LIC jeevan tarun yojan : ಮಕ್ಕಳಿಗಾಗಿಯೇ ರೂಪಿತವಾಗಿದೆ ಜೀವನ್ ತರುಣ್ ಪಾಲಿಸಿ : ಕಡಿಮೆ ಮೊತ್ತವನ್ನು ಉಳಿತಾಯ ಮಾಡಿ ಪಡೆಯಬಹುದು ಲಕ್ಷ ಆದಾಯ!
LIC jeevan tarun yojan: ಉಳಿತಾಯ ಎಂಬುದು ಮನುಷ್ಯನ ಅವಿಭಾಜ್ಯ ಅಂಗವೆಂದರೆ ತಪ್ಪಾಗಲಾರದು. ಯಾಕಂದ್ರೆ ಇಂದಿನ ದುಬಾರಿ ದುನಿಯಾದಲ್ಲಿ ಉಳಿತಾಯ ಎಂಬುದು ಇಲ್ಲದೆ ಹೋದರೆ ಬದುಕೇ ಕಷ್ಟ ಎನ್ನುವ ಮಟ್ಟಿಗೆ ತಲುಪಿದೆ. ಇಂತಹ ಹೂಡಿಕೆಗಾಗಿಯೇ ಹಲವು ಯೋಜನೆಗಳು ಕೂಡ ಜಾರಿಯಲ್ಲಿದೆ. ಹಣ ಸುರಕ್ಷಿತವಾಗಿರುವುದರ ಜೊತೆಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಆದಾಯ ಪಡೆಯುವಂತಹ ಹಲವು ಯೋಜನೆಗಳು ಭಾರತೀಯ ಜೀವ ವಿಮಾ ನಿಗಮದಲ್ಲಿದೆ.
ಹೌದು. ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಹೂಡಿಕೆದಾರರು ಎಲ್ ಐಸಿಯನ್ನು(LIC jeevan tarun yojan )ಮೊದಲು ಆಯ್ಕೆ ಮಾಡುತ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಹೂಡಿಕೆ ಮೂಲಕ ಉತ್ತಮ ರಿಟರ್ನ್ಸ್ ಪಡೆಯಬಹುದು. ಇಂತಹ ಯೋಜನೆಗಳಲ್ಲಿ ಜೀವನ್ ತರುಣ್ ಪಾಲಿಸಿ ಕೂಡ ಒಂದು.
ಈ ಯೋಜನೆ ಮಕ್ಕಳಿಗೆಂದು ರೂಪಿಸಲಾಗಿದ್ದು, ಪಾಲಿಸಿ ಮಾಡಿಸಲು ಮಗುವಿನ ವಯಸ್ಸು ಕನಿಷ್ಠ 3 ತಿಂಗಳು ಆಗಿರಬೇಕು. ಗರಿಷ್ಠ ವಯೋಮಿತಿ 12 ವರ್ಷ. ಅಂದರೆ 12 ವರ್ಷದೊಳಗಿನ ಮಕ್ಕಳ ಹೆಸರಿನಲ್ಲಿ ಎಲ್ಐಸಿ ಜೀವನ್ ತರುಣ್ ಪ್ಲಾನ್ ಮಾಡಿಸಬಹುದು. ಪ್ರೀಮಿಯಮ್ ಪಾವತಿಸುವ ವರ್ಷಗಳು 15 ವರ್ಷ. ಮಗು 20 ವರ್ಷ ವಯಸ್ಸು ಆಗುವವರೆಗೂ ಪ್ರತೀ ವರ್ಷ ಪ್ರೀಮಿಯಮ್ ಕಟ್ಟಬೇಕು. ಮಗುವಿನ ವಯಸ್ಸು 25 ವರ್ಷ ಆದಾಗ ಎಲ್ಲಾ ಹಣವನ್ನೂ ಹಿಂಪಡೆಯಬಹುದು.
ಈ ಸ್ಕೀಮ್ ನಲ್ಲಿ ಕೂಡ ಸಾಲ ಸೌಲಭ್ಯ ಇದ್ದು, ಪಾಲಿಸಿ ಸರ್ಟಿಫಿಕೇಟ್ ಅಡವಿಟ್ಟು ಸಾಲ ಪಡೆಯಬಹುದು. ಈ ಸೌಲಭ್ಯ ಪಡೆಯಲು ಕನಿಷ್ಠ 2 ವರ್ಷಗಳಾದರೂ ಪ್ರೀಮಿಯಮ್ ಕಟ್ಟಿರಬೇಕು. ಆವರೆಗೂ ಕಟ್ಟಲಾದ ಪ್ರೀಮಿಯಮ್ ಮೊತ್ತಕ್ಕೆ ಸಮೀಪದಷ್ಟು ಹಣವನ್ನು ಸಾಲವಾಗಿ ಪಡೆಯಬಹುದು. ಸರ್ವೈವಲ್ ಬೆನಿಫಿಟ್ ಆಯ್ಕೆ ಪ್ರಕಾರ ಮಗು 20ರಿಂದ 24ನೇ ವಯಸ್ಸಿನಲ್ಲಿ ಪ್ರತೀ ವರ್ಷ ನಿರ್ದಿಷ್ಟ ಮೊತ್ತದ ಹಣವನ್ನೂ ಪಡೆಯಲು ಸಾಧ್ಯ. ಸರ್ವೈವಲ್ ಬೆನಿಫಿಟ್ ಮೊತ್ತ ಎಷ್ಟು ಎಂಬುದನ್ನು ಪಾಲಿಸಿ ಮಾಡಿಸುವಾಗಲೇ ನಿರ್ದಿಷ್ಟಪಡಿಸಬೇಕು. ಶೇ. 5ರಿಂದ ಶೇ. 15ರಷ್ಟನ್ನು ಸರ್ವೈವಲ್ ಬೆನಿಫಿಟ್ ಮೊತ್ತವನ್ನು ಮಗು ಪಡೆಯಬಹುದು.
ಜೀವನ್ ತರುಣ್ ನೀತಿಯು ಸೀಮಿತ ಪಾವತಿ ಯೋಜನೆಯಾಗಿದೆ. ಈ ಪಾಲಿಸಿಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಕನಿಷ್ಟ ರೂ.75,000 ವಿಮಾ ಮೊತ್ತದ ಲಾಭವನ್ನು ಪಡೆಯಬಹುದು. ಅದೇ ಸಮಯದಲ್ಲಿ ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಈ ಯೋಜನೆಯ ಅಡಿಯಲ್ಲಿ, ನೀವು ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ, ವಾರ್ಷಿಕ ಆಧಾರದ ಮೇಲೆ ಪ್ರೀಮಿಯಂ ಅನ್ನು ಠೇವಣಿ ಮಾಡಬಹುದು. ಪ್ರೀಮಿಯಮ್ ಅನ್ನು ನೀವು ವರ್ಷಕ್ಕೆ ಬೇಕಾದರೂ ಕಟ್ಟಬಹುದು. ತಿಂಗಳಿಗೆ, ಮೂರು ತಿಂಗಳಿಗೆ ಅಥವಾ ಆರು ತಿಂಗಳಿಗೊಮ್ಮೆಯೂ ಕಟ್ಟಡಬಹುದು. ಪ್ರೀಮಿಯಮ್ ಮೊತ್ತ ಹೆಚ್ಚಿದಷ್ಟೂ ಪಾಲಿಸಿ ಮೊತ್ತವೂ ಹೆಚ್ಚುತ್ತದೆ. ಇದು ನಾನ್–ಲಿಂಕ್ಡ್ ಎಲ್ಐಸಿ ಪ್ಲಾನ್. ನಾನ್ ಲಿಂಕ್ಡ್ ಎಂದರೆ ಷೇರು ಮಾರುಕಟ್ಟೆಗೆ ಜೋಡಿತವಾಗದ ನಿರ್ದಿಷ್ಟ ರಿಟರ್ನ್ ಕೊಡುವ ಸ್ಕೀಮ್. ಇದರಿಂದ ಮಕ್ಕಳ ವಿದ್ಯಾಭ್ಯಾಸ, ಮದುವೆ ಖರ್ಚನ್ನು ಮುಗಿಸಬಹುದು.
ಇದನ್ನು ಓದಿ : Man Kills Wife: ‘ ಅದು ಬೇಕು – ಈಗ ಬೇಡ ‘ ಕೂಡೋ ವಿಷಯದಲ್ಲಿ ದಂಪತಿ ಕಲಹ : ಬಾವಿಗೆ ಜಿಗಿದ ಪತ್ನಿಯನ್ನು ರಕ್ಷಿಸಿ, ಬಳಿಕ ಕೊಂದ ಪತಿ !