Petrol- diesel price: ಶೀಘ್ರದಲ್ಲೇ ಪೆಟ್ರೋಲ್ ಬೆಲೆಯಲ್ಲಿ 20 % ಕಡಿತ – ಕಾರಣ ಬಿಚ್ಚಿಟ್ಟ ಕೇಂದ್ರ ಪೆಟ್ರೋಲಿಯಂ ಸಚಿವ !
Petrol- diesel price : ಈ ಹಿಂದೆ ಪೆಟ್ರೋಲ್- ಡಿಸೇಲ್ (Petrol- diesel) ದರದಲ್ಲಿ ಏರಿಕೆಯಾಗಿತ್ತು. ಈ ಹಿನ್ನೆಲೆ ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದರು. ಆದರೆ, ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ Petrol- diesel price) ಇಳಿಕೆಯಾಗಿದ್ದು, ಇದರ ಪರಿಣಾಮ ಇದೀಗ ದೇಶಿಯ ಮಾರುಕಟ್ಟೆಯಲ್ಲೂ ಇಳಿಕೆಯಾಗಿದೆ. ಹೌದು, ಇಂದು ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ದರ (Petrol price today) ಕಡಿಮೆ ಇದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 84 ಡಾಲರ್‌ಗೆ ತಲುಪಿದೆ.
ಅಷ್ಟೇ ಅಲ್ಲದೆ, ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಈ ಬಗ್ಗೆ ಬಹುಮುಖ್ಯ ಮಾಹಿತಿ ತಿಳಿಸಿದ್ದು, ಶೀಘ್ರದಲ್ಲೇ ಪೆಟ್ರೋಲ್ ಬೆಲೆಯಲ್ಲಿ 20 % ಕಡಿತವಾಗಲಿದೆ ಎಂದು ಹೇಳಿದ್ದಾರೆ.
ಶೇಕಡಾ 20 ರಷ್ಟು ಎಥೆನಾಲ್ನೊಂದಿಗೆ ಮಿಶ್ರಣಗೊಂಡ ಪೆಟ್ರೋಲ್ ಅನ್ನು ಒದಗಿಸುವ ಗುರಿಯನ್ನು ಸರ್ಕಾರ 2025ಕ್ಕೆ ತಲುಪಲಿದೆ ಎಂದು ಹೇಳಿದ್ದಾರೆ. ಮುಂದಿನ ಆರ್ಥಿಕ ವರ್ಷದ ವೇಳೆಗೆ ಸರ್ಕಾರವು ಶೇ.20 ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಫೆಬ್ರವರಿಯಲ್ಲಿ, ಹಸಿರು ಇಂಧನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 11 ರಾಜ್ಯಗಳ ಆಯ್ದ ಪಂಪ್‌ಗಳಲ್ಲಿ ಶೇಕಡಾ 20 ರಷ್ಟು ಎಥೆನಾಲ್‌ನೊಂದಿಗೆ ಬೆರೆಸಿದ ಪೆಟ್ರೋಲ್ ಅನ್ನು ಪರಿಚಯಿಸಲಾಯಿತು. ಇದೀಗ ಪೆಟ್ರೋಲ್ ನಲ್ಲಿ ಶೇ.10ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗಿದೆ. ಈ ಮಧ್ಯೆ, ಭಾರತ ಜೂನ್ 2022 ರ ವೇಳೆಗೆ ನಿಗದಿತ ಸಮಯಕ್ಕಿಂತ ಐದು ತಿಂಗಳ ಮುಂಚಿತವಾಗಿ ಪೆಟ್ರೋಲ್‌ನಲ್ಲಿ ಶೇಕಡಾ 10 ರಷ್ಟು ಎಥೆನಾಲ್ ಅನ್ನು ಮಿಶ್ರ ಮಾಡುವ ಗುರಿಯನ್ನು ಸಾಧಿಸಿದೆ ಎಂದು ಹೇಳಿದ್ದಾರೆ. ಅಲ್ಲದೆ, ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಸುವುದರಿಂದ ಇಂಗಾಲದ ಮಾನಾಕ್ಸೈಡ್ ಹೊರಸೂಸುವಿಕೆಯ ಪ್ರಮಾಣ ಕೂಡಾ ಕಡಿಮೆಯಾಗಲಿದೆ.
ಇಂದಿನ ಡೀಸೆಲ್ ದರ ಎಷ್ಟು ? (18/04/2023 diesel price)
ದಕ್ಷಿಣ ಕನ್ನಡ- 87.20ರೂ.
ಬೆಂಗಳೂರು- 87.89 ರೂ
ಮೈಸೂರು- 87.49 ರೂ.
ಶಿವಮೊಗ್ಗ- 89. 35 ರೂ .
ಧಾರವಾಡ- 87.71ರೂ.
ಬೆಳಗಾವಿ- 88.41 ರೂ.
ಇಂದಿನ ಪೆಟ್ರೋಲ್ ದರ ಎಷ್ಟು ? (18/04/2023 petrol price)
ದಕ್ಷಿಣ ಕನ್ನಡ- 101.21ರೂ.
ಬೆಂಗಳೂರು- 101.94ರೂ.
ಮೈಸೂರು- 101.50 ರೂ.
ಶಿವಮೊಗ್ಗ- 103.61ರೂ.
ಧಾರವಾಡ- 101.71ರೂ.
ಬೆಳಗಾವಿ- 102.48ರೂ.
ಇದನ್ನೂ ಓದಿ : ಟ್ಯಾಕ್ಸಿಗೆ ಹಣ ನೀಡದೆ, ‘ ಈಗ ಬರ್ತೇನೆ ‘ ಎಂದು ಮುಂಡಾಯಿಸಿದ್ದ ಸಲ್ಮಾನ್ ಖಾನ್