Pregnancy Diet: ಗರ್ಭಿಣಿಯರು ಮತ್ತು ಆ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಈ ಹಣ್ಣನ್ನು ತಿನ್ಲೇಬಾರ್ದು !
Pregnancy diet : ಪಪ್ಪಾಯಿ ಎಲ್ಲಾ ವರ್ಗದ ಜನ ತಿನ್ನಬಹುದಾದ ಎಕನಾಮಿಕಲ್ ಆಹಾರ. ಈ ಹಣ್ಣು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನುವುದನ್ನು ಬೇರೆ ಹೇಳಬೇಕಿಲ್ಲ. ಅದು ಒದಗಿಸುವ ಶಕ್ತಿ, ಕೊಬ್ಬು, ಹಣ್ಣಿನಲ್ಲಿರುವ ಫೈಬರ್ ಅಂಶ, ಕಾರ್ಬೋಹೈಡ್ರೇಟ್, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಮೆಗ್ನೀಸಿಯಮ್, ಸತು, ಮ್ಯಾಂಗನೀಸ್, ತಾಮ್ರ, ಸೆಲೆನಿಯಮ್, ವಿಟಮಿನ್ಸ್ ಸೇರಿದಂತೆ ಹಲವು ಪೋಷಕಾಂಶಗಳ ಗಣಿ ಈ ಪಪ್ಪಾಯ. ಜತೆಗೆ ಇದು ಅನೇಕ ರೀತಿಯ ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುವುದರಿಂದ, ಇದು ದೇಹದಲ್ಲಿ ಸ್ವತಂತ್ರ ರಾಡಿಕಲ್‌ಗಳ (Free Radical) ರಚನೆಯನ್ನು ತಡೆಯುತ್ತದೆ. ಇದರಿಂದಾಗಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಆದಾಗ್ಯೂ, ಕೆಲವರು ಪಪ್ಪಾಯಿ ಸೇವನೆಯನ್ನು ಕಡಿಮೆ ಮಾಡಬೇಕು.
ಕೆಲವು ರೋಗಗಳಿವೆ: ಇದರಲ್ಲಿ ಪಪ್ಪಾಯಿ ಸೇವನೆಯು ಪ್ರಯೋಜನಕ್ಕಿಂತ ಹಾನಿಯನ್ನುಂಟು ಮಾಡುತ್ತದೆ. ಅವ್ಯಾವುವು ಎನ್ನುವುದನ್ನು ನೋಡುವ ಸಮಯ ಇದು.
ಅಲರ್ಜಿಗಳು: ವೆಬ್‌ಎಮ್‌ಡಿಯಲ್ಲಿ ಪ್ರಕಟವಾದ ಸುದ್ದಿ ಲೇಖನದ ಪ್ರಕಾರ, ಕೆಲವು ಜನರು ಕೆಲವೊಮ್ಮೆ ಪಪ್ಪಾಯಿಗೆ ಅಲರ್ಜಿಯನ್ನು ಹೊಂದಿರುತ್ತಾರೆ. ಅವರಲ್ಲಿ ಇದು ಊತ, ತಲೆತಿರುಗುವಿಕೆ, ತಲೆನೋವು, ಚರ್ಮದ ದದ್ದು ಮುಂತಾದ ಸಮಸ್ಯೆಗಳನ್ನು ಉಂಟು ಮಾಡಬಹುದು. ಹಾಗಾಗಿ ಪಪ್ಪಾಯಿ ತಿಂದ ನಂತರ ನಿಮಗೆ ವಾಕರಿಕೆ ಅಥವಾ ತಲೆಸುತ್ತು ಬರುವವರು ಈ ಹಣ್ಣು ಪಪ್ಪಾಯಿ ತಿನ್ನಬೇಡಿ. ಆದರೆ ಇದು ಎಲ್ಲರಿಗೂ ಆಗುವುದಿಲ್ಲ. ಕೆಲವೇ ಕೆಲವು ಈ ಹಣ್ಣಿನ ಅಲರ್ಜಿ ಹೊಂದಿರುವವರಿಗೆ ಮಾತ್ರ.
ಗರ್ಭಾವಸ್ಥೆ: ಗರ್ಭಾವಸ್ಥೆಯಲ್ಲಿ (Pregnancy diet) ಪಪ್ಪಾಯಿಯನ್ನು ಸೇವಿಸಬಾರದು. ಹಸಿ ಪಪ್ಪಾಯಿಯಲ್ಲಿ ಲ್ಯಾಟೆಕ್ಸ್ (ಮೇಣ ಪದಾರ್ಥ) ಅಧಿಕವಾಗಿದ್ದು, ಅದು ಗರ್ಭಾಶಯದ ಗೋಡೆಯಲ್ಲಿ ಸಂಕೋಚನವನ್ನು ಹೆಚ್ಚಿಸುತ್ತದೆ. ಪಪ್ಪಾಯಿಯಲ್ಲಿರುವ ಪಪೈನ್ ದೇಹದಲ್ಲಿನ ಜೀವಕೋಶ ಪೊರೆಗಳನ್ನು ಹಾನಿಗೊಳಿಸುತ್ತದೆ ಎಂದು ನಂಬಲಾಗಿದೆ. ಗರ್ಭಾಶಯದಲ್ಲಿ ಬೆಳೆಯುತ್ತಿರುವ ಮಗುವಿನ ಬೆಳವಣಿಗೆಗೆ ಜೀವಕೋಶ ಪೊರೆಗಳು ಬಹಳ ಮುಖ್ಯ. ಈ ಕಾರಣದಿಂದಾಗಿ, ಗರ್ಭಿಣಿಯರು ಹಸಿ ಪಪ್ಪಾಯಿಯನ್ನ ಮುಟ್ಟಿ ಕೂಡಾ ನೋಡಬಾರದು.
ಅಷ್ಟೇ ಅಲ್ಲದೆ, ಈ ಹಣ್ಣು ಉಷ್ಣ ಕಾರಕ. ಉಷ್ಣ ಪ್ರಕೃತಿಯ ಜನ, ಮುಖ್ಯವಾಗಿ ಗರ್ಭಿಣಿಯರು ಈ ಹಣ್ಣನ್ನು ತಿನ್ನದೇ ಇರೋದೇ ಒಳ್ಳೆಯದು.
ವಾಕರಿಕೆ ಮತ್ತು ವಾಂತಿ: ಪಪ್ಪಾಯಿಯನ್ನು ತಿನ್ನುವುದು ಸಾಮಾನ್ಯವಾಗಿ ವಾಕರಿಕೆ ಮತ್ತು ವಾಂತಿಗೆ ಕಾರಣವಾಗಬಹುದು. ಹಸಿ ಪಪ್ಪಾಯಿಯಲ್ಲಿ ಲ್ಯಾಟೆಕ್ಸ್ ಇದ್ದು, ಇದರಲ್ಲಿ ಪಪೈನ್ ಎಂಬ ಕಿಣ್ವವಿದ್ದು, ಇದನ್ನು ಅತಿಯಾಗಿ ತಿಂದರೆ ಅನ್ನನಾಳಕ್ಕೆ ಹಾನಿಯಾಗುತ್ತದೆ. ವಾಕರಿಕೆ ಮತ್ತು ವಾಂತಿ ಸಂಭವಿಸಬಹುದು. ಆದರೆ ಇದು ಎಲ್ಲರಿಗೂ ಆಗುವುದಿಲ್ಲ.
ಜೀರ್ಣಕಾರಿ ಸಮಸ್ಯೆಗಳು: ಪಪ್ಪಾಯಿಯಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ. ಆದರೆ ಈಗಾಗಲೇ ಜೀರ್ಣಕಾರಿ ಸಮಸ್ಯೆ ಇರುವವರಿಗೆ ಜೀರ್ಣಕ್ರಿಯೆಯೂ ಹದಗೆಡಬಹುದು. ಪಪ್ಪಾಯಿಯಲ್ಲಿರುವ ಲ್ಯಾಟೆಕ್ಸ್ ಸಹ ಹೊಟ್ಟೆಯ ತೊಂದರೆಗೆ ಕಾರಣವಾಗಬಹುದು. ಇದು ಅತಿಸಾರಕ್ಕೂ ಕಾರಣವಾಗಬಹುದು. ಹಾಗಾಗಿ ಪಪ್ಪಾಯಿಯನ್ನು ಅತಿಯಾಗಿ ಸೇವಿಸಬಾರದು. ಪಪ್ಪಾಯಿ ತಿನ್ನುವವರು ಸಿಪ್ಪೆಯ ಭಾಗದಲ್ಲಿ ಒಂದಷ್ಟು ಹಣ್ಣಿನ ಭಾಗವನ್ನೂ ಬಿಟ್ಟು ತಿನ್ನೋದು ಒಳಿತು. ಈ ರೀತಿ ಮಾಡುವುದರಿಂದ ಲ್ಯಾಟೆಕ್ಸ್ ಮೇಣ ಹೊಟ್ಟೆ ಸೇರದಂತೆ ತಡೆಯಬಹುದು.
ಇದನ್ನೂ ಓದಿ: BARC Recruitment 2023: ನೀವೇನಾದರೂ 10th 12th ಪಾಸ್ ಆಗಿದ್ದೀರಾ? ನಿಮಗಿದೆ 4300 ಕ್ಕೂ ಹೆಚ್ಚು ಖಾಲಿ ಹುದ್ದೆಗಳು!