Rocket launch: ಇಂದು ನಭಕ್ಕೆ ಹಾರಲಿದೆ ಎಚ್‌ಇಟಿ ; ಹಾಲ್-ಎಫೆಕ್ಸ್ ಥ್ರಸ್ಟರ್ ಉಡಾವಣೆ!!
Rocket launch: ಏ.22ರಂದು (ಇಂದು) ಪ್ರಾಯೋಗಿಕ ಎಚ್‌ಇಟಿ ನಭಕ್ಕೆ ಹಾರಲಿದೆ. ಹೌದು, ಇಸ್ರೋ ನಿರ್ಮಿತ ಪಿಎಸ್‌ಎಲ್‌ವಿ-ಸಿ55 ರಾಕೆಟ್ ಮೂಲಕ ಬೆಂಗಳೂರು ಮೂಲದ ಸ್ಟಾರ್ಟಪ್ ಬೆಲ್ಲಾಟ್ರಿಕ್ಸ್ ಏರೋಸ್ಪೇಸ್ (Bellatrix Aerospace) ತನ್ನ ಪ್ರಾಯೋಗಿಕ ಪೇಲೋಡ್ ಹಾಲ್-ಎಫೆಕ್ಸ್ ಥ್ರಸ್ಟರ್ ಅನ್ನು ಉಡಾವಣೆ (Rocket launch) ಮಾಡಲಿದೆ.
ಈ ಬಗ್ಗೆ ಮಾತನಾಡಿದ ಬೆಲ್ಲಾಟ್ರಿಕ್ಸ್ ಏರೋಸ್ಪೇಸ್ ಸಹ ಸ್ಥಾಪಕ ಯಶಸ್ ಕರಣಮ್ “ಇದು ಎಲೆಕ್ಟ್ರಿಕ್ ವಾಹನ ಕ್ರಾಂತಿಯನ್ನು ಬಾಹ್ಯಾಕಾಶಕ್ಕೆ ಒಯ್ದಂತೆ. ಆದರೆ, ಭೂಮಿಯಲ್ಲಿ ನಾವು ವಿದ್ಯುತ್‌ಚಾಲಿತ ವಾಹನಗಳನ್ನು ಕಾರ್ಯಾಚರಿಸುವುದಕ್ಕೆ ಹೋಲಿಸಿದರೆ, ಬಾಹ್ಯಾಕಾಶದಲ್ಲಿ ಈ ತಂತ್ರಜ್ಞಾನದ ಬಳಕೆ ಅತ್ಯಂತ ಸಂಕೀರ್ಣ ಮತ್ತು ಭಿನ್ನವಾಗಿರುತ್ತದೆ” ಎಂದು ಹೇಳಿದ್ದಾರೆ.
ಅಲ್ಲದೆ, ಸಾಂಪ್ರದಾಯಿಕ ರಾಕೆಟ್‌ಗಳಿಗೆ (Rocket) ಹೋಲಿಕೆ ಮಾಡಿದರೆ ಹಾಲ್-ಎಫೆಕ್ಟ್ ಥ್ರಸ್ಟರ್ ಹೆಚ್ಚಿನ ನೂಕು ಬಲ ಅಥವಾ ಮೈಲೇಜ್ ನೀಡುತ್ತದೆ. ಇದರಿಂದ ಹೈಡ್ರಝೈನ್‌ನಂತಹ ಸಾಂಪ್ರದಾಯಿಕ ಇಂಧನಗಳ ಮೇಲಿನ ಅವಲಂಬನೆಯು ತಗ್ಗುತ್ತದೆ ಎಂದು ಯಶಸ್ ತಿಳಿಸಿದ್ದಾರೆ.
ಇದನ್ನೂ ಓದಿ: DK Shivakumar -Amit Shah : ಅಮಿತ್ ಷಾ ತಂಗಿದ್ದ ಹೋಟೆಲ್ ಒಳಕ್ಕೆ ಹೋದ ಡಿಕೆ ಶಿವಕುಮಾರ್ !