Weekend with Ramesh: ಈ ಬಾರಿ ಸಾಧಕರ ಸೀಟಲ್ಲಿ ಕೂರಲಿದ್ದಾರೆ ಈ ಮಹಾನ್ ಸಾಧಕರು!

Weekend With Ramesh  ಈಗಾಗಲೇ ಜೀ ಕನ್ನಡದಲ್ಲಿ ಭಾನುವಾರ ಮತ್ತು ಶನಿವಾರ ರಾತ್ರಿ 9 ಗಂಟೆಗೆ ವೀಕೆಂಡ್ ವೀಕೆಂಡ್ ವಿತ್ ರಮೇಶ್ (Weekend With Ramesh) ಐದನೇ ಸೀಸನ್​ ಪ್ರಾರಂಭವಾಗಿ ಕೆಲವು ವಾರಗಳು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

 

ಈವರೆಗೆ ನಟಿ ರಮ್ಯಾ (Ramya), ಪ್ರಭುದೇವ (Prabhu Deva), ಹೃದ್ರೋಗ ತಜ್ಞ ಡಾ ಮಂಜುನಾಥ್, ಹಿರಿಯ ನಟ ದತ್ತಣ್ಣ, ನಟ ಡಾಲಿ ಧನಂಜಯ್ ಅವರುಗಳು ಅತಿಥಿಗಳಾಗಿ ಆಗಮಿಸಿ ಸಾಧಕರ ಕುರ್ಚಿ ಅಲಂಕರಿ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಪ್ರೇಕ್ಷಕರಲ್ಲಿ ಇದೀಗ ಮುಂದಿನ ವಾರದ ಅತಿಥಿಗಳು ಯಾರು ಎಂಬ ಕುತೂಹಲ ಮೂಡಿದ್ದು ಕಾತುರದಿಂದ ಕಾಯುತ್ತಿದ್ದಾರೆ.

ವಿಶೇಷವೆಂದರೆ ಈ ವಾರಾಂತ್ಯಕ್ಕೆ ಇಬ್ಬರು ಅತಿಥಿಗಳನ್ನು ಸಾಧಕರ ಕುರ್ಚಿ ಮೇಲೆ ಕೂರಿಸಲಾಗುತ್ತಿದೆ. ಇವರು ಇಬ್ಬರೂ ಸಹ ಜನಪ್ರಿಯ ಪೋಷಕ ನಟರು ಆಗಿದ್ದು, ನಟ ಮಂಡ್ಯ ರಮೇಶ್ ಹಾಗೂ ನಟ ಅವಿನಾಶ್ ಅವರುಗಳು ಈ ವಾರ ಅತಿಥಿಗಳಾಗಿ ಆಗಮಿಸಿ ಸಾಧಕರ ಕುರ್ಚಿ ಏರಲಿದ್ದಾರೆ. ಈ ಇಬ್ಬರು ಅತಿಥಿಗಳು ಜೀವನದ ಅನುಭವದ ಬಗ್ಗೆ ಹೇಳಲಿದ್ದಾರೆ.

ರಂಗಭೂಮಿಯನ್ನೇ ಉಸಿರಾಗಿಸಿಕೊಂಡಿದ್ದ ಮಂಡ್ಯ ರಮೇಶ್, ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡು ಈ ಹಂತದ ವರೆಗೆ ಬೆಳೆದವರು. ಅಲ್ಲದೆ ಮಂಡ್ಯ ರಮೇಶ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇನ್ನು ಅವಿನಾಶ್ ಸಹ ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದವರು. ಇವರು ಹಲವು ದಶಕಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈಗಲೂ ಬಹು ಬೇಡಿಕೆಯ ಪೋಷಕ ನಟರಲ್ಲಿ ಒಬ್ಬರಾಗಿದ್ದಾರೆ.

ಮಂಡ್ಯ ರಮೇಶ್ ಹಾಗೂ ಅವಿನಾಶ್ ಅವರುಗಳು ಸಾಧಕರ ಕುರ್ಚಿಯ ಮೇಲೆ ಕುಳಿತ ಚಿತ್ರವನ್ನು ಜೀ ಕನ್ನಡ ಈಗಾಗಲೇ ಹಂಚಿಕೊಂಡಿದೆಯಾದರೂ ಚಿತ್ರವನ್ನು ಬ್ಲರ್ ಮಾಡಿ ಈ ಬಾರಿಯ ಸಾಧಕರು ಯಾರು ಗುರುತಿಸಿ ಎಂದು ಓದುಗರನ್ನು ಕೇಳಲಾಗಿತ್ತು. ಹೆಚ್ಚಿನ ಓದುಗರು ಸರಿಯಾಗಿಯೇ ಗೆಸ್ ಮಾಡಿದ್ದಾರೆ.

ಆದರೆ ಕೆಲ ಅಭಿಮಾನಿಗಳು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಸಾಧಕರು ಅಂದರೆ ಕೇವಲ ಸಿನಿಮಾ ವ್ಯಕ್ತಿಗಳನ್ನು ಯಾಕೆ ಆರಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

ಒಟ್ಟಿನಲ್ಲಿ ಮಂಡ್ಯ ರಮೇಶ್ ಹಾಗೂ ನಟ ಅವಿನಾಶ್ ಅವರ ಎಪಿಸೋಡ್‍ಗೆ ಅಭಿಮಾನಿಗಳು ಕಾತುರದಿಂದ ಇದ್ದರೆ.

Leave A Reply

Your email address will not be published.