PVR-Inox: ಕೇವಲ ಒಂದು ರೂ. ಪಾವತಿಸಿ, ಪಿವಿಆರ್, ಐನಾಕ್ಸ್ ಮಲ್ಟಿಪ್ಲೆಕ್ಸ್ಗಳಲ್ಲಿ ಭರ್ಜರಿ ಮನರಂಜನೆ ಪಡೆಯಿರಿ!!
PVR-Inox: ಒಂದು ರೂಪಾಯಿಗೆ ಚಾಕಲೇಟ್ ಸಿಗೋದೇ ಅಪರೂಪಕ್ಕೆ ಅಂತದ್ರಲ್ಲಿ ಒಂದು ರೂ. ಗೆ ಪಿವಿಆರ್, ಐನಾಕ್ಸ್ಗಳಲ್ಲಿ (PVR-Inox) ಭರಪೂರ ಮನರಂಜನೆ ಪಡೆಯಬಹುದು ಅಂದ್ರೆ ಆಶ್ಚರ್ಯವೇ!!. ಆದರೆ ಇದು ನಿಜ. ನೀವು ಕೇವಲ ಒಂದು ರೂಪಾಯಿಯಲ್ಲಿ ಸಿನಿಮಾ ಟ್ರೈಲರ್ (movie trailer) ನೋಡಬಹುದು. ಎಂತಾ ಚಾನ್ಸ್ ಅಲ್ವಾ!! ಹಾಗಿದ್ರೆ ಬನ್ನಿ ಪೂರ್ತಿ ಮಾಹಿತಿ ತಿಳಿಯೋಣ.
ಸಾಮಾನ್ಯವಾಗಿ ಪಿವಿಆರ್ (PVR), ಐನಾಕ್ಸ್ (Inox) ಗಳಂತಹ ಮಲ್ಟಿಪ್ಲೆಕ್ಸ್ಗಳಲ್ಲಿ (multiplex) ಸಿನಿಮಾ ನೋಡಬೇಕು ಅಂದ್ರೆ ಕೈಯಲ್ಲಿ ಕಂತೆ ಕಂತೆ ಇರಬೇಕು. ಭಾರೀ ಖರ್ಚಾಗುತ್ತದೆ. ಆದರೆ, ಈ ಸುದ್ಧಿ ಸಿನಿಪ್ರಿಯರಿಗೆ ಸಿಹಿಸುದ್ದಿ (Good news) ಎಂದೇ ಹೇಳಬಹುದು. ಹೌದು, ದುಪ್ಪಟ್ಟು ಹಣ ಪಾವತಿಸಿ ಸಿನಿಮಾ ನೋಡುವ ಐನಾಕ್ಸ್ ಹಾಗೂ ಪಿವಿಆರ್ ಮಲ್ಟಿಪ್ಲೆಕ್ಸ್ ಗಳಲ್ಲಿ ನೀವು ಕೇವಲ ಒಂದು ರುಪಾಯಿ ಪಾವತಿಸಿ 30 ನಿಮಿಷಗಳ ಕಾಲ ಸಿನಿಮಾ ಟ್ರೈಲರ್ಗಳನ್ನು ನೋಡಬಹುದು. ಅದ್ಭುತ ಸೌಂಡ್ , ಗುಣಮಟ್ಟದ ದೃಶ್ಯಗಳನ್ನು ವೀಕ್ಷಿಸಿ, ಭರಪೂರ ಮನರಂಜನೆ ಪಡೆಯಬಹುದು.
ಈ ಟ್ರೈಲರ್ ಪ್ರದರ್ಶನ ಭಾರತದಾದ್ಯಂತ ಪಿವಿಆರ್ ಹಾಗೂ ಐನಾಕ್ಸ್ಗಳಲ್ಲಿ ಏಪ್ರಿಲ್ 7 ರಿಂದಲೇ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಹಾಲಿವುಡ್, ಬಾಲಿವುಡ್ ಸೇರಿದಂತೆ ಸಿನಿರಂಗದ ಸಿನಿಮಾಗಳ ಟೀಸರ್ ಹಾಗೂ ಟ್ರೈಲರ್ಗಳನ್ನು ಈ ಶೋಗಳಲ್ಲಿ ಪ್ರದರ್ಶನವಾಗುತ್ತದೆ. ಇದೀಗ
ಕಿಸಿ ಕ ಭಾಯ್ ಕಿಸಿ ಕಿ ಜಾನ್ (Kisi Ka Bhai Kisi Ki Jaan), ಪೊನ್ನಿಯನ್ ಸೆಲ್ವನ್ 2 (Ponniyin Selvan: 2), ಇನ್ನೂ ಕೆಲವು ಸಿನಿಮಾ ಟ್ರೈಲರ್ಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ನೀವೂ ವೀಕ್ಷಿಸುತ್ತೀರಾ ಎಂದಾದರೆ, ಈ ಶೋ ಗೆ ಆನ್ಲೈನ್ ಹಾಗೂ ಕೌಂಟರ್ನಲ್ಲಿ ಟಿಕೆಟ್ ಖರೀದಿ ಮಾಡಬಹುದಾಗಿದೆ.
ಇನ್ನು ಈ ಬಗ್ಗೆ ಮಾತನಾಡಿದ ಐನಾಕ್ಸ್ನ ಸಿಇಓ ಅಲೋಕ್ ಟಂಡನ್, ”ಪ್ರೇಕ್ಷಕರಿಗೆ ಅದ್ಭುತ ಅನುಭೂತಿಯ ಪರಿಚಯ ಮಾಡಿಸುವುದು ಹಾಗೂ ಸಿನಿಮಾವನ್ನು ನೋಡಲು ಹುರಿದುಂಬಿಸುವುದು ಈ ಯೋಜನೆಯ ಉದ್ದೇಶ. ಈ ಟ್ರೈಲರ್ ಶೋಗಳಿಗೆ 50% ಗೂ ಹೆಚ್ಚು ಆಕ್ಯುಪೆನ್ಸಿ ಇದೆ. ಟ್ರೈಲರ್ ಶೋಗಳು ಲಾಂಚ್ ಆದಾಗಿನಿಂದ ಎರಡು ವಾರದೊಳಗಾಗಿ ಸುಮಾರು 40000 ಮಂದಿ ಈ ಶೋಗಳನ್ನು ನೋಡಿದ್ದಾರೆ”ಎಂದು ಹೇಳಿದರು.
”ಒಂದು ರುಪಾಯಿ ಬೆಲೆ ಯಾಕೆ ಇಟ್ಟಿದ್ದೇವೆ ಎಂದರೆ, ಶೋಗೆ ಬರುವ ಪ್ರತಿಕ್ರಿಯೆಗಳು ಹೇಗಿರುತ್ತವೆ ಎಂದು ನೋಡಲು. ಟಿಕೆಟ್ ಶೋ ಆದರಷ್ಟೆ ಅಂಕಿ-ಅಂಶಗಳು ಸಿಗುತ್ತವೆ. ಈ ಟ್ರೈಲರ್ ಶೋಗಳಿಂದ ಬಿಗ್ಬಜೆಟ್ ಸಿನಿಮಾಗಳಿಗೆ ಹಾಗೂ ಇನ್ನಿತರೆ ಸಣ್ಣ-ಮಧ್ಯಮ ಬಜೆಟ್ ಸಿನಿಮಾಗಳಿಗೆ ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಲಿದೆ. ಟ್ರೈಲರ್ ಶೋಗಳ ಮೂಲಕ ಸಿನಿಮಾಗಳಿಗೆ ಹೆಚ್ಚು ಪ್ರಚಾರ ಸಿಗಲಿದೆ. ಈ ಯೋಜನೆಯಿಂದ ಮುಂದಿನ ಕೆಲವು ತಿಂಗಳಲ್ಲಿ ಸಿನಿಮಾ ವೀಕ್ಷಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಲಿದೆ ಎಂಬುದು ನಮ್ಮ ನಂಬಿಕೆ” ಎಂದು ಪಿವಿಆರ್ ಸಿಇಓ ಗೌತಮ್ ದತ್ತ ಹೇಳಿದರು.
ಇದನ್ನು ಓದಿ: EPFO Account : ಇಂಟರ್ನೆಟ್ ಇಲ್ಲದೇ ಇಪಿಎಫ್ ಬ್ಯಾಲೆನ್ಸ್ ಈ ರೀತಿ ಚೆಕ್ ಮಾಡಿ!