Black Panther: ಅರಣ್ಯ ಇಲಾಖೆ ಇಟ್ಟ ಬೋನಿಗೆ ಬಿದ್ದೇ ಬಿಡ್ತು ಕರಿಚಿರತೆ!

Black Panther : ನಿಮಗೆಲ್ಲರಿಗೂ ಇದು ಗೊತ್ತಿರಬಹುದು. ಕೋಡಿಮಠ ಸ್ವಾಮೀಜಿ ಅವರು ಭವಿಷ್ಯ ಹೇಳುವುದರಲ್ಲಿ ಪ್ರಖ್ಯಾತಿ ಹೊಂದಿದವರು. ಅವರು ಹೇಳಿದ ಒಂದು ಭವಿಷ್ಯ ನಿಜಕ್ಕೂ ಈಗ ಸತ್ಯ ಆಗುತ್ತಿದೆ ಎಂದನಿಸುತ್ತದೆ. ಕಾಡಿನ ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತದೆ ಎಂದು. ಇತ್ತೀಚೆಗೆ ನಾವು ಹಲವು ಪ್ರಾಣಿಗಳು ಕಾಡಿನಿಂದ ನಾಡಿಗೆ ಬಂದ ಪ್ರಕರಣಗಳನ್ನು ನೋಡಿದ್ದೇವೆ. ಅದರಲ್ಲಿ ಒಂದು ಈಗ ನಾಡಿಗೆ ಬಂದಿರೋದು ಕಪ್ಪು ಚಿರತೆ(Black Panther)

ಹೊನ್ನಾವರ ತಾಲ್ಲೂಕಿನ ಕಡ್ಲೆ ಗ್ರಾಮದ ಜಡ್ಡಿಗದ್ದೆಯಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಬಿದ್ದಿದೆ ಈ ಒಂದು ಕಪ್ಪು ಚಿರತೆ. ಈ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸುಮಾರು ಕಡೆಗಳಲ್ಲಿ ವಿವಿಧ ಚಿರತೆ ದಾಳಿ ಬಗ್ಗೆ ಸುದ್ದಿಯಾಗಿತ್ತು. ತಾಲೂಕಿನ ವಂದೂರು ಜಡ್ಡಿಗದ್ದೆ ಹಾಗೂ ಸುತ್ತಮುತ್ತಲ ಗ್ರಾಮದಲ್ಲಿ ಚಿರತೆ ದಾಳಿಯ ಸುದ್ದಿಯಾಗಿತ್ತು. ಆ ಪರಿಸರದ ಆಕಳು, ನಾಯಿಗಳು ಚಿರತೆಗೆ ಬಲಿಯಾಗಿರುವ ಘಟನೆ ನಡೆಯುತ್ತಲೇ ಇದ್ದು, ಇದರ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ದರು.

ಈ ಕಾರಣದಿಂದ ಚಿರತೆ ಹಿಡಿಯಲು ಅರಣ್ಯ ಇಲಾಖೆ ಈ ಸ್ಥಳದಲ್ಲಿ ಬೋನು ಇಟ್ಟಿತ್ತು. ಈ ಪ್ರಯತ್ನ ಸತತ ಎರಡು ತಿಂಗಳಿನಿಂದ ನಡೆಯುತ್ತಿತ್ತು. ಈ ಬಗ್ಗೆ ಬೋನಿನ ಒಂದು ಭಾಗದಲ್ಲಿ ನಾಯಿ ಕಟ್ಟಿ ಹಾಕಿ ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗಿತ್ತು.

ಈ ಪ್ರಯತ್ನ ಈಗ ಸಫಲವಾಗಿದೆ. ಚಿರತೆ ಬೋನಿಗೆ ಬಿದ್ದಿದೆ. ಹಾಗಾಗಿ ಜನ ಈ ಪ್ರಾಣಿಯನ್ನು ನೋಡಲು ಬರಲಾರಂಭಿಸಿದ್ದಾರೆ.ಅರಣ್ಯ ಇಲಾಖೆಯವರು ಈ ಚಿರತೆಯನ್ನು ಕಾಸರಕೋಡ ನರ್ಸರಿಗೆ ರವಾನೆ ಮಾಡಿದರು.

ಆದರೆ ಚಿರತೆ ವೀಕ್ಷಣೆ ಮಾಡಲು ಜನರಿಗೆ ಅವಕಾಶ ನೀಡಲಿಲ್ಲ. ಅಲ್ಲಿನ ಗ್ರಾಮಸ್ಥರು ಇದನ್ನು ಹತ್ತಿರವೆಲ್ಲೂ ಬಿಡದೆ ದೂರ ದಟ್ಟಾರಣ್ಯಕ್ಕೆ ಬಿಡಬೇಕೆಂಬ ಮಾತನ್ನೂ ಹೇಳಿದರು. ಹಾಗಾಗಿ ಹೀಗೆ ಮಾಡಲಾಗುವುದು ಎಂಬ ಮಾತನ್ನು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಅಂದಹಾಗೆ ಸೆರೆಸಿಕ್ಕಿರುವುದು 2,3 ವರ್ಷದ ಪ್ರಾಯದ ಗಂಡು ಚಿರತೆ. ಚಿರತೆ ಬಿಡುವ ಜಾಗದ ಗುರುತನ್ನು ಸುರಕ್ಷತೆಯ ದೃಷ್ಟಿಯಿಂದ ಬಹಿರಂಗ ಪಡಿಸಿಲ್ಲ.

ಇದನ್ನೂ ಓದಿ: K Annamalai: ಅಣ್ಣಾಮಲೈಗೆ 48 ಗಂಟೆಗಳ ಒಳಗೆ ಕ್ಷಮೆ ಯಾಚಿಸಲು ಲೀಗಲ್ ನೋಟಿಸ್ !

Leave A Reply

Your email address will not be published.