Nivedita Gowda: ಅಬ್ಬಾಬ್ಬಾ ನಿವೇದಿತಾ ಗೌಡ ಕೊಡೋ ಸಮ್ಮರ್ ಟಿಪ್ಸ್ ಕೇಳಿದ್ರೆ ನೀವೇ ಶಾಕ್ ಆಗ್ತೀರಾ! ಬೇಸಗೆಯಲ್ಲಿ ನಿವಿ ಏನೆಲ್ಲಾ ತಿಂತಾರೆ, ಏನೆಲ್ಲಾ ಹಾಕ್ತಾರೆ ಗೊತ್ತಾ?

Nivedita Gowda: ಕನ್ನಡ ಕಿರುತೆರೆ ನಟಿ, ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ (Nivedita Gowda )ಚಂದನ್ ಶೆಟ್ಟಿ ಮದುವೆ ಆದ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟಿವ್ ಆಗಿದ್ದು ಆಗಾಗ ಸುದ್ಧಿಯಾಗ್ತಿರ್ತಾರೆ. ಆಗಾಗ ಬ್ಯೂಟಿ ಮೇಂಟೇನ್ ಬಗ್ಗೆನೂ ಟಿಪ್ಸ್ ಕೊಡ್ತಾ ಇರ್ತಾರೆ. ಸದ್ಯ ಇದೀಗ ಬೇಸಿಗೆಯಲ್ಲಿ ಯಾವ ರೀತಿ ಮೇಕಪ್ ಮಾಡಿಕೊಳ್ಳಬೇಕು? ಯಾವ ಬಣ್ಣದ ಉಡುಪು ಬೆಸ್ಟ್‌ ಎಂದು ಫಾಲೋವರ್ಸ್‌ಗೆ ಸಲಹೆ ಕೊಟ್ಟಿದ್ದಾರೆ. ಅಂದಹಾಗೆ ನಿವೇದಿತಾ ನೀಡಿದ ಸಲಹೆ ಆದರೂ ಏನು ಗೊತ್ತಾ?

 

ಹೌದು, ಬೇಸಿಗೆ ದಿನಗಳಲ್ಲಿ ತಾನು ಹೇಗಿರುತ್ತೇನೆ, ನೀವು ಹೇಗಿರಬೇಕು ಎಂಬುದರ ಬಗ್ಗೆ ತನ್ನ ಫಾಲೋವರ್ಸ್ ಗೆ ಕನ್ನಡ ಕಿರುತೆರೆ ಬೇಬಿ ಡಾಲ್ ನಿವೇದಿತಾ ಗೌಡ ಸಮ್ಮರ್ ಟಿಪ್ಸ್ ಗಳನ್ನು ಹಂಚಿಕೊಂಡಿದ್ದಾರೆ.

ಬೇಸಿಗೆಯಲ್ಲಿ ನಾನು ಹೇಗೆ ರೆಡಿಯಾಗುತ್ತೀನಿ ಎಂದು ನಿಮಗೆ ತೋರಿಸುತ್ತೀನಿ ಎಂದು ವಿಡಿಯೋ ಶುರುಮಾಡಿದ ನಿವಿ “ಸಾಮಾನ್ಯವಾಗಿ ಬೇಸಿಗೆಯಲ್ಲಿ ನಾನು ಹೆಚ್ಚಿಗೆ ರೆಡಿಯಾಗುವುದಿಲ್ಲ ಕಡಿಮೆ ಮೇಕಪ್ ಮಾಡಿಕೊಳ್ಳುತ್ತೀನಿ ಏಕೆಂದರೆ ತುಂಬಾ ಬೆವರುತ್ತೀನಿ uncomfortabel feel ಇರುತ್ತೆ. ಬೇಸಿಗೆ ಸಮಯದಲ್ಲಿ ಬೆಳಗ್ಗಿನಿಂದ ಸಂಜೆವರೆಗೂ ಮುಖ ಫ್ರೆಶ್ ಇರಬೇಕು ಅಂದ್ರೆ ಕಡಿಮೆ ಮೇಕಪ್ ಮಾಡಿಕೊಳ್ಳುತ್ತೀನಿ ಮಾಯಿಶ್ಚರೈಸರ್‌ ಹಚ್ಚಿಕೊಂಡ ನಂತರ ಸನ್‌ಕ್ರೀಮ್ ಹಾಕಿಕೊಳ್ಳುವೆ” ಎಂದಿದ್ದಾರೆ.

ಇನ್ನು “ಸಮ್ಮರ್ ಅಂದ್ರೆ ಹಣೆ ಮೇಲೆ ಪಿಂಪಲ್ ಬರುತ್ತೆ ನನಗೆ. ಅದಿಕ್ಕೆ ಚೆನ್ನಾಗಿ ನೀರು ಕುಡಿಯುವ ಸಭ್ಯಾಸ ಮಾಡಿಕೊಂಡಿರುವೆ. ನೀರು ಕುಡಿಯುವುದಕ್ಕೆ ಬೇಸರ ಆಗುತ್ತೆ ಅಂತ ಸೌತೆಕಾಯಿ ಪುದೀನಾ ಹಾಕಿಡುವೆ. ಇದರಿಂದ ಫ್ರೆಶ್ ಫೀಲ್ ಆಗುತ್ತೆ. ಜ್ಯೂಸ್ ಮತ್ತು ಎಳನೀರು ಹೆಚ್ಚಿಗೆ ಕುಡಿಯುವೆ. ಬೇಸಿಗೆಯಲ್ಲಿ ಮನೆಯಿಂದ ಹೊರಡುವ ಮುನ್ನ ಸನ್‌ ಕ್ರೀಮ್, ಸನ್‌ ಸ್ಪ್ರೆ, ಬಾಡಿ ಲೋಷನ್, ಕಾಂಪ್ಯಾಕ್ಟ್‌ ಹಾಗೂ ಲಿಪ್‌ಸ್ಟಿಕ್‌ ಬಳಸುವೆ’ ಎಂದು ನಿವೇದಿತಾ ಮಾತನಾಡಿದ್ದಾರೆ.

ಅಲ್ಲದೆ “ಕೂದಲನ್ನು ಫ್ರೀ ಅಗಿ ಬಿಡುವುದು ಅಂದ್ರೆ ತುಂಬಾನೇ ಇಷ್ಟ ಆದರೆ ಮುಂದೆ ಭಾಗ ಬೆವರಿ ಹಾಳಾಗುತ್ತದೆ ಅದಿಕ್ಕೆ ಹೇರ್‌ ಬ್ಯಾಂಡ್‌ ಹಾಕಿಕೊಳ್ಳಬಹುದು ಅದಿಲ್ಲ ಅಂದ್ರೆ ಲೂಸ್‌ ಅಗಿ ಪೋನಿ ಹಾಕುವೆ. ಬೇಸಿಯಲ್ಲಿ ಹೆಚ್ಚಿಗೆ ಆಭರಣ ಧರಿಸುವುದಿಲ್ಲ ತುಂಬಾ ಸಿಂಪಲ್ ಚೆನ್ನಾಗಿರುವ ಓಲೆ ಅಥವಾ ಕಾಲಿಗೆ ಚೈನ್ ಹಾಕುತ್ತೀನಿ. ಶೂಗಳನ್ನು ಧರಿಸಿದರೆ ಆರಾಮ್ ಆಗಿ ವಾಕಿಂಗ್ ಮಾಡಬಹುದು” ಎಂದಿದ್ದಾರೆ ನಿವಿ

ಇಷ್ಟೇ ಅಲ್ಲದೆ ಸಮ್ಮರ್ ಡ್ರೆಸ್ ಬಗ್ಗೆ ಮಾತನಾಡಿದ ಅವರು “ಬೇಸಿಯಲ್ಲಿ ತೆಳು ಬಟ್ಟೆ ಮತ್ತು ಚಡ್ಡಿ ಸ್ಕರ್ಟ್‌ನ ಆಯ್ಕೆ ಮಾಡಿಕೊಳ್ಳುತ್ತೀನಿ. ಚೀನ್ಸ್‌ ಧರಿಸುವುದರಿಂದ ತುಂಬಾ ಹಿಂಸೆ ಅಗುತ್ತೆ. ಶರ್ಟ್‌ಗೆ ಶಾರ್ಟ್ಸ್‌ ಹಾಕುತ್ತೀನಿ. ಲೈಟ್‌ ಅಥವಾ ಬ್ರೈಟ್‌ ಬಣ್ಣಗಳನ್ನು ಬಳಸುತ್ತೀನಿ ಡಾರ್ಕ್‌ ಬಣ್ಣ ಇಷ್ಟ ಆಗುವುದಿಲ್ಲ. ಕ್ರಾಪ್ ಟಾಪ್‌ಗಳು ಸಮ್ಮರ್‌ನಲ್ಲಿ ಗಾಳಿಯಾಡುವುದಕ್ಕೆ ಸಹಾಯ ಮಾಡುತ್ತೆ. ಹೆಚ್ಚಿನ ಬಿಳಿ ಬಣ್ಣ ಬಳಸಿ ನೆಮ್ಮದಿಯಾಗಿ” ಇರಬಹುದು ಎಂದು ನಿವೇದಿತಾ ಹೇಳಿದ್ದಾರೆ.

ಪ್ರತಿಯೊಬ್ಬರು ಕೇಳುತ್ತಾರೆ ಯಾಕೆ ಶಾರ್ಟ್‌ ಧರಿಸುತ್ತೀರಾ ಎಂದು ಬೇಸಿಗೆಯಲ್ಲಿ ಅದೇ ಕಂಫರ್ಟ್‌ ಕೊಡುತ್ತದೆ ಅದರಲ್ಲೂ ಹೆಚ್ಚಿಗೆ ಶಾರ್ಟ್‌ ಬಳಸುವವರಿಗೆ ಸೂಪರ್ ಕಂಫರ್ಟ್‌ ಕೊಡುತ್ತೆ. ಒಂದು ದಿನ ಗಿಚ್ಚಿ ಗಿಲಿಗಿಲಿ ರಿಹರ್ಸಲ್‌ ಸಮಯದಲ್ಲಿ ಕಪ್ಪು ಬಣ್ಣದ ಸೆಲ್ವಾರ್ ಧರಿಸಿ ಹೋಗಿದ್ದೆ ಆ ತುಂಬಾ ಕಷ್ಟ ಪಟ್ಟಿದ್ದೀನಿ. ಯಾಕಾದರೂ ಸೆಲ್ವಾರ್ ಧರಿಸಿದೆ ಅನಿಸಿತ್ತು. ಗೊತ್ತಿಲ್ಲದೆ ಬೇಸಿಗೆ ಕಾಲ ಆರಂಭದಲ್ಲಿ ಕಪ್ಪು ಬಣ್ಣದ ಬಟ್ಟೆನೇ ಹೆಚ್ಚಿಗೆ ಧರಿಸಿದ್ದೆ. ಬಿಸಿಲಿಗೆ ನನ್ನ ಚರ್ಮ ಉರಿಯುತ್ತಿತ್ತು. ಬಿಳಿ ಬಣ್ಣದ ಬಟ್ಟೆ ಆಯ್ಕೆ ಮಾಡಿಕೊಂಡ ಕ್ಷಣ ನೆಮ್ಮದಿಯಾಗಿ ಪ್ರಯಾಣ ಮಾಡಲು ಆರಂಭಿಸಿದೆ ಎಂದು ನಿವಿ ಹೇಳಿದ್ದಾರೆ.

Leave A Reply

Your email address will not be published.