Honey Rose: ಮದುವೆ ಯಾಕೆ? ನನಗೆ ಅದು ಮಾತ್ರ ಓಕೆ ಅನ್ನುತ್ತಾಳೆ ಈ ಸ್ಟಾರ್ ನಟಿ! ಸ್ನಿಗ್ಧ ಸುಂದರಿಯಿಂದ ಸಿಕ್ತು ಒಳ್ಳೆ ಆಫರ್!

Honey Rose: ಬಹುಭಾಷಾ ತಾರೆ, ಮಲಯಾಳಂ ಬೆಡಗಿ ಹನಿರೋಸ್​ (Honey Rose) ಯಾರಿಗೆ ಗೊತ್ತಿಲ್ಲ ಹೇಳಿ. ತನ್ನ ಸ್ನಿಗ್ಧ ಸೌಂದರ್ಯದಿಂದ ಎಂಥವರನ್ನೂ ಮರುಳು ಮಾಡುವ ನಟಿ ತಮಿಳು, ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆಕೆಯ ಮೈಮಾಟಕ್ಕೆ ಅನೇಕ ಪಡ್ಡೆ ಹುಡುಗರು ಫಿದಾ ಆಗಿದ್ದು, ಅವಳ ಸೌಂದರ್ಯಕ್ಕೆ ಮಾರು ಹೋಗಿ ಹೆಚ್ಚಿನ ಸಂಖ್ಯೆಯಲ್ಲಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಆದರೀಗ ಈ ಸೌಂದರ್ಯದ ಗಣಿ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ಧು ಮಾಡ್ತಿದ್ದಾಳೆ. ಯಾಕೆಂದರೆ ಈಕೆಗೆ ಮದುವೆ ಬೇಡಂತೆ, ಅದು ಮಾತ್ರ ಸಾಕಂತೆ!

ಹೌದು, ಯಾವುದೇ ಪ್ಯಾನ್‌ ಇಂಡಿಯಾ (Pan India) ಸಿನಿಮಾ ಮಾಡಿಲ್ಲ ಅಂದ್ರೂ ಸಹ ತನ್ನ ಸೌಂದರ್ಯದ ಮೂಲಕ ಚಿರಪರಿಚಿತರಾದ ನಟಿ ಅಂದ್ರೆ ಅದು ಹನಿ. ಸಾಮಾಜಿಕ ಜಾಲತಾಣದಲ್ಲಿ ಈಕೆ ಫೋಟೋ ಹರಿಬಿಟ್ಟರೆ ಕ್ಷಣಾರ್ಧದಲ್ಲಿ ಸಖತ್‌ ಸದ್ದು ಮಾಡುತ್ತದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿ ಅದ್ಭುತ ಯಶಸ್ಸು ಸಾಧಿಸಿದ ಟಾಲಿವುಡ್​ ಸೂಪರ್​ ಸ್ಟಾರ್​ ಬಾಲಕೃಷ್ಣ ಅಭಿನಯದ ವೀರ ಸಿಂಹ ರೆಡ್ಡಿ ಸಿನಿಮಾದಲ್ಲಿ ಹನಿ ರೋಸ್​ ನಟಿಸಿದರು. ಈ ಚಿತ್ರ 100 ಕೋಟಿ ರೂ. ಕ್ಲಬ್​ ಸೇರಿದೆ. ತಮ್ಮ ಬೋಲ್ಡ್​ ಪಾತ್ರದ ಮೂಲಕ ಸಿನಿರಸಿಕರ ಮನ ಗೆದ್ದಿರುವ ಹನಿ ರೋಸ್​, ಈ ಸಿನಿಮಾ ಮೂಲಕ ವಿಶೇಷ ಗಮನ ಸೆಳೆದಿದ್ದಾರೆ. ಆದರೀಗ ಈಕೆ ತನ್ನ ಆ ಒಂದು ಹೇಳಿಕೆಯಿಂದ ಎಲ್ಲರ ಗಮನ ಸೆಳೆದಿದ್ದಾಳೆ.

ಅದೇನೆಂದರೆ, ಇಂತಹ ಸುಂದರ ಚೆಲುವೆ ನಟಿ ಮದುವೆಯಾಗುತ್ತೇನೆ ಎಂದರೆ ಸಾಕು ನೂರಾರು ಯುವಕರು ತಾಮುಂದು, ನಾಮುಂದು ಎಂದು ಬರುತ್ತಾರೆ. ಆದರೆ ನಟಿ ರೋಸ್​ಗೆ ಮಾತ್ರ ಮದುವೆಯಾಗಲು ಸ್ವಲ್ಪವೂ ಆಸಕ್ತಿಯೇ ಇಲ್ಲವಂತೆ. ಆದರೆ ಜೀವನದಲ್ಲಿ ಪಾರ್ಟನರ್​ಬೇಕಂತೆ! ಹೌದು, ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ (Interview) ಹನಿ ಈ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ನನಗೆ ಮದುವೆಯಾಗುವುದು ಬೇಡ, ಆದರೆ ರಿಲೇಷನ್​ನಲ್ಲಿ ಇರೋ ಆಸೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಅಲ್ಲದೆ ಮದುವೆಯಾಗುವುದಕ್ಕೆ ನನಗೆ ಸಮಸ್ಯೆಯಾಗಿರುವುದರಿಂದ ಬೇರೆಯವರ ಮದುವೆಗೆ ಹೋಗುವುದು ಇಷ್ಟವಿಲ್ಲ ಎನ್ನುತ್ತಾರೆ ಹನಿ ರೋಸ್. ಮದುವೆಗೆ ಹೋದರೆ ಎಲ್ಲರ ಕಣ್ಣು ತಮ್ಮ ಮೇಲೆ ಬಿದ್ದು ಮದುವೆಯ ಆಫರ್​ ಬಂದರೆ ಕಷ್ಟವಂತೆ. ಅದಕ್ಕಾಗಿ ಯಾರ ಮದುವೆಗೂ ಹೋಗುವುದಿಲ್ಲ. ಇನ್ನು ಸಂತೋಷದ ಜೀವನಕ್ಕಾಗಿ ಯಾರೂ ಮದುವೆಯಾಗುವುದಿಲ್ಲ. ತಮ್ಮ ಬಳಿ ಹಣವಿದೆ ಎಂದು ತೋರಿಸಿಕೊಳ್ಳಲು ಮದುವೆಯಾಗುವುದಾಗಿ ಹಲವರು ಹೇಳುತ್ತಾರೆ. ನನಗೆ ಮದುವೆಯಾಗಲು ಇಷ್ಟವಿಲ್ಲ. ಬಾಲ್ಯದಿಂದಲೂ ನನಗೆ ಮದುವೆ ಬಗ್ಗೆ ಆಸೆ ಇರಲಿಲ್ಲ ಎಂದು ಹನಿ ರೋಸ್​ ತಿಳಿಸಿದ್ದಾರೆ.

ಅಂದಹಾಗೆ ಮಲಯಾಳಂ ನಟಿ ಹನಿ ರೋಸ್ ಅವರು 2005 ರಲ್ಲಿ 14 ನೇ ವಯಸ್ಸಿನಲ್ಲಿ ಬಾಯ್‌ಫ್ರೆಂಡ್ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಸೌಂಡ್ ಆಫ್ ಬೂಟ್ (2008), ಸಿಂಗಂ ಪುಲಿ (2011), ಉಪ್ಲುಕಂದಮ್ ಬ್ರದರ್ಸ್ ಬ್ಯಾಕ್ ಇನ್ ಆಕ್ಷನ್ (2011), ಅಜಂತಾ (2012), ಹೋಟೆಲ್ ಕ್ಯಾಲಿಫೋರ್ನಿಯಾ (2013), ರಿಂಗ್ ಮಾಸ್ಟರ್ (2014), ಕುಂಬಾಶರಂ (2015), ಚಾಲಕಿಕಾರನ್ ಸಂಗಾತಿ (2018) ) , ಇಟ್ಟಿಮನಿ: ಮೇಡ್ ಇನ್ ಚೀನಾ (2019), ಬಿಗ್ ಬ್ರದರ್ (2020) ಹಾಗೂ ತೆಲುಗಿನ ವೀರಸಿಂಹ ರೆಡ್ಡಿ (2023) ಸಿನಿಮಾಗಳಲ್ಲಿ ನಟಿಸಿದ್ದಾರೆ.

 

ಇದನ್ನು ಓದಿ: Cracked Heels Treatment: ನಿಮ್ಮ ಹಿಮ್ಮಡಿಗಳು ಬಿರುಕು ಬಿಟ್ಟಿದೆಯೇ? ಇಲ್ಲಿದೆ ನೋಡಿ ಪರ್ಫೆಕ್ಟ್‌ ಸೊಲ್ಯೂಷನ್‌ 

Leave A Reply

Your email address will not be published.