Jagadhish Shettar Ticket: ಬಿ.ಎಲ್ ಸಂತೋಷ್ ಷಡ್ಯಂತ್ರದಿಂದ ಟಿಕೆಟ್ ಕೈತಪ್ಪಿದ್ದು- ಶೆಟ್ಟರ್ ನೇರ ಆರೋಪ ; ಹು – ಧಾ ಕ್ಷೇತ್ರದಲ್ಲಿ ಶೆಟ್ಟರ್ ಒಡೀತಾರಾ ‘ ಟೆಂಗಿನಕಾಯಿ ‘ ?!

Jagadish Shettar Ticket: ಹುಬ್ಬಳ್ಳಿ: ಬಿಜೆಪಿಯಲ್ಲಿ (BJP) ಬಿ.ಎಲ್ ಸಂತೋಷ್ (BL Santosh) ಷಡ್ಯಂತ್ರದಿಂದ ನನಗೆ ಟಿಕೆಟ್ ಕೈತಪ್ಪಿದೆ ಎಂದು ಮಾಜಿ ಸಿಎಂ, ಹಾಲಿ ಕಾಂಗ್ರೆಸ್ ಮುಖಂಡ ಜಗದೀಶ್ ಶೆಟ್ಟರ್ (Jagadish Shettar Ticket) ಅವರು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್(Jagadish Shettar) ಅವರು, ನನ್ನ ಪರಿಸ್ಥಿತಿಗೆ ಮೂಲ ಕಾರಣ ಬಿ.ಎಲ್ ಸಂತೋಷ. ಒಬ್ಬ ಹಿರಿಯ ನಾಯಕರನ್ನು ಸೈಡ್‍ಲೈನ್ ಮಾಡಿ ಮಹೇಶ್ ತೆಂಗಿನಕಾಯಿಗೆ ಟಿಕೆಟ್ ನೀಡಲು ಪ್ಲಾನ್ ನಡೆದಿದೆ. ಇದರ ಹಿಂದೆ ಬಿಎಲ್ ಸಂತೋಷ್ ಇದ್ದಾರೆ. ಬಿ.ಎಲ್ ಸಂತೋಷ್ ಅವರ ಮಾನಸ ಪುತ್ರ ಮಹೇಶ್ ತೆಂಗಿನಕಾಯಿ ಆಗಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

” ಕೇಶವ ಪ್ರಸಾದ್’ ರು ಈಗ ಪರಿಷತ್ ಆಗಿದ್ದಾರೆ. ಆದರೆ ಅವರನ್ನು ಯಡಿಯೂರಪ್ಪ ಹಿಂದೆ ತೆಗೆದುಹಾಕಿದ್ದರು. ಆದರೆ ಬಿಎಲ್ ಸಂತೋಷ್ ಅವರು ವಾಪಸು ಅವರನ್ನು ಕರೆದುಕೊಂಡು ಬಂದು MLC ಮಾಡಿದರು. ಅಲ್ಲಿ ಮೈಸೂರಿನಲ್ಲಿ ರಾಮದಾಸ್ ವಿರುದ್ಧ ಶ್ರೀವತ್ಸಗೆ ಟಿಕೆಟ್ ಕೊಟ್ಟರು. ಅವರು ಸಹ ಬಿ.ಎಲ್ ಸಂತೋಷ್ ಆಯ್ಕೆ. ಅವರು ಗೆಲ್ಲುತ್ತಾರಾ ಇಲ್ವೋ ಗೊತ್ತಿಲ್ಲ. ಆದರೆ ಅಲ್ಲಿ ರಾಮದಾಸ್‍ಗೆ ಜಯವಾಗುತ್ತಿತ್ತು. ಆದರೆ ಅವರಿಗೆ ಟಿಕೆಟ್ ನೀಡಿಲ್ಲ. ಯಾಕೆಂದರೆ ರಾಮದಾಸ್ ಬಿ.ಎಲ್ ಸಂತೋಷ ಶಿಷ್ಯ ಅಲ್ಲ. ಬಾದಾಮಿಯಲ್ಲಿ ಸಹ ಇದೆ ರೀತಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಗದೀಶ್ ಶೆಟ್ಟರ್ ಅವರು ವಾಗ್ದಾಳಿ ನಡೆಸಿದರು.

” ಬಿ.ಎಲ್ ಸಂತೋಷ್ ಅವರ ಹುನ್ನಾರದಿಂದ ಬಿಜೆಪಿ ಪಕ್ಷದಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಸುದ್ದಿ ಹಬ್ಬಿಸಿದರು. ವ್ಯಕ್ತಿಯೊಬ್ಬನಿಗೆ ಟಿಕೆಟ್ ನೀಡುವ ಸಲುವಾಗಿ ಇಂದು ಪಕ್ಷ ಒಡೆಯುತ್ತಿದೆ. ಟಿಕೆಟ್ ಕೊಡಿಸುವ ಸಲುವಾಗಿ ತಂತ್ರ, ಕುತಂತ್ರ ನಡೆದಿದೆ. ಇದೆಲ್ಲದಕ್ಕೂ ಬಿ.ಎಲ್ ಸಂತೋಷ್ ಅವರ ಪ್ರೀ ಪ್ಲಾನ್ ಕಾರಣ. ಅವರು ಒಬ್ಬರಿಗಾಗಿ ಇಡೀ ರಾಜ್ಯದ ಬಿಜೆಪಿಗೆ ಬೆಂಕಿ ಹಚ್ಚುತ್ತಿದ್ದಾರೆ. ಬಿಜೆಪಿಯಲ್ಲಿ ಪಕ್ಷ ಮುಖ್ಯ, ವ್ಯಕ್ತಿ ಮುಖ್ಯ ಅಲ್ಲ ಎನ್ನುವ ಮಾತಿದೆ. ಆದರೆ ಬಿಎಲ್ ಸಂತೋಶ್ ಪಕ್ಷ ಮುಖ್ಯ ಅಲ್ಲ ವ್ಯಕ್ತಿ ಮುಖ್ಯ” ಎಂದು ಶೆಟ್ಟರ್ ಕಿಡಿ ಕಾರಿದ್ದಾರೆ.

ನಾನು ಬಿಜೆಪಿ ಪಕ್ಷವು ನನಗೆ ಯಾವ ಯಾವ ಜವಾಬ್ದಾರಿ ಕೊಟ್ಟಿದೆಯೋ ಅದನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ನನ್ನ ಮಹತ್ವವನ್ನು ಅರಿತುಕೊಳ್ಳದೇ ನನಗೆ ಟಿಕೆಟ್ ನೀಡಿಲ್ಲ. ಆದರೆ ಈಗ ಕೆಲವರು ನನ್ನ ವಿರುದ್ಧ ಸುದ್ದಿಗೊಷ್ಠಿ ಮಾಡುತ್ತಿದ್ದಾರೆ. ಆದರೆ ಅವರು ತಮ್ಮ ಕ್ಷೇತ್ರ ಬಿಟ್ಟು ಬಂದು ಚುನಾವಣೆ ಮಾಡಲಿ ನೋಡೋಣ ಎಂದು ಶೆಟ್ಟರ್ ಅವರು ಸವಾಲು ಹಾಕಿದರು.

ನಾನು ವಿಪಕ್ಷ ನಾಯಕನಾಗಿದ್ದ ಜನಪರ ಧ್ವನಿ ಎತ್ತಿದ್ದೇನೆ. ಆದರೆ ಈಗ ಜಗದೀಶ್ ಶೆಟ್ಟರ್ ಅವರು ಅವಕಾಶವಾದಿ ಎಂದು ಟೀಕೆ ಮಾಡುತ್ತಿದ್ದಾರೆ. ನನಗೆ ಅಧಿಕಾರ ಲಾಲಸೆ ಅಂತ ಹೇಳ್ತಿದ್ದಾರೆ. ನಾನಾಗೆ ಅಂದು ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್‍ನಲ್ಲಿ ಮಂತ್ರಿ ಸ್ಥಾನ ಬೇಡ ಅಂದೆ. ಅಧಿಕಾರ ಲಾಲಸೆ ಇದ್ದಿದ್ರೆ ನಾನೂ ಮಂತ್ರಿ ಆಗಿರ್ತಿದ್ದೆ. 42 ರ ದಿನ ಕಲ್ಯಾಣ ಕರ್ನಾಟಕದಲ್ಲಿ ವಿಜಯ ಸಂಕಲ್ಪಯಾತ್ರೆ ಮಾಡಿದ್ದೇನೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಬಹಳಷ್ಟು ದೊಡ್ಡದಾಗಿ ಬೆಳದಿದೆ. ಬಿಜೆಪಿಗೆ ಆಗ ಚುನಾವಣೆಗೆ ನಿಲ್ಲಲು ಅಭ್ಯರ್ಥಿ ಸಿಗುತ್ತಿರಲಿಲ್ಲ. ಆ ಸಮಯದಲ್ಲಿ ಬಿಜೆಪಿ ಜತೆ ನಿಂತು ನಾನು ಬಿಜೆಪಿ ಕಟ್ಟಿದ್ದೇನೆ. ಹೀಗಾಗಿ ಇಂದು ಬಿಜೆಪಿಗೆ ಭದ್ರವಾದ ನೆಲೆ ಸಿಕ್ಕಿದೆ ಎಂದರು.

ಕಳೆದ ಹಲವಾರು ಸಮಯದಿಂದ ನಾನು ವೇದನೆ ಅನುಭವಿಸುತ್ತಿದ್ದೇನೆ. ನಾನು ಬಿಜೆಪಿಯಲ್ಲಿ ಅನುಭವಿಸಿದ ನೋವನ್ನು ಈಗ ಹೊರಹಾಕಿದ್ದೇನೆ. ಸಿಂಧನೂರು ಹಾಗೂ ದೇವದುರ್ಗ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಇಂದು ಭಾಗವಹಿಸುತ್ತಿದ್ದೇನೆ ಎಂದು ಶೆಟ್ಟರ್ ಹೇಳಿದ್ದಾರೆ.

ಇದನ್ನೂ ಓದಿ :ರತನ್ ಟಾಟಾ ಅವರ ಕನಸಿನ ಕೇವಲ 1 ಲಕ್ಷದ ಕಾರು ಯಾಕೆ ಕಣ್ಮರೆ ಆಯ್ತು ಗೊತ್ತಾ ?

Leave A Reply

Your email address will not be published.