JDS 4th List: ಜೆಡಿಎಸ್ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಪ್ರಕಟ – ಮಂಡ್ಯಕ್ಕೆ ಇವರೇ ಅಭ್ಯರ್ಥಿ!
JDS 4th List: ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳಲ್ಲಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಂತಿಮ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ಜಾತ್ಯತೀತ ಜನತಾದಳ(JDS) ವಿಧಾನಸಭಾ ಚುನಾವಣೆಯಲ್ಲಿ (Karnataka Elections 2023) ಪಕ್ಷದಿಂದ ಸ್ಪರ್ಧಿಸಲಿರುವ ನಾಲ್ಕನೇ ಪಟ್ಟಿಯ ಅಭ್ಯರ್ಥಿಗಳನ್ನು (JDS 4th List) ಇಂದು ಬುಧವಾರ ಬಿಡುಗಡೆಗೊಳಿಸಿದೆ.
ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ (JDS) ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ ಇಬ್ರಾಹಿಂ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಇಲ್ಲಿಯವರೆಗೆ ಜೆಡಿಎಸ್ ಒಟ್ಟು 207 ಕ್ಷೇತ್ರಗಳ ಅಭ್ಯರ್ಥಿಯನ್ನು ಅಂತಿಮ ಮಾಡಿದೆ ಎಂದು ತಿಳಿದು ಬಂದಿದೆ. ಉಳಿದ ಕ್ಷೇತ್ರಗಳ ಅಭ್ಯರ್ಥಿಗಳನ್ನು ಇಂದು ಸಂಜೆ ಅಂತಿಮಗೊಳಿಸಲಾಗುವ ಕುರಿತು ಇಬ್ರಾಹಿಂ ಅವರು ಮಾಹಿತಿ ನೀಡಿದ್ದಾರೆ.
ಜೆಡಿಎಸ್ ನಲ್ಲಿ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಆದರೆ ಮಂಡ್ಯ ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆಯ ಒತ್ತಡವಿರುವ ಹಿನ್ನೆಲೆ ಟಿಕೆಟ್ ಆಕಾಂಕ್ಷಿಗಳು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಹಿಂದೆ ಅಡ್ಡಾಡ್ಡುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ. ಇದರ ನಡುವೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರಾ ಎಂಬ ಪ್ರಶ್ನೆ ಕೂಡ ಸಹಜವಾಗಿ ಕಾಡುತ್ತಿದೆ. ಈಗಾಗಲೇ ಟಿಕೆಟ್ ಘೋಷಣೆಯಾಗಿರುವ ಶಾಸಕ ಎಂ.ಶ್ರೀನಿವಾಸ್ ಕೂಡ ಟಿಕೆಟ್ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದು, ಕ್ಷೇತ್ರದಾದ್ಯಂತ ಸಂಚರಿಸಿ ಸಾರ್ವಜನಿಕರ ಮನವೊಲಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ನಾಲ್ಕನೇ ಪಟ್ಟಿಯಲ್ಲಿ 59 ಅಭ್ಯರ್ಥಿಗಳ ಹೆಸರುಗಳಿದ್ದು, ಕೆಲವು ಕ್ಷೇತ್ರಗಳಲ್ಲಿ ಈಗಾಗಲೇ ಪ್ರಕಟಿಸಲಾಗಿದ್ದ ಅಭ್ಯರ್ಥಿಗಳನ್ನು ಬದಲಾವಣೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ಹೆಸರನ್ನು ಸೇರ್ಪಡೆ ಮಾಡಲಾಗಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಪ್ರಸನ್ನಕುಮಾರ್ ಅವರನ್ನು ಬಿಟ್ಟು ಇಂದು ಬಿಜೆಪಿಗೆ ಗುಡ್ ಬೈ ಹೇಳಿ ಜೆಡಿಎಸ್ ಗೆ ಸೇರಿರುವ ಶಿವಮೊಗ್ಗದ ಆಯನೂರು ಮಂಜುನಾಥ್ ಅವರನ್ನು ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿ ಘೋಷಣೆ ವಿಚಾರ ಅಂತಿಮ ಹಂತಕ್ಕೆ ಬಂದಿದ್ದು ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಕೌತುಕ ಮನೆ ಮಾಡಿದೆ. ‘ಟಿಕೆಟ್ ಹಂಚಿಕೆ ವಿಚಾರ ಈಗ ಕೈಮಾಕ್ಸ್ ಹಂತಕ್ಕೆ ಬಂದಿದ್ದು, ಅಂತಿಮವಾಗಿ ಹೈಕಮಾಂಡ್ ಮನವೊಲಿಸಲು ನಾಯಕರು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ.
ಅಭ್ಯರ್ಥಿಗಳ ವಿವರ ಹೀಗಿದೆ
ನಿಪ್ಪಾಣಿ- ರಾಜು ಮಾರುತಿ ಪವಾರ್
ಚಿಕ್ಕೋಡಿ ವಿಧಾನಸಭಾ ಕ್ಷೇತ್ರ-ಸದಾಶಿವ ವಾಳಕೆ
ಕಾಗವಾಡ ವಿಧಾನಸಭಾ ಕ್ಷೇತ್ರ- ಮಲ್ಲಪ್ಪ ಎಂ ಚುಂಗ
ಹುಕ್ಕೇರಿ ಕ್ಷೇತ್ರ- ಬಸವರಾಜಗೌಡ ಪಾಟೀಲ್
ಅರಭಾವಿ ಕ್ಷೇತ್ರ- ಪ್ರಕಾಶ ಕಾಶ ಶೆಟ್ಟಿ
ಶಿವಮೊಗ್ಗ ನಗರ- ಆಯನೂರು ಮಂಜುನಾಥ್
ಯಮಕನಮರಡಿ ಕ್ಷೇತ್ರ -ಮಾರುತಿ ಮಲ್ಲಪ್ಪ ಅಷ್ಟಗಿ
ಬೆಳಗಾವಿ ಉತ್ತರ ಕ್ಷೇತ್ರ- ಶಿವಾನಂದ ಮುಗಲಿಹಾಳ್
ಬೆಳಗಾವಿ ದಕ್ಷಿಣ ಕ್ಷೇತ್ರ- ಶ್ರೀನಿವಾಸ್ ತೋಳಲ್ಕರ್
ಬೆಳಗಾವಿ ಗ್ರಾಮಾಂತರ ಕ್ಷೇತ್ರ- ಶಂಕರಗೌಡ ರುದ್ರಗೌಡ ಪಾಟೀಲ್
ರಾಮದುರ್ಗ ಕ್ಷೇತ್ರ- ಪ್ರಕಾಶ್ ಮುಧೋಳ
ಮುಧೋಳ ಕ್ಷೇತ್ರ-ಧರ್ಮರಾಜ್ ವಿಠ್ಠಲ್ ದೊಡ್ಮನಿ
ತೇರದಾಳ ಕ್ಷೇತ್ರ-ಸುರೇಶ್ ಅರ್ಜುನ್ ಮಡಿವಾಳರ್
ಜಮಖಂಡಿ ಕ್ಷೇತ್ರ-ಯಾಕೂಬ್ ಬಾಬಲಾಲ್ ಕಪಡೇವಾಲ
ಬೀಳಗಿ ಕ್ಷೇತ್ರ-ರುಕ್ಕುದ್ದೀನ್ ಸೌದಗರ್
ಬಾಗಲಕೋಟೆ ಕ್ಷೇತ್ರ-ದೇವರಾಜ ಪಾಟೀಲ್
ಹುನಗುಂದ ಕ್ಷೇತ್ರ-ಶಿವಪ್ಪ ಮಹದೇವಪ್ಪ ಬೋಲಿ
ವಿಜಯಪುರ ಕ್ಷೇತ್ರ-ಬಂಡೇನವಾಜ್ ನಾಜರಿ
ಸುರಪುರ ಕ್ಷೇತ್ರ-ಶ್ರವಣಕುಮಾರ ನಾಯ್ಕ್
ಕಲಬುರಗಿ ದಕ್ಷಿಣ ಕ್ಷೇತ್ರ-ಕೃಷ್ಣಾರೆಡ್ಡಿ
ಔರಾದ್ ಕ್ಷೇತ್ರ-ಜೈಸಿಂಗ್ ರಾಥೋಡ್
ರಾಯಚೂರು ನಗರ ಕ್ಷೇತ್ರ-ಈ.ವಿನಯ್ ಕುಮಾರ್
ಮಸ್ಕಿ ಕ್ಷೇತ್ರ-ರಾಘವೇಂದ್ರ ನಾಯಕ
ಕನಕಗಿರಿ ಕ್ಷೇತ್ರ-ರಾಜಗೋಪಾಲ
ಯಲಬುರ್ಗಾ ಕ್ಷೇತ್ರ-ಮಲ್ಲನಗೌಡ ಸಿದ್ದಪ್ಪ ಕೋಣನಗೌಡ
ಕೊಪ್ಪಳ ಕ್ಷೇತ್ರ-ಚಂದ್ರಶೇಖರ
ಶಿರಹಟ್ಟಿ ಕ್ಷೇತ್ರ-ಹನುಮಂತಪ್ಪ ನಾಯಕ
ಗದಗ ಕ್ಷೇತ್ರ-ಯಂಕನಗೌಡ ಗೋವಿಂದಗೌಡರ
ರೋಣ ಕ್ಷೇತ್ರ-ಮುಗದಮ್ ಸಾಬ್ ಮುಧೋಳ
ಚಿತ್ರದುರ್ಗ ಕ್ಷೇತ್ರ-ರಘು ಆಚಾರ್
ರಾಜರಾಜೇಶ್ವರಿನಗರ ಕ್ಷೇತ್ರ-ಡಾ.ನಾರಾಯಣಸ್ವಾಮಿ
ಮಲ್ಲೇಶ್ವರಂ ಕ್ಷೇತ್ರ-ಉತ್ಕರ್ಷ್
ಚಿಕ್ಕಪೇಟೆ ಕ್ಷೇತ್ರ-ಇಮ್ರಾನ್ ಪಾಷಾ
ಚಾಮರಾಜಪೇಟೆ ಕ್ಷೇತ್ರ-ಗೋವಿಂದರಾಜ್
ಪದ್ಮನಾಭನಗರ ಕ್ಷೇತ್ರ-ಬಿ.ಮಂಜುನಾಥ
ಬಿಟಿಎಂ ಲೇಔಟ್ ಕ್ಷೇತ್ರ-ವೆಂಕಟೇಶ್
ಜಯನಗರ ಕ್ಷೇತ್ರ-ಕಾಳೇಗೌಡ
ಬೊಮ್ಮನಹಳ್ಳಿ ಕ್ಷೇತ್ರ-ನಾರಾಯಣರಾಜು
ಅರಸೀಕೆರೆ ಕ್ಷೇತ್ರ-ಎನ್.ಆರ್.ಸಂತೋಷ್
ಮೂಡಬಿದ್ರೆ ಕ್ಷೇತ್ರ-ಅಮರಶ್ರೀ
ಸುಳ್ಯ ಕ್ಷೇತ್ರ-ಹೆಚ್.ಎನ್.ವೆಂಕಟೇಶ್
ವಿರಾಜಪೇಟೆ ಕ್ಷೇತ್ರ-ಮನ್ಸೂರ್ ಅಲಿ
ಚಾಮರಾಜ ಕ್ಷೇತ್ರ-ಹೆಚ್.ಕೆ.ರಮೇಶ್
ನರಸಿಂಹರಾಜ ಕ್ಷೇತ್ರ-ಅಬ್ದುಲ್ ಖಾದರ್ ಶಾಹಿದ್
ಚಾಮರಾಜನಗರ ಕ್ಷೇತ್ರ-ಮಲ್ಲಿಕಾರ್ಜುನ ಸ್ವಾಮಿ
ಕೂಡ್ಲಿಗಿ ಕ್ಷೇತ್ರ-ಕೋಡಿಹಳ್ಳಿ ಭೀಮಪ್ಪ
12 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಬದಲಾವಣೆ
ಬಸನಬಾಗೇವಾಡಿ ಕ್ಷೇತ್ರ-ಸೋಮನಗೌಡ ಪಾಟೀಲ್
ಬಸವಕಲ್ಯಾಣ ಕ್ಷೇತ್ರ-ಸಂಜಯ್ ವಾಡೇಕರ್
ಬೀದರ್ ಕ್ಷೇತ್ರ-ಸೂರ್ಯಕಾಂತ್ ನಾಗಮಾರಪಳ್ಳಿ
ಕುಷ್ಟಗಿ ಕ್ಷೇತ್ರ-ಶರಣಪ್ಪ ಕುಂಬಾರ
ಹಗರಿಬೊಮ್ಮನಹಳ್ಳಿ ಕ್ಷೇತ್ರ-ನೇಮಿರಾಜ ನಾಯ್ಕ್
ಬಳ್ಳಾರಿ ನಗರ ಕ್ಷೇತ್ರ-ಅನಿಲ್ ಲಾಡ್
ಚನ್ನಗಿರಿ ಕ್ಷೇತ್ರ-ತೇಜಸ್ವಿ ಪಟೇಲ್
ಮೂಡಿಗೆರೆ ಕ್ಷೇತ್ರ-ಎಂ.ಪಿ.ಕುಮಾರಸ್ವಾಮಿ
ರಾಜಾಜಿನಗರ ಕ್ಷೇತ್ರ-ಡಾ.ಅಂಜನಪ್ಪ
ಬೆಂಗಳೂರು ದಕ್ಷಿಣ ಕ್ಷೇತ್ರ-ರಾಜಗೋಪಾಲರೆಡ್ಡಿ
ಮಂಡ್ಯ ಕ್ಷೇತ್ರ-ಬಿ.ಆರ್.ರಾಮಚಂದ್ರ
ವರುಣ ಕ್ಷೇತ್ರ-ಭಾರತಿ ಶಂಕರ್