Mangalore: ನವವಿವಾಹಿತೆ ವಿಷ ಸೇವಿಸಿ ಆತ್ಮಹತ್ಯೆ!

Share the Article

Mangalore Suicide Case: ನವ ವಿವಾಹಿತೆಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಎ.23ರಂದು ನಡೆದಿದೆ. ಕೌಶಲ್ಯ ಎಂಬ ನವವಿಹಾಹಿತೆಯೇ ಆತ್ಮಹತ್ಯೆ(Mangalore Suicide Case) ಮಾಡಿಕೊಂಡ ಮಹಿಳೆ. ಇಂದಬೆಟ್ಟು ಗ್ರಾಮದ ಕೊಪ್ಪದಕೋಡಿ ನಿವಾಸಿ ಶ್ರೀಮತಿ ದೇವಕಿಯವರ ಪುತ್ರಿ ಕೌಶಲ್ಯ ವಿಷಯ ಸೇವಿಸಿ ಆತ್ಮಹತ್ಯೆ ಮಾಡಿದ್ದಾರೆ.

ಸೂರ್ಯಬೆಟ್ಟು ನಿವಾಸಿ ಜೊತೆ ಇವರ ಮದುವೆ ಇತ್ತೀಚೆಗಷ್ಟೇ ನಡೆದಿತ್ತು. ಇವರದು ಪ್ರೇಮವಿವಾಹವಾಗಿತ್ತು. ಎರಡು ದಿನಗಳ ಹಿಂದೆ ಇವರು ವಿಷ ಸೇವಿಸಿದ್ದರು. ಹಾಗಾಗಿ ಇವರನ್ನು ಆ ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಇವರು ಮೃತಪಟ್ಟಿರುವ ವರದಿಯಾಗಿದೆ.

Leave A Reply