ್ಪಿದೆ. ಹೀಗಾಗಿ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದು, ಜೆಡಿಎಸ್ ಇಲ್ಲವೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೀಗ ಎಲ್ಲರ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡಿದ ಶ್ರೀನಿವಾಸಮೂರ್ತಿ ಇದೀಗ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷ ಸೇರ್ಪಡೆಗೊಂಡಿದ್ದಾರೆ.

ಇನ್ನು ಅಖಂಡ ಶ್ರೀನಿವಾಸಮೂರ್ತಿಗೆ ಕಾಂಗ್ರೆಸ್ ಟಿಕೆಟ್ ನೀಡದಿರಲು ಕಾರಣವೇನು? ಎಂದು ನೋಡೋದಾದರೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಅವರ ಹೆಸರು ಹೇಳಿ ಬಂದಿತ್ತು. ಅಖಂಡ ಶ್ರೀನಿವಾಸಮೂರ್ತಿ ಅವರ ಸಂಬಂಧಿ ನವೀನ್ ಎಂಬಾತ ಪ್ರವಾದಿ ಪೈಗಂಬರ್ ಅವರ ಕುರಿತು ನಿಂದನೆ ಮಾಡಿ ಫೇಸ್​ಬುಕ್​ನಲ್ಲಿ ಪೋಸ್ಟೊಂದ್ನನು ಹರಿಬಿಟ್ಟಿದ್ದು ಈ ಪ್ರಕರಣ ವಿರೋಪಕ್ಕೆ ತೆರಳಿತ್ತು. ಪ್ರವಾದಿ ನಿಂದನೆ ಆರೋಪದಡಿಯಲ್ಲಿ ಕೆಲವು ಕಿಡಿಗೇಡಿಗಳು ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಇಟ್ಟಿದ್ದರು. ಹಲವು ವಾಹನಗಳನ್ನು ಸುಟ್ಟು ಹಾಕಿದ್ದರು. ಅಲ್ಲದೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೂ ಬೆಂಕಿ ಇಡಲಾಗಿತ್ತು. ಈ ವೇಳೆ ನಡೆದ ಪೊಲೀಸ್ ಗೊಲಿಬಾರ್‌ಗೆ ಮೂವರು ಬಲಿಯಾಗಿದ್ದರು.

ಈ ಘಟನೆಯಲ್ಲಿ ಕಾಂಗ್ರೆಸ್ ಮಾಜಿ ಮೇಯರ್ ಸಂಪತ್ ರಾಜ್ ಬಂಧನವೂ ಆಗಿತ್ತು. ಈ ನಡುವೆ ಸಂಪತ್ ರಾಜ್ ಡಿಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡ ಹಿನ್ನೆಲೆಯಲ್ಲಿ ಭಿನ್ನಾಭಿಪ್ರಾಯ ತಲೆಧೋರಿತ್ತು. ಸಿದ್ದರಾಮಯ್ಯ ಬಣ ಅಖಂಡ ಜೊತೆಗೆ ನಿಂತರೆ ಡಿಕೆಶಿ ಅಖಂಡ ವಿರುದ್ಧವಾಗಿದ್ದರು. ಇದರಿಂದ ನೊಂದುಕೊಂಡಿದ್ದ ಅಖಂಡ ಹೈಕಮಾಂಡ್‌ಗೆ ದೂರನ್ನು ನೀಡಿದ್ದರು. ನಂತರದಲ್ಲಿ ಬಣ ಜಗಳ ತೆರೆಮರೆಯಲ್ಲೇ ಮುಂದುವರಿದಿತ್ತು. ಈ ನಡುವೆ ಅಖಂಡಗೆ ಟಿಕೆಟ್‌ ನೀಡುವ ವಿಚಾರವಾಗಿಯೂ ವಿರೋಧ ವ್ಯಕ್ತವಾಗಿತ್ತು. ಆದರೆ ಜಮೀರ್ ಅಹ್ಮದ್ ಖಾನ್ ಅಖಂಡಗೆ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡಿದ್ದರು.

ಈ ನಡುವೆ ಪುಲಕೇಶಿನಗರ ಕ್ಷೇತದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ನಕಾರಾತ್ಮಕ ವರದಿ ಬಂದಿದೆ. ಈ ನಿಟ್ಟಿನಲ್ಲಿ ಅಖಂಡ ಶ್ರೀನಿವಾಸ್ ಮೂರ್ತಿ ಅಭ್ಯರ್ಥಿಯಾದರೆ ಮುಸ್ಲಿಂ ಸಮುದಾಯದ ಮತಗಳು ಕೈತಪ್ಪಲಿದೆ ಎಂಬ ವರದಿ ಹಿನ್ನೆಲೆಯಲ್ಲಿ ಅಖಂಡಗೆ ಟಿಕೆಟ್ ನೀಡುವ ಸಾಧ್ಯತೆ ಕಡಿಮೆ ಎಂಬ ಸುದ್ದಿಯೂ ಹರಿದಾಡಿತ್ತು. ಸದ್ಯ ಅದರಂತೆಯೇ ಆಗಿದ್ದು ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ಕೈ ತಪ್ಪಿದೆ. ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ ಅವರು BSP ಪಾರ್ಟಿ ಸೇರಿಯೂ ಆಗಿದೆ. ಇನ್ನು ಏನಿದ್ದರೂ ಮೇ 13ರಂದು ಪುಲಿಕೇಶಿ ನಗರ ಯಾರ ಕೈ ವಶವಾಗುತ್ತದೆ ಎಂದು ನೋಡಬೇಕಷ್ಟೆ.

ಇದನ್ನೂ ಓದಿ: Benefits of growing a beard : ಪುರುಷರೇ, ಗಡ್ಡ-ಮೀಸೆ ಬೆಳೆಸೋದ್ರಿಂದ ನಿಮಗಿದೆ ಅನೇಕ ಲಾಭ! ಇಲ್ಲಿದೆ ನೋಡಿ ನೀವರಿಯದ ಇಂಟ್ರೆಸ್ಟಿಂಗ್ ವಿಚಾರ