Pushpa movie director Sukumar: ಪುಷ್ಪ’ ಸಿನಿಮಾ ನಿರ್ದೇಶಕ, ನಿರ್ಮಾಪಕರ ಮನೆ, ಕಚೇರಿ ಮೇಲೆ ಐಟಿ ದಾಳಿ

Pushpa movie director Sukumar: ಇಂದು ಬೆಳ್ಳಂಬೆಳಗ್ಗೆ ಪುಪ್ಪ ಸಿನಿಮಾ ನಿರ್ದೇಶಕ ಸುಕುಮಾರ್ ಹಾಗೂ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಮೇಲೆ ಐಟಿ ಇಲಾಖೆ ದಾಳಿ ಮಾಡಿದೆ. ಹೈದರಾಬಾದ್ ನಗರದ ವಿವಿಧ ಕಡೆಗಳಲ್ಲಿ ದಾಳಿ ಮಾಡಿದ್ದಾರೆ. ಸುಕುಮಾರ್​ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಶೋಧ ಮಾಡಲಾಗಿದೆ. ‘ಮೈತ್ರಿ ಮೂವೀ ಮೇಕರ್ಸ್​’ ನಿರ್ಮಾಪಕರಾದ ನವೀನ್ ಯೆರ್ನೇನಿ ಹಾಗೂ ರವಿ ಯಲಮಂಚಿಲಿ ಅವರ ಮನೆ ಮೇಲೂ ದಾಳಿ ನಡೆದಿದೆ. ಸದ್ಯ ಶೋಧ ಕಾರ್ಯ ಮುಂದುವರೆದಿದೆ.

 

ಸುಕುಮಾರ್‌ ಸಾಕಷ್ಟು ಸಿನಿಮಾಗಳನ್ನು ನಿರ್ದೇಶಕ (Pushpa movie director Sukumar) ಮಾಡಿದ್ದಾರೆ. ಇದಕ್ಕೆ ‘ಸುಕುಮಾರ್ ರೈಟಿಂಗ್ಸ್’ ಎಂದು ಹೆಸರು ಇಟ್ಟಿದ್ದಾರೆ. ಅನೇಕ ನಿರ್ಮಾಣ ಸಂಸ್ಥೆಗಳ ಜೊತೆ ಕೈ ಜೋಡಿಸಿ ಇವರು ಸಿನಿಮಾ ನಿರ್ಮಾಣ ಮಾಡುತ್ತಾರೆ. ವರುಣ್ ತೇಜ್ ಮುಂದಿನ ಸಿನಿಮಾ ‘ವಿರೂಪಾಕ್ಷ’ಕ್ಕೆ ಸುಕುಮಾರ್ ಬಂಡವಾಳ ಹೂಡಿದ್ದಾರೆ. ಈ ಚಿತ್ರ ಏಪ್ರಿಲ್ 21ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ರಿಲೀಸ್​ಗೆ ಕೆಲವೇ ದಿನ ಬಾಕಿ ಇರುವಾಗ ಐಟಿ ರೇಡ್​​ ನಡೆದಿದೆ.

ಸದ್ಯ ಶೋಧಕಾರ್ಯ ಮುಂದುವರಿದಿದೆ. ಐಟಿ ದಾಳಿ ವೇಳೆ ಯಾವುದಾದರೂ ಮಹತ್ವದ ದಾಖಲೆ ಸಿಕ್ಕಿದೆಯೇ ಎನ್ನುವ ವಿಚಾರ ಇನ್ನಷ್ಟೇ ಅಧಿಕೃತ ಆಗಬೇಕಿದೆ. ಮೈತ್ರಿ ಮೂವೀ ಮೇಕರ್ಸ್​ ‘ಪುಷ್ಪ 2’ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ದೊಡ್ಡ ಬಜೆಟ್​ನಲ್ಲಿ ಸಿನಿಮಾ ಸಿದ್ಧ ಆಗುತ್ತಿದೆ. ಇತ್ತೀಚೆಗಷ್ಟೇ ಸಿನಿಮಾ ಶೂಟಿಂಗ್ ಆರಂಭ ಆಗಿತ್ತು. ಈ ಮಧ್ಯೆ ನಿರ್ಮಾಪಕರಿಗೆ ಐಟಿ ದಾಳಿಯ ಬಿಸಿ ತಟ್ಟಿದೆ.

 

ಇದನ್ನು ಓದಿ : Marathon with saree : ವಿದೇಶಗಳ ಬೀದಿಗಳಲ್ಲಿ ಭಾರತೀಯ ಸಂಪ್ರದಾಯವನ್ನು ಪ್ರದರ್ಶಿಸಿದ ಮಹಿಳೆ ! ಸೀರೆಯೊಂದಿಗೆ ಮ್ಯಾರಥಾನ್‌ ಮಾಡಿರುವ ವಿಡಿಯೋ ವೈರಲ್‌ 

Leave A Reply

Your email address will not be published.