Air India Pilot: ಸ್ನೇಹಿತೆಯನ್ನು ಕಾಕ್ ಪಿಟ್’ಗೆ ಕರೆಸಿ ಕೂರಿಸಿ ಪಾರ್ಟಿ ಮಾಡಲು ಹೇಳಿದ ಏರ್ ಇಂಡಿಯಾ ಪೈಲೆಟ್, DGCA ಗೆ ದೂರು ಕೊಟ್ಟ ಗಗನ ಗೆಳತಿ !

Air India Pilot: ಏರ್ ಇಂಡಿಯಾ ವಿಮಾನದ ಪೈಲೆಟ್ (Air India Pilot) ಓರ್ವ ಪ್ರಮುಖ ವೈಮಾನಿಕ ಸುರಕ್ಷತಾ ನಿಯಮವೊಂದನ್ನು ಉಲ್ಲಂಘಿಸುವ ಮೂಲಕ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ (DGCA) ತನಿಖೆಯ ವ್ಯಾಪ್ತಿಗೆ ಗುರಿಯಾಗಿದ್ದಾರೆ. ದುಬೈನಿಂದ ದೆಹಲಿಯ ಕಡೆಗೆ ಬರುತ್ತಿದ್ದ ಆ ವಿಮಾನದಲ್ಲಿ ಪೈಲೆಟ್ ತನ್ನ ಸ್ನೇಹಿತೆಯೊಬ್ಬಳನ್ನು ತನ್ನ ಪಕ್ಕದಲ್ಲೇ ಕೂರಿಸಿಕೊಂಡು ಪ್ರಯಾಣ ಮಾಡಿದ ಕಾರಣಕ್ಕೆ ಪೈಲೆಟ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಫೆಬ್ರವರಿ 27ರಂದು ದುಬೈ ನಿಂದ ಪೀಕಾಕ್ ಆಗಿ ಹೊರಟಿದ್ದ ವಿಮಾನವು ದೆಹಲಿಯ ಕಡೆಗೆ ಹೊರಟಿತ್ತು. ಆ ವಿಮಾನ ಸಂಚಾರ ಶುರುವಾಗಿ ಕೆಲವೇ ಹೊತ್ತಾಗಿತ್ತು. ಆಗ ವಿಮಾನದ ಗಗನ ಗೆಳತಿಯನ್ನು (ಗಗನ ಸಖಿ) ಕರೆದ ಪೈಲಟ್ ‘ನನ್ನ ಸ್ನೇಹಿತೆಯೊಬ್ಬಳು ವಿಮಾನದಲ್ಲಿ ಎಕಾನಮಿ ಕ್ಲಾಸ್‌ನ ಸೀಟ್‌ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದಾಳೆ. ಆಕೆಗೆ ಬಿಜಿನೆಸ್ ಕ್ಲಾಸ್‌ನಲ್ಲಿ ಕುಳಿತುಕೊಳ್ಳಲು ಅನುವು ಮಾಡಿಕೊಡಿ’ ಎಂದು ವಿನಂತಿ ಮಾಡಿಕೊಂಡಿದ್ದಾನೆ. ಪೈಲೆಟ್ ಅನ್ನುವವನು ವಿಮಾನವು ವಾಯು ಮಾರ್ಗದಲ್ಲಿ ಸಂಚರಿಸುವಾಗ ಆ ವಿಮಾನದ ಟೋಟಲ್ ಇನ್ ಚಾರ್ಜ್. ಹಾಗಾಗಿ ಪೈಲಟ್ ಮಾತು ತೆಗೆದು ಹಾಕಲಾಗದೆ, ಕೇವಲ ಸೀಟಿಂಗ್ ಬದಲಾವಣೆ ಅಲ್ಲವೇ ಎಂದು ಆ ಕ್ಯಾಬಿನ್ ಸಿಬ್ಬಂದಿ ಆ ಹುಡುಗಿಯನ್ನು ಬಿಜಿನೆಸ್ ಕ್ಲಾಸ್‌ನಲ್ಲಿ ಕೂರಿಸಲು ಮುಂದಾಗುತ್ತಾಳೆ. ಆದರೆ ಅದಾಗಲೇ. ಬ್ಯುಸಿನೆಸ್ ಕ್ಲಾಸ್ ಭರ್ತಿ ಆಗಿರುತ್ತದೆ. ಅಲ್ಲಿ ಯಾವುದೇ ಸೀಟ್ ಖಾಲಿ ಇರಲಿಲ್ಲ.

ಈ ವಿಷಯವನ್ನು ಗಗನ ಮಿತ್ರೆ ಬಂದು ಪೈಲೆಟ್ ಬಳಿ ಹೇಳಿಕೊಂಡಿದ್ದಾಳೆ. ಆಗ ಆ ಪೈಲೆಟ್ ಅಲ್ಲಿಗೇ ಸುಮ್ಮನಾಗದೆ, ತನ್ನ ಸ್ನೇಹಿತೆಯನ್ನು ತಾನು ಕುಳಿತುಕೊಳ್ಳುವ ವಿಮಾನದ ಕಾಕ್‌ಪಿಟ್ ಗೇ ಕರೆಸಿಕೊಂಡು ಬಂದು ಕೂರಿಸಿದ್ದಾನೆ. ಅಲ್ಲಿನ ಜಂಪ್ ಸೀಟ್‌ನಲ್ಲಿ ಅಂದರೆ ತನ್ನ ಸೀಟ್‌ನ ಹಿಂಬದಿಯಲ್ಲೇ ಇರುವ ಸೀಟ್‌ನಲ್ಲಿಯೇ ಆಕೆಯನ್ನು ಕೂರಿಸಿಕೊಂಡು ಸ್ನೇಹಿತೆಯನ್ನು ಇಂಪ್ರೆಸ್ ಮಾಡಿದ್ದ. ಪುಣ್ಯಕ್ಕೆ ತನ್ನ ಪೈಲೆಟ್ ಸೀಟಿನಲ್ಲಿ ಕೂರಿಸಿ, ಸ್ಟೇರಿಂಗ್ ಆಕೆ ಕೈಗೆ ಕೊಟ್ಟಿಲ್ಲ !! ಆಗ ಗಗನ ಸಖಿ ಪೈಲಟ್ ನ್ನು ಸಣ್ಣದಾಗಿ ಎಚ್ಚರಿಸಿದ್ದಾಳೆ.

ಆಗ ಪೈಲಟ್ ಕಿರಿ ಕಿರಿ ಶುರುಮಾಡಿದ್ದ. ಗೆಳತಿ ತಿಂಡಿ ಮತ್ತು ಮದ್ಯವನ್ನೆಲ್ಲ ಅಲ್ಲಿಯೇ ತಂದು ಕೊಡಲು ಹೇಳಿದ್ದ. ‘ ಈ ಪ್ರಯಾಣವು ನನ್ನ ಸ್ನೇಹಿತೆಯ ಪಾಲಿಗೆ ಆರಾಮದಾಯಕವಾದ, ಲಿವಿಂಗ್ ರೂಮ್‌ನಂತೆ ಇರಬೇಕು ‘ ಎಂದಾತ ಸಿಬ್ಬಂದಿಗೆ ಹೇಳಿದ್ದ.

ಆಗ ರೂಲ್ಸ್ ನೆನಪು ಮಾಡಿಕೊಂಡ ಏರ್ ಹೋಸ್ಟೆಸ್ ಪೈಲೆಟ್ ನ ಗೆಳತಿಗೆ ಆಲ್ಕೋಹಾಲ್ ಪೂರೈಸಲು ಒಪ್ಪಲಿಲ್ಲ. ಇದರಿಂದ ಸಿಟ್ಟಾದ ಪೈಲೆಟ್ ಮಾತಿನ ಧಾಟಿಯೇ ಬದಲಾಗಿ ಹೋಯಿತು. ಆಗ್ಗಾಗ್ಗೆ ಆಕೆಯನ್ನು ಕರೆಯುವುದು, ಅದು ಕೊಡು, ಇದು ಕೊಡು ಎನ್ನಲು ಶುರು ಮಾಡಿದ ಎಂದು ಆ ವಿಮಾನದ ಸಿಬ್ಬಂದಿ ಕೊಟ್ಟ ದೂರಿನಲ್ಲಿ ಹೇಳಿದ್ದಾಳೆ.

ವಿಮಾನದಲ್ಲಿ ಕಾಕ್‌ಪಿಟ್ ಎನ್ನುವುದು ಸೂಕ್ಷ್ಮವಾದ ಮತ್ತು ವಿಮಾನ ಆಪರೇಟ್ ಮಾಡುವ ಸ್ಥಳವಾಗಿದ್ದು, ಅಲ್ಲಿ ಪೈಲೆಟ್‌ಗಳು, ಕ್ಯಾಬಿನ್ ಸಿಬ್ಬಂದಿ, ಡಿಜಿಸಿಎ ಅಧಿಕಾರಿಗಳು ಅಥವಾ ಡಿಜಿಸಿಎಯಿಂದ ಅನುಮತಿ ಪಡೆದವರು ತಪ್ಪಿದರೆ ಮೆಕ್ಯಾನಿಕ್ ಗಳಿಗೆ ಮಾತ್ರ ಅಲ್ಲಿ ಪ್ರವೇಶ. ಕಾಕ್ ಪಿಟ್‌ನಲ್ಲಿ ಸಾಮಾನ್ಯ ಪ್ರಯಾಣಿಕರಿಗೆ ಪ್ರವೇಶ ಅವಕಾಶವೇ ಇಲ್ಲ. ಹೀಗಾಗಿ ಈ ವಿಷಯವನ್ನು DGCA ಗಂಭೀರವಾಗಿ ಪರಿಗಣಿಸಿದ್ದು, ಪೈಲೆಟ್ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಿದೆ.

 

ಇದನ್ನು ಓದಿ: Copper vessel: ಬೇಸಿಗೆಯಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯಬಹುದೇ? ಅದು ಒಳ್ಳೆಯದೇ ಇಲ್ಲಿದೆ ಮಾಹಿತಿ 

Leave A Reply

Your email address will not be published.