Ban on sale of liquor : ಮದ್ಯಪ್ರಿಯರೇ ಗಮನಿಸಿ! ರಾಜ್ಯಾದ್ಯಾಂತ ಈ ಮೂರು ದಿನ ಮದ್ಯ ಬಂದ್‌!

Ban on sale of liquor : ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನವು ಮೇ 10ರಂದು ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಸದ್ಯ ಕರ್ನಾಟಕ ವಿಧಾನಸಭೆಯಲ್ಲಿ ಚುನಾವಣೆಯ (election) ಸಿದ್ಧತೆ ಭರದಿಂದ ಸಾಗುತ್ತಿದ್ದು, ಬರುವ ಮೇ ತಿಂಗಳಿನಲ್ಲಿ ನಡೆಯಬೇಕಾಗಿರುವ ಚುನಾವಣೆಯಲ್ಲಿ ಜನರ ಆಯ್ಕೆ ಯ ಪಾತ್ರವು ಪ್ರಮುಖವಾಗಿದೆ.

ಕರ್ನಾಟಕ ವಿಧಾನಸಭಾ 233 (Karnataka Assembly Election 2023) ಹಿನ್ನಲೆಯಲ್ಲಿ ಮೂರು ದಿನ ಮದ್ಯ ಮಾರಾಟ ನಿಷೇಧಿಸಲಾಗುತ್ತಿದೆ ( Ban on sale of liquor).

ಮತದಾನದ ಪ್ರಯುಕ್ತ ದಿನಾಂಕ 08-05-2023ರ ಸಂಜೆ 5 ರಿಂದ 10-05-2023 ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ ಮತ ಏಣಿಕೆ ಪ್ರಯುಕ್ತ ದಿನಾಂಕ 13-05-2023ರಂದು ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12ಗಂಟೆಯವೆರೆಗ ಮದ್ಯ ಮಾರಾಟ ನಿಷೇಧ ಕುರಿತಂತೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಮೇಲೆ ತಿಳಿಸಿದ ದಿನಗಳಂದು ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ತರಹದ ಮಧ್ಯದ ತಯಾರಿಕೆ, ದಾಸ್ತಾನು, ಸಾಗಾಣಿಕೆ ಮತ್ತು ಮದ್ಯ ಮಾರಾಟವನ್ನು (Sale of liquor ) ನಿಷೇಧಿಸಲಾಗಿದೆ ಎಂದಿದ್ದಾರೆ.

ಮುಖ್ಯವಾಗಿ ಮತದಾನ ಮತ್ತು ಮತಏಣಿಕೆಯ ಸಂದರ್ಭದಲ್ಲಿ ಮದ್ಯದ ತಯಾರಿಕೆ, ದಾಸ್ತಾನು, ಸಾಗಾಣಿಕೆ ಮತ್ತು ಮಾರಾಟ ಮಾಡುವುದನ್ನು ಸಂಪೂರ್ಣ ನಿಷೇಧಿಸಿ, ಶುಷ್ಕ ದಿನ (Dry Day) ಎಂದು ಘೋಷಿಸಲಾಗಿದೆ.

 

ಇದನ್ನು ಓದಿ: DK Shivakumar : ಡಿ. ಕೆ ಶಿವಕುಮಾರ್ ಗೆ ತಪ್ಪಿದ ಕಂಟಕ! ಕನಕಪುರದಲ್ಲಿ ಆಸ್ಥಾನ ಪಕ್ಕಾ! 

Leave A Reply

Your email address will not be published.