Leelavathi – Vinod Raj : ವಿನೋದ್ ರಾಜ್ ಮದ್ವೆ ಆದದ್ದು ಮನೆ ಕೆಲಸದ ಹೆಂಗಸನ್ನು – ಮೇಹು ನೀಡಿದ್ರು ಬಹು ಶಾಕಿಂಗ್ ಮಾಹಿತಿ !

Leelavathi – Vinod Raj: ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್ ರಾಜ್ (Leelavathi – Vinod Raj) ಮದುವೆ ಬಗ್ಗೆ ಸಾವಿರಾರು ಗೊಂದಲಗಳು, ಪ್ರಶ್ನೆಗಳು ಈಗಾಗಲೇ ಹರಿದಾಡುತ್ತಿದ್ದು ಅಭಿಮಾನಿಗಳು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಿದ್ದಾರೆ. ಇದರ ನಡುವೆ ಮದ್ವೆ ಆಗಿದ್ದು ಮನೆ ಕೆಲಸದವಳನ್ನ ಎಂದು ಸೀಕ್ರೆಟ್ ಮದ್ವೆ ಬಗ್ಗೆ ಪ್ರಕಾಶ್ ರಾಜ್ ಶಾಕಿಂಗ್ ಹೇಳಿಕೆ ನೀಡಿದ್ದು ಮತ್ತೇ ವಿನೋದ್ ರಾಜ್ (Vinod Raj) ಅವರ ಮದುವೆ ವಿಚಾರ ದೊಡ್ಡ ಸುದ್ದಿಯಾಗಿದೆ.

 

ಮುಖ್ಯವಾಗಿ ಫಸ್ಟ್ ಡೇ ಫಸ್ಟ್ ಶೋ ಯೂಟ್ಯೂಬ್ ವಾಹಿನಿ ಜೊತೆ ಮಾತನಾಡಿದ ಪ್ರಕಾಶ್ ರಾಜ್, ವಿನೋದ್ ರಾಜ್ ಮದುವೆಯನ್ನು ಸೀಕ್ರೆಟ್ ಆಗಿ ಇಟ್ಟಿದ್ದೇಕೆ ಎಂದು ಬಹಿರಂಗ ಪಡಿಸಿದರು. ವಿನೋದ್ ರಾಜ್ ಮನೆ ಕೆಲಸ ಮಾಡುತ್ತಿದ್ದ ಯುವತಿಯನ್ನೇ ಮದುವೆಯಾಗಿದ್ದಾರೆ ಹಾಗಾಗಿ ಮದುವೆ ವಿಚಾರ ಮುಚ್ಚಿಟ್ಟಿದ್ದಾರೆ ಅನಿಸುತ್ತೆ ಎಂದು ಹೇಳಿದ್ದಾರೆ.

ಮಗ ಹುಟ್ಟಿದ್ದು 2001ರಲ್ಲಿ. ಹಾಗಿದ್ದಾಗ ಅವರ ಮದುವೆ 1998-2000 ಒಳಗೆ ಆಗಿದೆ. ಮನೆ ಕೆಲಸ ಮಾಡುತ್ತಿದ್ದ ಯುವತಿಯನ್ನೇ ಮದುವೆಯಾಗಿದ್ದು, ಹಾಗಾಗಿ ಎಲ್ಲೂ ಹೇಳಿಕೊಂಡಿಲ್ಲ’ ಎಂದು ಹೇಳಿದ್ದಾರೆ. ‘ಅದು ನಿಜನೇ ಆಗಿದ್ರೆ ಹೆಮ್ಮೆ ಇಂದ ಹೇಳಿಕೊಳ್ಳಬೇಕು. ಅದು ತಪ್ಪಲ್ಲ. ಮನೆ ಕೆಲಸ ಮಾಡೋ ಹೆಣ್ಣಿಗೆ ಬಾಳು ಕೊಟ್ಟಿದ್ದಾರೆ ಅಂದರೆ ಹೆಮ್ಮೆ ಇಂದ ಹೇಳುವ ವಿಷಯ . ಆದರೆ ಮದುವೆ ಯಾವ ಕಾರಣಕ್ಕಾಗಿ ಮುಚ್ಚಿಟ್ಟರು ಎಂದು ಪ್ರಶ್ನೆ ಮಾಡಿದ್ದಾರೆ.

ನಿರ್ದೇಶಕ ಪ್ರಕಾಶ್ ರಾಜ್ ಮೆಹು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಬಹಿರಂಗ ಪಡಿಸಿ ಅಚ್ಚರಿ ಮೂಡಿಸಿದ್ದರು. ಜೊತೆಗೆ ಇದಕ್ಕೆಲ್ಲ ಮಗನ ಮಾರ್ಕ್ಸ್ ಕಾರ್ಡ್ ಸಾಕ್ಷಿ ಎಂದು ಹೇಳಿದ್ದರು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಟಿ ಲೀಲಾವತಿ ಅವರೇ ಪ್ರತಿಕ್ರಿಯೆ ನೀಡಿ ಮಗನ ಮದುವೆ ಆಗಿದೆ ಎಂದು ಒಪ್ಪಿಕೊಂಡಿದ್ದರು. ಈಗಾಗಲೇ ವಿನೋದ್ ರಾಜ್ ಕುಟುಂಬದ ಫೋಟೋ ಬಹಿರಂಗವಾಗುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗಿದೆ.ಅಲ್ಲದೇ ಸ್ವತಃ ವಿನೋದ್ ರಾಜ್ ಕೂಡ ಪ್ರತಿಕ್ರಿಯೆ ನೀಡುವ ಮೂಲಕ ಸೀಕ್ರೆಟ್ ಮದುವೆ ಬಗ್ಗೆ ಮೌನ ಮುರಿದಿದ್ದರು.

ಪ್ರಕಾಶ್ ಮಾತಿಗೆ ಪ್ರತಿಕ್ರಿಯೆ ನೀಡಿದ್ದ ವಿನೋದ್ ರಾಜ್, ದುಸ್ಮನ್ ಕಿದರ್ ಹೈ ಅಂದರೆ ಊರು ತುಂಬಾ ಹೈ ಅಂತರಲ್ಲ ಹಾಗೆ. ಒಟ್ಟಿನಲ್ಲಿ ಜೀವನದಲ್ಲಿ ಯಾರು ಏನು ಮಾಡಬಾರದಾ, ನಮ್ಮಿಂದ ಯಾರಿಗಾದ್ರೂ ತೊಂದರೆ ಆಗಿದ್ಯಾ ಅದನ್ನು ಮಾತನಾಡಿ, ಏನನ್ನು ಕಂಡಿಹಿಡಿಯುತ್ತಿದ್ದೀರಾ’ ಎಂದು ಕಿಡಿ ಕಾರಿದರು. ‘ತಾಯಿ ಏನು ಹೇಳ್ತಾರೋ ನಾವು ಹಾಗೆ ನಡೆಯೋದು. ಸುಮ್ಮನಿರು ಅಂತಾರೆ ಅದಕ್ಕೆ ನಾನು ಸುಮ್ಮನೆ ಇರೋದು. ನಮ್ಮಿಂದ ಯಾರಿಗಾದ್ರು ತೊಂದರೆ ಆಗುತ್ತಿದ್ಯಾ, ತೊಂದರೆ ಆಗುವ ವಿಷಯಕ್ಕೆ ನಾವು ತಲೆನೇ ಇಡಲ್ಲ. ನಾನು ನಮ್ಮ ಅಮ್ಮ ಯಾವುತ್ತು ಯಾರಿಗೂ ತೊಂದರೆ ಕೊಟ್ಟಿಲ್ಲ, ತಪ್ಪಾದ ಉತ್ತರ ನೀಡಲ್ಲ. ನಿಮ್ಮ ಮನಸ್ಥಿತಿ ಮನೋಭಾವ ಹೇಗಿದೆ. ಅದನ್ನು ಮೊದಲು ಸರಿ ಮಾಡಿಕೊಳ್ಳಿ’ ಎಂದು ಈ ಎಲ್ಲಾ ವಿಚಾರ ಬೆಳಕಿಗೆ ಬರಲು ಕಾರಣವಾದ ನಿರ್ದೇಶಕ ಪ್ರಕಾಶ್ ರಾಜ್ ಮೆಹು ವಿರುದ್ಧ ವಿನೋದ್ ರಾಜ್ ಕಿಡಿ ಕಾರಿದ್ದರು.

Image source : news 18

 

ಇದನ್ನೂ ಓದಿ: ಮದುವೆ ಗುಟ್ಟು ಬಹಿರಂಗವಾದ ಕೂಡಲೇ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡ್ರಾ ವಿನೋದ್‌ ರಾಜ್‌! ಜನ ಏನಂತಿದ್ದಾರೆ ನೋಡಿ!

Leave A Reply

Your email address will not be published.