Ration Card Other Benefits: ರೇಶನ್ ಕಾರ್ಡ್’ನಿಂದಾಗುವ ಇತರ ಲಾಭಗಳ ಬಗ್ಗೆ ನಿಮಗ್ಗೊತ್ತಾ ?!
Ration Card benefits : ಬಡವರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಬಡವರಿಗಾಗಿ ಹಲವಾರು ರೀತಿಯ ಸಹಾಯ ಮಾಡುತ್ತದೆ. ಮುಖ್ಯವಾಗಿ ಪಡಿತರ ಚೀಟಿಯ ಮೂಲಕ ಪಡಿತರ ಚೀಟಿದಾರರ ಕುಟುಂಬಕ್ಕೆ ಸರ್ಕಾರದಿಂದ ಪಡಿತರ ವಿತರಣೆ ಮಾಡುತ್ತದೆ. ಆದರೆ ಪಡಿತರ ಜೊತೆಗೆ ಇನ್ನಿತರ ಪ್ರಯೋಜನ (Ration Card benefits) ನಾವು ಪಡೆಯಬಹುದು. ಅವುಗಳು ಯಾವುದೆಂದು ತಿಳಿಯೋಣ.
ನೀವು ಪಡಿತರ ಚೀಟಿ ಹೊಂದಿದ್ದು, ಸರ್ಕಾರದಿಂದ ಪ್ರತಿ ತಿಂಗಳು ಉಚಿತ ರೇಷನ್ ಪಡೆಯುತ್ತಿದ್ದರೆ, ನೀವು ಪಡಿತರ ಚೀಟಿ ಮೂಲಕ ಉಚಿತ ಪಡಿತರ ಪಡೆಯುವುದು ಮಾತ್ರವಲ್ಲ, ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಒಳಗೊಂಡಂತೆ ಅನೇಕ ಲಾಭ ಪಡೆಯಬಹುದಾಗಿದೆ.
ಅಂದರೆ ನೀವು ರೇಷನ್ ಕಾರ್ಡ್ ಅನ್ನು ವಿಳಾಸ ಪುರಾವೆಯಾಗಿ ಬಳಸಬಹುದು. ಬ್ಯಾಂಕ್ ಸಂಬಂಧಿತ ಕೆಲಸಗಳಿಗೆ ರೇಷನ್ ಕಾರ್ಡ್ ಬಳಸಬಹುದು.
ಇನ್ನು ಗ್ಯಾಸ್ ಸಂಪರ್ಕವನ್ನು ಪಡೆಯಬೇಕಾದರೆ ಪಡಿತರ ಚೀಟಿಯನ್ನು ಬಳಸಬಹುದು. ಅದಲ್ಲದೆ ಮತದಾರರ ಗುರುತಿನ ಚೀಟಿ ಮಾಡುವ ಸಮಯದಲ್ಲಿಯೂ ಗುರುತಿನ ಚೀಟಿ ನೀಡಬೇಕಾಗುತ್ತದೆ. ಈ ಸಂದರ್ಭದಲ್ಲಿ ರೇಷನ್ ಕಾರ್ಡ್ ಬಳಸಬಹುದಾಗಿದೆ. ಅದಲ್ಲದೆ ಪಾಸ್ಪೋರ್ಟ್ ವೆರಿಫಿಕೇಶನ್ ಸಂದರ್ಭದಲ್ಲಿ ಸಹ ದಾಖಲೆಯಾಗಿ ಬಳಸಬಹುದು.