Shivmogga BJP Ticket: ಕೊನೆಯ ಹಂತದಲ್ಲಿ ಕೈ ತಪ್ಪಿದ ಶಿವಮೊಗ್ಗ ಟಿಕೆಟ್! ರಾಜಕೀಯ ನಿಲುವು ಪ್ರಕಟಿಸಿದ ತಂದೆ – ಮಗ!

Shivmogga BJP Ticket : ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election) ನಿಮಿತ್ತ ಬಿಜೆಪಿ(BJP) 224 ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ 3 ಹಂತದಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿ ಕೊನೆಯ ಹಂತದಲ್ಲಿ ಎರಡು ಕ್ಷೇತ್ರಗಳನ್ನು ಮಾತ್ರ ಉಳಿಸಿಕೊಂಡಿತ್ತು. ಯಾಕೆಂದರೆ ಭಾರೀ ಚಾಣಕ್ಷತನದಿಂದ ಇಲ್ಲಿ ಹೆಜ್ಜೆ ಇಡಬೇಕಿತ್ತು. ಸದ್ಯ ಅವುಗಳಿಗೂ ಅಭ್ಯರ್ಥಿಗಳನ್ನು ಗೋಷಿಸಿದ್ದು, ಕೊನೆಯ ಕ್ಷಣದಲ್ಲಿ ಬಿಜೆಪಿ ನಾಯಕ, ಶಾಸಕ ಈಶ್ವರಪ್ಪ(K S Eshwarappa) ಮಗನಿಗೆ ಟಿಕೆಟ್ ಕೈತಪ್ಪಿದೆ. ಈ ಹಿನ್ನೆಲೆಯಲ್ಲಿ ತಂದೆ ಮಗ ತಮ್ಮ ನಿಲುವುಗಳನ್ನು ಪ್ರಕಟಿಸಿದ್ದಾರೆ.

ಒಟ್ಟು ನಾಲ್ಕು ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿರುವ ಬಿಜೆಪಿಯ ಅಂತಿಮ ಪಟ್ಟಿ ಹೊರಬಿದ್ದಿದ್ದು, ಬಾಕಿ ಉಳಿದಿದ್ದ ಶಿವಮೊಗ್ಗ ನಗರ (Shimoga city) ಹಾಗೂ ರಾಯಚೂರಿನ (Raichuru) ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ (Manvi Assembly Constituency) ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಿದೆ. ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ನಗರದಲ್ಲಿ ಅವರ ಪುತ್ರನಿಗೆ ಟಿಕೆಟ್ (Shivmogga BJP Ticket) ನೀಡಿಲ್ಲ. ಅತ್ತ ಮಾನ್ವಿಯಲ್ಲಿ ನಿನ್ನೆಯಷ್ಟೇ ಕಾಂಗ್ರೆಸ್‌ನಿಂದ (Congress) ಬಿಜೆಪಿ ಸೇರಿದ್ದ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಿದೆ. ಆದರೀಗ ಶಿವಮೊಗ್ಗ ನಗರ ಬಿಜೆಪಿ ಟಿಕೆಟ್​ ಕೈತಪ್ಪಿದ್ದಕ್ಕೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹಾಗೂ ಅವರ ಪುತ್ರ ಕಾಂತೇಶ್​ ಮೊದಲ ಪ್ರತಿಕ್ರಿಯೆ ನೀಡಿದ್ದು, ತಮ್ಮ ರಾಜಕೀಯ ನಿಲುವು ಪ್ರಕಟಿಸಿದ್ದಾರೆ.

ಹೌದು, ಪುತ್ರನಿಗೆ ಟಿಕೆಟ್​ ಕೈತಪ್ಪಿದ್ದಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಈಶ್ವರಪ್ಪ “ಚನ್ನಬಸಪ್ಪಗೆ ಶಿವಮೊಗ್ಗ ಟಿಕೆಟ್​​ ನೀಡಿದ್ದಕ್ಕೆ ಸಂತಸ ಆಗಿದೆ. ಚನ್ನಬಸಪ್ಪ ಬಿಜೆಪಿಯ ನಿಷ್ಠಾವಂತ ಪ್ರಾಮಾಣಿಕ ಕಾರ್ಯಕರ್ತ. ಬಿಜೆಪಿ ಸಂಘಟನೆಯಲ್ಲಿ ಚನ್ನಬಸಪ್ಪ ಪ್ರಮುಖ ಪಾತ್ರವಹಿಸಿದ್ದಾರೆ. ಆಡಳಿತದಲ್ಲಿ ಅನುಭವ ಇರುವ ವ್ಯಕ್ತಿಗೆ ಬಿಜೆಪಿ ಮಣೆ ಹಾಕಿದೆ. ಕಾಂತೇಶ್​​ಗೆ ಟಿಕೆಟ್​​ ನೀಡಬೇಕೆಂದು ಬೆಂಬಲಿಗರು ಒತ್ತಾಯಿಸಿದ್ದರು. ಆದರೆ ಪಕ್ಷದ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಿದ್ದೇವೆ. ಯಾವುದೇ ಪ್ರಶ್ನೆ ಮಾಡದಂತೆ ಚನ್ನಬಸಪ್ಪ ಗೆಲ್ಲಿಸಲು ಶ್ರಮಿಸಬೇಕು” ಎಂದು ಹೇಳಿದರು.

ಇನ್ನು ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಂತೇಶ್ ಈಶ್ವರಪ್ಪ ಮಾತನಾಡಿ “ತಂದೆಯವರು ಮತ್ತು ಸಂಘಟನೆ ಹೇಳಿದಂತೆ ನಾನು ಕೆಲಸ ಮಾಡುತ್ತೇನೆ. ಟಿಕೆಟ್ ಸಿಗದಿರುವುದಕ್ಕೆ ಅಭಿಮಾನಿಗಳಿಗೆ ಬೇಸರ ಆಗಿದೆ. ಅವರು ಪಕ್ಷೇತರ ಆಗಿ ಸ್ಪರ್ಧೆ ಮಾಡಬೇಕೆಂದು ಒತ್ತಾಯ ಮಾಡಿದರು. ಆದರೆ ಇದೇ ಪಕ್ಷ ತಂದೆಗೆ ಎಲ್ಲವನ್ನು ಕೊಟ್ಟಿದೆ. ಸೋತ ಸಂದರ್ಭ ದಲ್ಲಿ ಅಧಿಕಾರ ಕೊಟ್ಟಿದೆ. ಹೀಗಾಗಿ ಇದೇ ಪಕ್ಷದಲ್ಲಿ ಇದ್ದು ಇದೇ ಪಕ್ಷದಲ್ಲಿ ಸಾಯುತ್ತೇನೆ ಎಂದು. ಪಕ್ಷ ನನಗೂ ಗುರುತಿಸಿ ಮುಂದಿನ ದಿನಗಳಲ್ಲಿ ಜವಾಬ್ದಾರಿ ನೀಡುವ ವಿಶ್ವಾಸ ಇದೆ. ಈಗ ನನಗೆ 43 ವಯಸ್ಸಾಗಿದ್ದು, ಈಗ ತಾನೇ. ನನ್ನ ರಾಜಕೀಯ ಜೀವನ ಆರಂಭ ಆಗಿದೆ. ಬರುವ ದಿನಗಳು ನನಗೆ ಒಳ್ಳೆಯ ಅವಕಾಶ ಸಿಗುವ ವಿಶ್ವಾಸ ಇದೆ ಎಂದರು. ಈ ಮೂಲಕ ಟಿಕೆಟ್​ ಸಿಗದಿದ್ದರೂ ಅಸಮಾಧಾನ ಇಲ್ಲ. ಬಿಜೆಪಿಯಲ್ಲೇ ಇರುತ್ತೇನೆ ಎಂದು ತಮ್ಮ ನಿಲುವು ಪ್ರಕಟಿಸಿದರು.

ಅಂದಹಾಗೆ ಈ ಹಿಂದೆ ಈಶ್ವರಪ್ಪ ಪುತ್ರ ಕಾಂತೇಶ್ ಬದಲು ಈಶ್ವರಪ್ಪ ಸೊಸೆಗೆ ಟಿಕೆಟ್ ನೀಡೋ ಬಗ್ಗೆ ಯೋಚಿಸಬಹುದು ಅಂತ ಹೈಕಮಾಂಡ್ ಹೇಳಿತ್ತು ಎನ್ನಲಾಗಿದೆ. ಆದರೆ ಈಶ್ವರಪ್ಪ ಇದಕ್ಕೆ ಒಪ್ಪಿಲ್ಲವಂತೆ. ಹೀಗಾಗಿ ಅವರ ಆಪ್ತ ಹಾಗೂ ಶಿವಮೊಗ್ಗ ಪಾಲಿಕೆ ಮಾಜಿ ಉಪಮೇಯರ್ ಚನ್ನಬಸಪ್ಪ ಎಂಬುವರಿಗೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲಾಗಿದೆ.

ಒಟ್ಟು ನಾಲ್ಕು ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿರುವ ಬಿಜೆಪಿ, ಎಲ್ಲಾ 224 ಕ್ಷೇತ್ರಗಳಲ್ಲಿ ತನ್ನ ಕದನ ಕಲಿಗಳ ಹೆಸರನ್ನು ಘೋಷಿಸಿದೆ. ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳು, 2ನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳು, 3ನೇ ಪಟ್ಟಿಯಲ್ಲಿ 10 ಅಭ್ಯರ್ಥಿಗಳ ಹೆಸರು ಘೋಷಿಸಿತ್ತು. ಇದೀಗ 4ನೇ ಹಾಗೂ ಅಂತಿಮ ಪಟ್ಟಿಯಲ್ಲಿ ಎರಡು ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಘೋಷಿಸಿದೆ.

Leave A Reply

Your email address will not be published.