Portable Fridge: ಜುಜುಬಿ 2500 ರೂಪಾಯಿಗೆ ಫ್ರಿಡ್ಜ್ ಮಾರಾಟ, ಕೊಳ್ಳಲು ಜನರ ನೂಕುನುಗ್ಗಲು!

Portable Fridge: ಬೆಲೆ ಏರಿಕೆಯ ಈ ಕಾಲದಲ್ಲಿ 2500 ಸಾವಿರಕ್ಕೆ ಏನು ಸಿಗತ್ತೆ? ಅಂತದ್ರಲ್ಲಿ 2499 ರೂಪಾಯಿಗೆ ಫ್ರಿಡ್ಜ್ ಸಿಗ್ತಿದೆ ಅಂತ ಯಾರಾದ್ರೂ ಹೇಳಿದರೆ ಜನರು ಇದ್ದ ಕೆಲಸ ಬಿಟ್ಟು ಫ್ರಿಡ್ಜ್ ಕೊಳ್ಳಲು ಓಡೋಡಿ ಹೋಗೋದಿಲ್ವ . ಹೌದು , ಅಂತಹ ಬಿಗ್ ನ್ಯೂಸ್ ನಿಮಗಿದೆ ಇಲ್ಲಿ… ಬೇಸಿಗೆಯಲ್ಲಿ ಫ್ರಿಡ್ಜ್ ಬೇಡಿಕೆ ಅಪಾರವಾಗಿದೆ. ಜೊತೆಗೆ ಬೆಲೆ ಕೂಡ ಗಗನಕ್ಕೆ ಏರುವುದು ಸಹಜ. ಸುಡುವ ಬಿಸಿಲಿಗೆ ಏನಾದರೂ ತಂಪು ಪಾನೀಯ ಕುಡಿಯಬೇಕೆಂಬ ಹಂಬಲ ಎಲ್ಲರಲ್ಲೂ ಇದ್ದೇ ಇರುತ್ತದೆ.

ಆದರೆ ಕೆಲವು ಸಮಯ ಸಂಚಾರ ಮಾಡುವಾಗ ತಂಪಾದ (cold ) ಪಾನೀಯ (drink) ದೊರೆಯುವುದು ಅಸಾಧ್ಯ. ಅದಕ್ಕಾಗಿ ಇಲ್ಲೊಂದು ಮಿನಿ ಫ್ರಿಡ್ಜ್ ಅತ್ಯಂತ ಅಗ್ಗದ ಬೆಲೆಯಲ್ಲಿ ಲಭ್ಯವಾಗುತ್ತಿದ್ದು, ಇದನ್ನು ನೀವು ಹೋದ ಕಡೆಯಲೆಲ್ಲಾ ಬಳಕೆ ಮಾಡಬಹುದು. ಯಾಕೆಂದರೆ ಇದು ಪೋರ್ಟಬಲ್ ಡಿವೈಸ್ (Portable Fridge) ಆಗಿದೆ.

ಮುಖ್ಯವಾಗಿ ಮಹಾನಗರಗಳಲ್ಲಿ ಚಿಕ್ಕ ಚಿಕ್ಕ ರೂಂ ಮಾಡಿಕೊಂಡು ಜೀವನ ಮಾಡುವವರು. ಹಾಗೆಯೇ ಪಿಜಿಯಲ್ಲಿ ವಾಸ ಮಾಡುವವರು, ಹೆಚ್ಚು ಹೊರಗಡೆ ಕಾರಿನಲ್ಲಿ ಅಥವಾ ಇನ್ನಿತರೆ ವಾಹನಗಳಲ್ಲಿ ಸಂಚಾರ ಮಾಡುವವರು, ಕಡಿಮೆ ಬಜೆಟ್‌ನಲ್ಲಿ ಜೀವನ ಮಾಡುವವರು, ವಿದ್ಯಾರ್ಥಿಗಳು ಸೇರಿದಂತೆ ಒಬ್ಬರು ಅಥವಾ ಇಬ್ಬರು ಇರುವ ಕೋಣೆಗಳಲ್ಲಿ ಜೀವನ ಮಾಡುವವರಿಗೆ ನಾವು ಈ ಚಿಕ್ಕ ಹಾಗೂ ಅಗ್ಗದ ಬೆಲೆಯಲ್ಲಿ ಲಭ್ಯ ಇರುವ ಫ್ರಿಡ್ಜ್ ನ್ನು ಪರಿಚಯಿಸಲಾಗಿದೆ.

ಸರ್ಜ್ ಮಿನಿ ಕಾರ್ ರೆಫ್ರಿಜರೇಟರ್ : ಸಾಮಾನ್ಯವಾಗಿ ಈ ರೆಫ್ರಿಜರೇಟರ್ ಅನ್ನು ಕಾರ್‌ನಲ್ಲಿ ಬಳಕೆ ಮಾಡಲು ನಿರ್ಮಾಣ ಮಾಡಲಾಗಿದೆಯಾದರೂ ನೀವು ಮನೆಯಲ್ಲಿ ಅಥವಾ ನಿಮ್ಮ ಕೋಣೆಯಲ್ಲಿ ಬಳಕೆ ಮಾಡಬಹುದು. ಇದು ಪೋರ್ಟಬಲ್ ರೆಫ್ರಿಜರೇಟರ್ ಆಗಿದ್ದು, ನೀವೇನಾದರೂ ಆಗಾಗ್ಗೆ ಪ್ರಯಾಣ ಮಾಡುವವರಾಗಿದ್ದರೆ,
ನಿಮ್ಮ ಕಾರಿನಲ್ಲಿ ಹೆಚ್ಚು ಸಮಯ ಕಳೆಯುವವರಾಗಿದ್ದರೆ ಅಥವಾ ಬಿಸಿಲಿನಲ್ಲಿ ಸಾಕಷ್ಟು ಸಮಯವನ್ನು ಕಳೆಯುವವರಾಗಿದ್ದರೆ ಇದು ತುಂಬಾ ಸಹಾಯ ಆಗಲಿದೆ.

ಇದು ಚಿಕ್ಕ ಹಾಗೂ ವಿಶೇಷ ಶೈಲಿಯಲ್ಲಿ ಲಭ್ಯ ಆಗುತ್ತಿರುವ ರೆಫ್ರಿಜರೇಟರ್
ನಿಮ್ಮ ಕಾರಿಗೆ ಕಾಂಪ್ಯಾಕ್ಟ್ ರೆಫ್ರಿಜರೇಟರ್ ಆಗಿ ಕೆಲಸ ಮಾಡಲಿದ್ದು, 7.5L ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಡಿವೈಸ್ ನಿಮ್ಮ ಆಹಾರ ಮತ್ತು ಪಾನೀಯಗಳನ್ನು -3 ° C ನಿಂದ 60 C ವರೆಗೆ ತಂಪಾಗಿರಿಸಲು ಸಹಾಯ ಮಾಡಲಿದೆ.

ಹಾಗೆಯೇ ಇದು ಎಸಿ ಮತ್ತು ಡಿಸಿ ಪವರ್ ಕಾರ್ಡ್‌ಗಳನ್ನು ಹೊಂದಿರುವುದರಿಂದ ನಿಮ್ಮ ಮನೆಯ ಅಥವಾ ನಿಮ್ಮ ಕಾರಿನ ಬ್ಯಾಟರಿಯಿಂದ ಹೆಚ್ಚಿನ ಶಕ್ತಿಯನ್ನು ಹೀರಿಕೊಳ್ಳುವುದಿಲ್ಲ. ಬದಲಾಗಿ ಕಡಿಮೆ ಬ್ಯಾಟರಿ ಸಾಮರ್ಥ್ಯದಿಂದಲೇ ಕೆಲಸ ಮಾಡುತ್ತದೆ.

ಅದಲ್ಲದೆ ಇದು ಎಬಿಎಸ್ ಮೆಟಿರಿಯಲ್‌ನಿಂದ ನಿರ್ಮಾಣ ಆಗಿದ್ದು, 1 ಕೆಜಿ 900 ಗ್ರಾಮ ತೂಕ ಹೊಂದಿದೆ. ಹತ್ತಿರತ್ತಿರ ಎರಡು ಕೆಜಿ ಎಂದಾಯ್ತು. ಅದರಂತೆ 15 x 12 x 10 ಸೆಂಟಿಮೀಟರ್ ಸುತ್ತಳತೆ ಹೊಂದಿದ್ದು, ಈ ವಿಶೇಷ ರಚನೆ ಕಾರಣಕ್ಕಾಗಿಯೇ ಇದನ್ನು ನೀವು ಎಲ್ಲಿ ಬೇಕಾದರೂ ಸುಲಭವಾಗಿ ತೆಗೆದುಕೊಂಡು ಹೋಗಬಹುದು.

ಗ್ರಾಹಕರಿಗಾಗಿ ಬೇಸಿಗೆ ಹಿನ್ನೆಲೆ ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಈ ರೀತಿಯ ಡಿವೈಸ್‌ಗಳಿಗೆ ಹೆಚ್ಚಿನ ಆಫರ್ ನೀಡುತ್ತಾ ಬರುತ್ತಿದ್ದು, ಅದರಂತೆ ಅಮೆಜಾನ್ ಸಹ ಈ ಡಿವೈಸ್‌ಗೆ ಭರ್ಜರಿ ಆಫರ್ ನೀಡಿದೆ. ನೀವು 2,499ರೂ. ಗಳಿಗೆ ಇದನ್ನು ಖರೀದಿ ಮಾಡಲು ಸಾಧ್ಯ. ಆದರೆ ಇದರ ಸಾಮಾನ್ಯ ದರ 5,999ರೂ.ಗಳು. ಅಮೆಜಾನ್ 58% ಡಿಸೈಂಟ್ ಘೋಷಣೆ ಮಾಡಿದ ಹಿನ್ನೆಲೆ ಈ ಬೆಲೆಯಲ್ಲಿ ಕಾಣಿಸಿಕೊಂಡು ನಿಮ್ಮ ಪಾಕೆಟ್‌ನಲ್ಲಿ 3,500ರೂ. ಉಳಿತಾಯ ಆಗಲಿದೆ.

ಒಟ್ಟಿನಲ್ಲಿ ಮನೆಯಲ್ಲಿ ನೀವು ಇದನ್ನು ಎಲ್ಲಿ ಬೇಕೆಂದರೂ ಬಳಕೆ ಮಾಡಬಹುದು. ಅದರಂತೆ ಕಾರಿನ ವಿಚಾರಕ್ಕೆ ಬಂದರೆ ನಿಮ್ಮ ಕಾರಿನ ಟ್ರಂಕ್ ಅಥವಾ ಹಿಂದಿನ ಸೀಟಿನಲ್ಲಿ ಈ ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ್ ಅನ್ನು ಅತೀ ಸುಲಭವಾಗಿ ಜೋಡಿಸಬಹುದಾಗಿದೆ.

ಇದನ್ನೂ ಓದಿ : Petrol- diesel price: ಶೀಘ್ರದಲ್ಲೇ ಪೆಟ್ರೋಲ್ ಬೆಲೆಯಲ್ಲಿ 20 % ಕಡಿತ!!

Leave A Reply

Your email address will not be published.