BJP final list released: ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ! ಈಶ್ವರಪ್ಪನಿಗೆ ಬಿಗ್ ಶಾಕ್ ನೀಡಿದ ಹೈಕಮಾಂಡ್
BJP final list released: ಕರ್ನಾಟಕ ವಿಧಾನಸಭಾ ಚುನಾವಣೆ ವಿಚಾರವಾಗಿ ತೀವ್ರ ಕುತೂಹಲ ಕೆರಳಿಸಿದ್ದ ಬಿಜೆಪಿಯ ಅಂತಿಮ ಪಟ್ಟಿ (BJP final list released) ಇದೀಗ ರಿಲೀಸ್ ಆಗಿದ್ದು ಬಿಜೆಪಿ (BJP) ಕೊನೆವರೆಗೂ ಉಳಿಸಿಕೊಂಡಿದ್ದ ಎರಡು ಕ್ಷೇತ್ರಗಳಿಗೆ ಕೊನೆಗೂ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ ಈ ಮೂಲಕ ಬಿಜೆಪಿ ಮಾಸ್ ಲೀಡರ್, ಮಾಜಿ ಸಚಿವ ಕೆ ಎಸ್ ಈಶ್ವರಪ್ಪನಿಗೆ ಹೈಕಮಾಂಡ್ ಶಾಕ್ ನೀಡಿದೆ.
ಹೌದು, ಬಾಕಿ ಉಳಿದಿದ್ದಂತಹ ಶಿವಮೊಗ್ಗ ಹಾಗೂ ಮಾನ್ವಿ ಕ್ಷೇತ್ರಗಳಿಗೆ ಕೊನೆಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದು ಶಿವಮೊಗ್ಗ (Shivamogga) ಕ್ಷೇತ್ರಕ್ಕೆ ಚನ್ನಬಸಪ್ಪ ಹಾಗೂ ಮಾನ್ವಿ ಕ್ಷೇತ್ರಕ್ಕೆ ಬಿ.ವಿ.ನಾಯಕ್ ಅವರನ್ನು ಅಕಾಡಕ್ಕಿಳಿಸಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ ಚನ್ನಬಸಪ್ಪಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡುವ ಮೂಲಕ ಈಶ್ವರಪ್ಪನವರಿಗೆ ಬಿಜೆಪಿ ಹೈಕಮಾಂಡ್ ಬಿಗ್ ಶಾಕ್ ನೀಡಿದೆ.
ಅಂದಹಾಗೆ ಈಶ್ವರಪ್ಪ ನಿವೃತ್ತಿ ಘೋಷಣೆ ಮಾಡಿದ್ದು, ಪುತ್ರನಿಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಈಗ ಈಶ್ವರಪ್ಪಗೆ (Eshwarappa) ಹೈಕಮಾಂಡ್ ಶಾಕ್ ನೀಡಿದೆ. ಈಶ್ವರಪ್ಪ ಪುತ್ರ ಕಾಂತೇಶ್‌ಗೆ ಟಿಕೆಟ್ ಕೈತಪ್ಪಿದ್ದು, ಚನ್ನಬಸಪ್ಪಗೆ ಮಣೆ ಹಾಕಲಾಗಿದೆ. ಇನ್ನು ಮಾನ್ವಿಯಲ್ಲಿ ಬಿ.ವಿ.ನಾಯಕ್ ಅವರು ನಿನ್ನೆಯಷ್ಟೇ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದರು. ನಾಯಕ್‌ಗೆ ಟಿಕೆಟ್ ಗಿಟ್ಟಿಸಿಕೊಡುವಲ್ಲಿ ಸಚಿವ ಶ್ರೀರಾಮುಲು ಯಶಸ್ವಿಯಾಗಿದ್ದಾರೆ.
ಇನ್ನು ಈ ಸಲ ಬಿಜೆಪಿಯು ಹಾಲಿ, ಮಾಜಿ ಶಾಸಕರಿಗೆ ದೊಡ್ಡ ಶಾಕ್ ನೀಡುವ ಮೂಲಕ 73 ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್ ನೀಡಿದೆ. 20 ಕುಟುಂಬಗಳ ಸದಸ್ಯರಿಗೆ ಸ್ಪರ್ಧೆಗೆ ಅವಕಾಶ ಕಲ್ಪಿಸುವ ಮೂಲಕ ಕುಟುಂಬ ರಾಜಕಾರಣಕ್ಕೂ ಮಣೆ ಹಾಕಿದೆ. ಅಲ್ಲದೇ 12 ಮಹಿಳೆಯರಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ. ಬಿಜೆಪಿಯ ಈ ಹೊಸ ಪ್ಲಾನ್ ವರ್ಕೌಟ್ ಆಗುತ್ತಾ? ಹೊಸ ಮುಖಗಳನ್ನು ಜನ ಒಪ್ಪುತ್ತಾರಾ ಎಂದು ಕಾದು ನೋಡಬೇಕಿದೆ.
ಇದನ್ನು ಓದಿ : Education system: 1 ನೇ ತರಗತಿ ಪ್ರವೇಶ ವಯೋಮಿತಿ 6 ವರ್ಷ ನಿಗದಿ ಮಾಡಿದ 21 ರಾಜ್ಯಗಳು!