Varun Gandhi: “ನನ್ನ ಚಪ್ಪಲಿ ಎತ್ತಲು ಲಾಯಕ್ಕಿಲ್ಲದವರು, ಸರ್ಕಾರಿ ಬಂಗಲೆಯಲ್ಲೇ ಉಳಿದ ನಾಲಯಕ್ಕಿನವರು ಇಂದು ಸಚಿವರಾಗಿದ್ದಾರೆ” : ವರುಣ್ ಗಾಂಧಿ!

Varun Gandhi : ಸದಾ ಏನಾದರೂ ಒಂದು ಹೇಳಿಕೆಗಳಿಂದ ಅಥವಾ ತಮ್ಮದೇ ಸರ್ಕಾರದ ಕುರಿತೋ, ಪಕ್ಷದ ಕುರಿತೋ ಕುಹಕವಾಡುತ್ತಾ ಯಾವಾಗಲೂ ಸುದ್ದಿಯಲ್ಲಿರೋ ಸಂಸದರೆಂದರೆ ಫಿಲಿಬಿಟ್‌ ಲೋಕಸಭಾ ಕ್ಷೇತ್ರದ ಬಿಜೆಪಿ(BJP) ಸಂಸದ ವರುಣ್‌ ಗಾಂಧಿ(Varun Gandhi) ಅವರು. ಸದ್ಯ ವರುಣ್ ಅವರು ಇತೀಗ ಮತ್ತೊಮ್ಮೆ ತಮ್ಮ ಮಾತುಗಳಿಂದ ಸುದ್ದಿಯಾಗಿದ್ದಾರೆ.

ಹೌದು, ಉತ್ತರ ಪ್ರದೇಶದ(Uttar pradesh) ಫಿಲಿಬಿಟ್‌ನಲ್ಲಿ ಜನ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವರುಣ್‌ ಗಾಂಧಿ ರಾಜ್ಯ ನಾಯಕರು ಹಾಗೂ ಭ್ರಷ್ಟಾಚಾರವನ್ನು ಟೀಕೆ ಮಾಡಿ ಮಾತನಾಡಿದ್ದು ಅವರ ಮಾತುಗಳು ಸಖತ್ ವೈರಲ್ ಆಗ್ತಿದೆ. ನನ್ನ ಚಪ್ಪಲಿಯನ್ನು ಎತ್ತಿಕೊಳ್ಳಲು ಲಾಯಕ್ಕಿಲ್ಲದವರೆಲ್ಲ ಇಂದು ಐದೈದು ವಾಹಗಳನ್ನು ಹೊಂದಿರುವ ಬೆಂಗಾವಲು ಪಡೆಗಳಲ್ಲಿ ತಿರುಗಾಡುತ್ತಿದ್ದಾರೆ ಎಂದು ಭ್ರಷ್ಟ ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಮಾತಿನಲ್ಲೇ ತಿವಿದಿದ್ದಾರೆ.

ಅಂದಹಾಗೆ ಇತ್ತೀಚಿನ ದಿನಗಳಲ್ಲಿ ಹಲವಾರು ವಿಚಾರಗಳಲ್ಲಿ ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶವನ್ನು ತೀವ್ರವಾಗಿ ಟೀಕಿಸಿರುವ ವರುಣ್‌ ಗಾಂಧಿ, ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದಾರೆ. ಇಂದು ಅಧಿಕಾರಕ್ಕೆ ಬಂದಿರುವ ಸರ್ಕಾರಗಳು ಜನರನ್ನು ಲೂಟಿ ಮಾಡಲು ಇಳಿದಿವೆ ಎಂದು ಹೇಳಿದ್ದಾರೆ.

“ನಾವು ಕಳೆದ 35 ವರ್ಷಗಳಿಂದ ಫಿಲಿಬಿಟ್‌ನಲ್ಲಿ ರಾಜಕಾರಣ ಮಾಡುತ್ತಿದ್ದೇವೆ. ನನ್ನ ತಾಯಿ ಮನೇಕಾ ಗಾಂಧಿ ಕೂಡ ದೇಶದ ಅಗ್ರ ಸಂಸದರಲ್ಲಿ ಒಬ್ಬರು. ಅವರೂ ನಿರಂತರವಾಗಿ ರಾಜಕೀಯದಲ್ಲಿದ್ದಾರೆ. ನಾನು ಮೂರು ಬಾರಿಯ ಸಂಸದ. ನಾನೇನಾದರೂ ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆಯೇ? ನಮಗೇನಾದರೂ ದೊಡ್ಡ ಮನೆಗಳಿವೆಯೇ?” ಎಂದು ಜನರನ್ನು ಪ್ರಶ್ನೆ ಮಾಡಿದ್ದಾರೆ.

ಅಲ್ಲದೆ “ಇಂದು ನನ್ನ ಚಪ್ಪಲಿ ಎತ್ತಿಕೊಳ್ಳಲು ಲಾಯಕ್ಕಿಲ್ಲದವರೆಲ್ಲ ಐದೈದು ವಾಹಗಳಿರುವ ಬೆಂಗಾವಲು ಪಡೆಯೊಂದಿಗೆ ತಿರುಗಾಡುತ್ತದ್ದಾರೆ. ಈ ಎಲ್ಲಾ ಸಚಿವರುಗಳು ತಮಗೆ ಬೆಂಬಲ ನೀಡಿ ಎಂದು ಭಿಕ್ಷೆ ಬೇಡುತ್ತಿದ್ದರು. ತಮ್ಮನ್ನು ಸಚಿವರನ್ನಾಗಿ ಮಾಡಿ ಎಂದು ಮನವಿ ಮಾಡಿಕೊಲ್ಳುತ್ತಿದ್ದರು. ಈಗ ಅವರಿಗೆಲ್ಲ ನನ್ನ ಮುಂದೆ ಮಾತನಾಡುವ ಧೈರ್ಯ ಕೂಡ ಇರಲಿಕ್ಕಿಲ್ಲ” ಎಂದು ವರುಣ್‌ ಗಾಂಧಿ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಅವರು ಇಂದು ಕೆಲವರಿಗೆ ಮೂರು ಅಂತಸ್ತಿನ ಮನೆಗಳನ್ನು ಉಳಿದುಕೊಳ್ಳಲು ನೀಡಲಾಗಿದೆ. ಇನ್ನುಳಿದ ಕೆಲವರು ಈಗಲೂ ಕೂಡ ತಮ್ಮ ಮನೆಗಳಿಗಾಗಿ ಕಾಯುತ್ತಿದ್ದಾರೆ. ಇದಕ್ಕೆ ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರವೇ ಕಾರಣ ಎಂದಿದ್ದಾರೆ. ಇದೆಲ್ಲವೂ ಗುಲಾಮಗಿರಿಗಿಂತ ಕಡಿಮೆಯಿಲ್ಲ, ಚುನಾವಣೆಗಳು ಬಂದಾಗ ಜಾತಿ, ಧರ್ಮದ ಭಾವನೆಗಳಿಗೆ ಮಣಿದು ಮತ ಹಾಕುತ್ತಾರೆ. ಅವರು (ರಾಜಕಾರಣಿಗಳು) ನಿಮ್ಮ ಜೇಬು ದೋಚುತ್ತಿದ್ದಾರೆ. 35 ವರ್ಷವಾಗಿ ಇಂದಿಗೂ ನಾವು ಒಂದು ಕೋಣೆಯ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ. ಹಾಗೇನಾದರೂ ನನ್ನ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ, ಇಷ್ಟು ಹೊತ್ತಿಗೆ ದೊಡ್ಡ ದೊಡ್ಡ ಮನೆ ಕಟ್ಟಿಕೊಂಡಿರುತ್ತಿದ್ದ. ನಾನು ಹೇಳುತ್ತಿರುವುದರಲ್ಲಿ ಸತ್ಯ ಇದೆಯೋ? ಇಲ್ಲವೋ? ಎನ್ನುವುದನ್ನು ನೀವೇ ನೋಡಿ ಎಂದು ಹೇಳಿದರು.

ಇದನ್ನೂ ಓದಿ: Karnataka Polls: 10,000 ಮನೆಗಳಲ್ಲಿ ಭಿಕ್ಷೆ ಬೇಡಿ, 10,000 ನಾಣ್ಯ ತಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ; ಚಿಲ್ಲರೆ ಎಣಿಸಿದ ಅಧಿಕಾರಿಗಳು ಸುಸ್ತೋ ಸುಸ್ತು !

Leave A Reply

Your email address will not be published.