Rahul Gandhi: ನಾಳೆ ಮತ್ತೊಮ್ಮೆ ರಾಜ್ಯಕ್ಕೆ ಕೇಂದ್ರ ನಾಯಕ ರಾಹುಲ್ ಗಾಂಧಿ ಆಗಮನ; ಬಾಗಲಕೋಟೆ, ವಿಜಯಪುರ ಜಿಲ್ಲೆ ಪ್ರವಾಸ
Central leader Rahul Gandhi: ವಿಜಯಪುರ: ವಿಧಾನಸಭೆ ಚುನಾವಣೆ ಇನ್ನೇನು ಕೆಲವು ದಿನಗಳು ಬಾಕಿ ಇದೆ. ಹೀಗಾಗಿ ರಾಜಕೀಯ ಚಟುವಟಿಕೆಗಳು ರಂಗೇರುತ್ತಿದೆ. ಈಗಾಗಲೇ ರಾಜಕೀಯ ನಾಯಕರು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಇದೀಗ ಮತದಾರರನ್ನು ಸೆಳೆಯಲು ಮೂರು ಪಕ್ಷದ ನಾಯಕರು ನಾನಾ ರೀತಿಯಲ್ಲಿ ಪಣ ತೊಟ್ಟಿದ್ದಾರೆ. ಅದರಲ್ಲೂ ಬಿಜೆಪಿಯವರು ಮತ್ತೆ ರಾಜ್ಯದಲ್ಲಿ ಕಮಲ ಅರಳಿಸಲು ನಾನಾ ಕಸರತ್ತು ನಡೆಸಿದ್ದಾರೆ. ಹೀಗಾಗಿ ಕೇಂದ್ರ ನಾಯಕರು ಆಗಾಗಾ ರಾಜ್ಯಕ್ಕೆ ಭೇಟಿ ನೀಡಿ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ.
ಇದೀಗ ಕೇಂದ್ರ ಕಾಂಗ್ರೆಸ್ ನಾಯಕರ ಸರದಿ ಆಗಿದೆ. ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನೆಲ್ಲೇ ಎರಡನೇ ಬಾರಿಗೆ ರಾಜ್ಯಕ್ಕೆ ರಾಹುಲ್ ಗಾಂಧಿಯುವರು(Central leader Rahul Gandhi) ಪ್ರವೇಶಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಕೋಲಾರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೀಗ ರಾಜ್ಯಕ್ಕೆ ಮೊತ್ತೊಮ್ಮೆ ರಾಹುಲ್ ಗಾಂಧಿ ಆಗಮಿಸುತ್ತಿದ್ದು, ಚುನಾವಣೆ ರಣಕಳಹೆ ಊದಲಿದ್ದಾರೆ.
ಹೌದು ನಾಳೆ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿದ್ದಾರೆ. ರಾಹುಲ್ ಗಾಂಧಿಯವರು ನಾಳೆ ಬೆಳಗ್ಗೆ 7.20ಕ್ಕೆ ದೆಹಲಿಯಿಂದ ಹೊರಟು ಹೈದರಾಬಾದ್ ತಲಪುತ್ತಾರೆ. ಹೈದರಾಬಾದ್ನಿಂದ ಬೆಳಿಗ್ಗೆ 10ಕ್ಕೆ ಹೊರಟು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯಲಿದ್ದಾರೆ. 10.50ಕ್ಕೆ ಹುಬ್ಬಳ್ಳಿಯಿಂದ ಕೂಡಲಸಂಗಮದತ್ತ ಪ್ರಯಾಣ ಬೆಳಸುವ ರಾಹುಲ್ ಗಾಂಧಿಯವರು 11.40ಕ್ಕೆ ಜಗಜ್ಯೋತಿ ಬಸವೇಶ್ವರರ ಐಕ್ಯ ಸ್ಥಳವನ್ನು ತಲುಪುತ್ತಾರೆ.
ನಂತರ ಮಧ್ಯಾಹ್ನ 12.10ರವರೆಗೆ ಕೂಡಲಸಂಗಮದಲ್ಲಿರುವ ಬಸವಣ್ಣನವರ ಐಕ್ಯ ಮಂಟಪಕ್ಕೆ ತೆರಳಿ ದರ್ಶನ ಪಡೆಯುತ್ತಾರೆ. ಬಳಿಕ ಬಸವ ಜಯಂತಿ ನಿಮಿತ್ತ ಕೂಡಲಸಂಗಮದ ಬಸವ ಮಂಟಪದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮ ಮಧ್ಯಾಹ್ನ 2.15ರಿಂದ 4.15ರವರೆಗೆ ಯಾತ್ರಿ ನಿವಾಸದಲ್ಲಿ ವಿಶ್ರಾಂತಿ ಪಡೆದು, ಸಂಜೆ 4.25ಕ್ಕೆ ಹೆಲಿಕಾಪ್ಟರ್ ಮೂಲಕ ವಿಜಯಪುರದತ್ತ ಪ್ರಯಾಣ ಬೆಳಸುತ್ತಾರೆ. ಸಂಜೆ 4.50ಕ್ಕೆ ವಿಜಯಪುರಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿಯವರು, ಸಂಜೆ 5ರಿಂದ 6.30ರವರೆಗೆ ರೋಡ್ ಶೋ ನಡೆಸಲಿದ್ದಾರೆ.
ಒಟ್ಟಾರೆಯಾಗಿ ರಾಜ್ಯದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಮೂರು ಪಕ್ಷಗಳು ಸಜ್ಜಾಗಿವೆ.
ಇದನ್ನು ಓದಿ: Pets In Train : ಸಾಕು ಪ್ರಾಣಿ ಜೊತೆ ಟ್ರೈನ್ ನಲ್ಲಿ ಹೋಗಬಹುದು! ಹೇಗೆ ಅಂತೀರಾ!