Mohiuddin Bawa: ರಂಝಾನ್ ಮಾಸದಲ್ಲಿ ಉಪವಾಸ ಹಿಡಿದ ನನ್ನನ್ನು ಸತಾಯಿಸಿ ಹಣ ಬಲಕ್ಕೆ ಟಿಕೆಟ್ ನೀಡಿದರು- ಮೊಯ್ದಿನ್ ಬಾವಾ

Share the Article

Mohiuddin Bawa :ನಾನು ಈ‌ ರಂಝಾನ್ ಮಾಸದಲ್ಲಿ ಉಪವಾಸ ಹಿಡಿದು ಟಿಕೆಟ್ ಗಾಗಿ ಎಲ್ಲಾ‌ ನಾಯಕರ ಬಳಿ ಬೇಡಿದೆ.ಮನೆಯಲ್ಲಿ ಕುಳಿತು ಸಣ್ಣ ಸಣ್ಣ ಜಖಾತ್ ಕೊಡುವ ಈ ತಿಂಗಳಿನಲ್ಲಿ ನನಗೆ ಬೇಡುವ ರೀತಿ ಮಾಡಿದರು.ಕಾಂಗ್ರೆಸ್ ನನ್ನನ್ನು ಬಳಸಿಕೊಂಡು ಕೈಬಿಟ್ಟಿದೆ‌ ಮಾಜಿ‌ ಶಾಸಕ‌, ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮೊಯ್ದೀನ್ ಬಾವಾ (Mohiuddin Bawa) ಅವರು ಅಸಮಾಧಾನ ಹೊರಹಾಕಿದ್ದಾರೆ.

ಟಿಕೆಟ್ ಗಾಗಿ ಭಾರೀ ಪ್ರಯತ್ನವನ್ನು ನಡೆಸಿದ್ದ ಮೊಯ್ದೀನ್ ಬಾವಾ ಅವರು ಟಿಕೆಟ್ ಕೈತಪ್ಪಿದ ಬಳಿಕ ಫೇಸ್ ಬುಕ್ ಫೇಜ್ ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾನು ರಾತ್ರಿ 11ಕ್ಕೆ ಅಭಿಮಾನಿಗಳ ಜೊತೆ ಮಾತುಕತೆ ನಡೆಸುತ್ತೇನೆ.78% ಜನರು, ಕಾರ್ಯಕರ್ತರು ನನಗೆ ಟಿಕೆಟ್ ಕೊಡಬೇಕೆಂದು ಹೇಳಿದ್ದರು.ಆದರೆ 7% ಬೆಂಬಲ ಇದ್ದವರಿಗೆ ಟಿಕೆಟ್ ಕೊಡಲಾಗಿದೆ. ಎರಡೆರಡು‌ ಭಾರೀ ಭಿ.ಪಾರಂ‌ನಿಂದ ನನ್ನ ಹೆಸರನ್ನು ತಪ್ಪಿಸಿದ್ದಾರೆ.ಹಣ ಬಲಕ್ಕೆ ಟಿಕೆಟ್ ನೀಡಲಾಗಿದೆ ಎಂದು ಮೊಯ್ದೀನಾ ಬಾವಾ ಆರೋಪಿಸಿದ್ದಾರೆ.

Leave A Reply