Pressure Cooker Hacks: ಪ್ರೆಶರ್ ಕುಕ್ಕರ್ ಲೀಕ್ ಆಗ್ತಿದ್ಯಾ , ಹೀಗೆ ಮಾಡಿ, ನಿಮಿಷಗಳಲ್ಲಿ ಅಡುಗೆ ರೆಡಿ!
Pressure Cooker Hacks: ನಮಗೆಲ್ಲರಿಗೂ ಅತೀ ಶೀಘ್ರವೇ ಅಡುಗೆ ತಯಾರಿಸಲು ಕುಕ್ಕರ್ ಸಹಕಾರಿಯಾಗಿದೆ. ಅದಲ್ಲದೆ ಕುಕ್ಕರ್ ಇಲ್ಲದೆ ಅಡುಗೆ ಮಾಡುವುದೇ ಕಷ್ಟ ಎಂಬಷ್ಟು ಪ್ರಾಮುಖ್ಯತೆ ಕುಕ್ಕರ್ ಗೆ ಇದೆ. ಆದರೆ ಪ್ರತಿ ಬಾರಿಯೂ ಕುಕ್ಕರ್ ವಿಸೆಲ್ ಕೂಗುವಾಗ ನೀರೆಲ್ಲಾ ಹೊರ ಬಂದು ಸ್ಟವ್ ಸುತ್ತಮುತ್ತ ಕೊಳಕಾಗಿ ಹೋಗುತ್ತೆ . ಕುಕ್ಕರ್ ನಿಂದ ನೀರೆಲ್ಲಾ ಹೊರಗೆ ಬಂದರೆ ಆಹಾರ ಕೂಡ ಸರಿಯಾಗಿ ಬೇಯುವುದಿಲ್ಲ. ಕುಕ್ಕರ್ ನಲ್ಲಿ ಅಡುಗೆ ಮಾಡುವ ಪ್ರತಿಯೊಬ್ಬರಿಗೂ ಇದೊಂದು ದೊಡ್ಡ ಸಮಸ್ಯೆ(Pressure Cooker Hacks) ಆಗಿದೆ. ಆದರೆ ಕುಕ್ಕರ್ ನ ಕೆಲವು ಸಮಸ್ಯೆಗೆ ಸುಲಭ ಪರಿಹಾರ ಇಲ್ಲಿದೆ.
ಹಲವು ಬಾರಿ ಕುಕ್ಕರ್’ಗಳು ಬಳಸಿದಾಗ ಹಳೆಯದಾಗುತ್ತಿದ್ದಂತೆ ಸೋರಲು ಪ್ರಾರಂಭವಾಗುತ್ತದೆ. ಅಷ್ಟೇ ಅಲ್ಲದೆ ಅದರ ವಿಝಲ್ ಕೂಡ ಸರಿಯಾಗಿ ಕೆಲಸ ಮಾಡುವುದಿಲ್ಲ.
ಅನೇಕ ಸಲ ಆಹಾರವು ಕುಕ್ಕರ್ ನಲ್ಲಿನ ಸೀಟಿಯಲ್ಲಿ ಸಿಲುಕಿಕೊಳ್ಳುತ್ತದೆ. ಸೀಟಿಯು ಕೊಳಕಾಗಿದ್ದರೆ ಸರಿಯಾಗಿ ಹಬೆ ಹೋಗಲು ಸಾಧ್ಯವಾಗಲ್ಲ. ಹಾಗಾಗಿ ಕುಕ್ಕರ್ ನ ಸೀಟಿಯನ್ನು ತೆರೆದು ಪರೀಕ್ಷಿಸಿ. ಬ್ರಷ್ ನಿಂದ ಚೆನ್ನಾಗಿ ಸ್ವಚ್ಛಗೊಳಿಸಿ ನಂತರ ಬಳಸಿ.
ಇನ್ನು ಕುಕ್ಕರ್’ನಲ್ಲಿ ಪ್ರೆಶರ್ ಸರಿಯಾಗಿ ನಿರ್ವಹಿಸದಿದ್ದರೆ, ಆಹಾರ ತಯಾರಿಸಲು ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದಕ್ಕಾಗಿ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ರಬ್ಬರ್ ಅನ್ನು ಹೊರತೆಗೆದು ಒಮ್ಮೆ ಪರಿಶೀಲಿಸಿ. ಎಲ್ಲಿಯಾದರೂ ಡ್ಯಾಮೇಜ್ ಆಗಿದೆಯೇ ಎಂದು ಚೆಕ್ ಮಾಡಿಕೊಳ್ಳಿ. ಇನ್ನು ಕುಕ್ಕರ್’ನ ರಬ್ಬರ್ ಅನ್ನು ಪ್ರತಿ 2 ರಿಂದ 4 ತಿಂಗಳಿಗೊಮ್ಮೆ ಬದಲಾಯಿಸಬೇಕು.
ಆಹಾರವನ್ನು ಬೇಯಿಸುವಾಗ ಕುಕ್ಕರ್’ನ ಮುಚ್ಚಳದಿಂದ ನೀರು ಸೋರುವುದನ್ನು ಅನೇಕ ಬಾರಿ ಕಂಡಿರುತ್ತೇವೆ. ಇದು ಕುಕ್ಕರ್‌ನ ಮುಚ್ಚಳವು ವಕ್ರವಾಗಿರುವ ಸಾಧ್ಯತೆಯಿಂದ ಹೀಗಾಗುತ್ತದೆ. ಒಮ್ಮೆ ಪರಿಶೀಲಿಸಿ. ಇನ್ನು ಈ ಸಮಸ್ಯೆ ಕಂಡುಬಂದರೆ, ಅದನ್ನು ನೀವೇ ಸರಿಪಡಿಸುವುದು ಸರಿಯಲ್ಲ. ಮಾರುಕಟ್ಟೆಯಲ್ಲಿರುವ ಮೆಕ್ಯಾನಿಕ್ ಮೂಲಕ ಅದನ್ನು ಸರಿಪಡಿಸಿ.
ಇನ್ನು ಕುಕ್ಕರ್’ನಲ್ಲಿ ಆಹಾರವನ್ನು ಬೇಯಿಸುವಾಗ ತಳದಲ್ಲಿ ಅಂಟಿಕೊಳ್ಳಲು ಪ್ರಾರಂಭಿಸಿದರೆ, ಕುಕ್ಕರ್‌ನಲ್ಲಿ ಪ್ರೆಶರ್ ಹೆಚ್ಚಾಗಿದೆ ಎಂದು ಅರ್ಥ. ಹೆಚ್ಚುವರಿ ಪ್ರೆಶರ್ ಹಾಕುವುದು ಅಪಾಯಕಾರಿ. ಏಕೆಂದರೆ ಇದು ಕುಕ್ಕರ್ ಸ್ಫೋಟಕ್ಕೆ ಕಾರಣವಾಗಬಹುದು. ಇದನ್ನು ಮಾರುಕಟ್ಟೆಯಲ್ಲಿ ಒಮ್ಮೆ ಚೆಕ್ ಮಾಡಿಸಿ ಪರಿಹಾರ ಕಂಡುಕೊಳ್ಳಿ.
ಮುಖ್ಯವಾಗಿ ಕುಕ್ಕರ್ ಗೆ ಹೆಚ್ಚು ನೀರು ಹಾಕುವುದು ಅಥವಾ ಕುಕ್ಕರ್ ಅನ್ನು ಹೆಚ್ಚಿನ ಉರಿಯಲ್ಲಿ ಇಡುವುದರಿಂದ ಕೂಡ ನೀರು ಲೀಕ್ ಆಗುತ್ತದೆ. ಆದ್ದರಿಂದ ಕುಕ್ಕರ್ ನಲ್ಲಿ ಆಹಾರವನ್ನು ಬೇಯಿಸುವಾಗ ನೀರಿನ ಪ್ರಮಾಣ ಸರಿಯಾಗಿರಬೇಕು. ಮಧ್ಯಮ ಜ್ವಾಲೆಯಲ್ಲಿ ಬೇಯಿಸಿದರೆ ಕುಕ್ಕರ್ ನಲ್ಲಿರುವ ನೀರು ಹೊರಬರುವುದಿಲ್ಲ.
ಇದನ್ನೂ ಓದಿ : ವರ್ಷಕ್ಕೆ 6000 ರೂಪಾಯಿ ದುಡ್ಡು ಬೇಕಾ? ಮನೆಯಿಂದಲೇ ಕೂತು ಅಪ್ಲೈ ಮಾಡಿ