Chethan Kumar: ಕಾಂಗ್ರೆಸ್ ಸೇರ್ಪಡೆಗೊಂಡ ಶೆಟ್ಟರ್ ಗೆ ಟಾಂಗ್ ಕೊಟ್ರ ನಟ ಚೇತನ್?!

Share the Article

Chethan Kumar: ನಟ ಚೇತನ್(Chethan Kumar) ಅವರು ದಿನಂಪ್ರತಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುವುದು ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲಿಯೂ ಹೆಚ್ಚಾಗಿ ವಿವಾದಾದ್ಮಕ ಹೇಳಿಕೆ ಮೂಲಕವೇ ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಇತ್ತೀಚೆಗಷ್ಟೆ ಹಿಂದುತ್ವದ ಕುರಿತು ಹೇಳಿಕೆ ನೀಡಿ ಜೈಲಿಗೂ ಹೋಗಿ ಬಂದಿದ್ದು ನೆನಪಿರಬಹುದು. ಇದೀಗ, ಮತ್ತೊಮ್ಮೆ ನಟ ಚೇತನ್ ಅವರು ಮಾಜಿ ಸಿಎಂ ಜಗದೀಶ್ ಶೆಟ್ಟರ್(Jagadish Shettar) ಕುರಿತಂತೆ ಟ್ವೀಟ್ ಮಾಡಿದ್ದಾರೆ.

ಈಗಾಗಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ(Congress Party) ಸೇರ್ಪಡೆಯಾಗುವ ಕುರಿತು ಈಗಾಗಲೇ ಎಲ್ಲೆಡೆ ಸುದ್ದಿಯಾಗಿದೆ. ಈ ನಡುವೆ ನಟ ಚೇತನ್‌ ಅವರು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬಿಜೆಪಿ(BJP) ಪಾಳಯವನ್ನು ಬಿಟ್ಟು ಕಾಂಗ್ರೆಸ್‌ ಸೇರ್ಪಡೆಯಾಗಿರುವ(Congeess Party)ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಎರಡು ವಿಷಯಗಳ ಕುರಿತಾಗಿ ಪ್ರಸ್ತಾಪ ಮಾಡಿದ್ದಾರೆ.

ಬಿಜೆಪಿಯಲ್ಲಿಯೇ ಕೊನೆಯವರೆಗೂ ಇರುವುದೇ ಯೋಗ್ಯ ಎಂಬುದು ಪ್ರಶ್ನಾರ್ಹವಾಗಿದ್ದು, ಪಕ್ಷಾಂತರ ಮಾಡುವ ಪರಂಪರೆ ಖಂಡಿತವಾಗಿಯೂ ಪ್ರಶ್ನಾರ್ಹವಾಗಿದೆ ಎಂಬುದು ಜಗದೀಶ ಶೆಟ್ಟರ್‌ ವಿಚಾರದಲ್ಲಿ ಚೇತನ್‌ ಪ್ರತಿಕ್ರಿಯೆ ನೀಡಿದ್ದಾರೆ. ಜಗದೀಶ್‌ ಶೆಟ್ಟರ್‌ ಅವರು ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಿರುವುದರಿಂದ ಎರಡು ವಿಚಾರಗಳು ಜಗಜ್ಜಾಹೀರಾಗಿದೆ. ಮೊದಲನೆಯದಾಗಿ, ಜಗದೀಶ್ ಶೆಟ್ಟರ್‌ ಅವರು ಎಂದಿಗೂ ಸಿದ್ಧಾಂತದಿಂದ ಹಿಂದುತ್ವವಾದಿಯಾಗಿರಲಿಲ್ಲ. ಇದು ಒಳ್ಳೆಯದೆಂದು ಚೇತನ್‌ ಅವರು ಹೇಳಿಕೊಂಡಿದ್ದಾರೆ. ಎರಡನೆಯದು, ಅವರು ಅಧಿಕಾರ ಬಯಸುತ್ತಿರುವ ಮತ್ತೊಬ್ಬ ಅವಕಾಶವಾದಿ ರಾಜಕಾರಣಿ ಎಂಬುದು ಕೆಟ್ಟದ್ದು ಎಂಬುದಾಗಿ ನಟ ಚೇತನ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ಲಕ್ಷ ಲಕ್ಷ ದಂಡ ಕಕ್ಕಿದ ವಿರಾಟ್ ಕೊಹ್ಲಿ: IPL ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆ, ಅಂತದ್ದು. ಎನ್ಮಾಡಿದ್ರು ಕೊಹ್ಲಿ ?!

Leave A Reply