D.K. Shivakumar: 141400000000 ಸಾಮ್ರಾಜ್ಯದ ಸಾಹುಕಾರ್ ಈ ಡಿಕೆ ಶಿವಕುಮಾರ್ – ನಾಮಪತ್ರ ವೇಳೆ ಸಂಪತ್ತು ಬಹಿರಂಗ !

D.K. Shivakumar: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನಿನ್ನೆ ಕನಕಪುರದಲ್ಲಿ ಮಿಂಚಿನ ಸಂಚಾರ ನಡೆಸಿ ಶಕ್ತಿ ಪ್ರದರ್ಶನದ ಜತೆಗೆ ಜೊತೆಗೆ ಉಮೇದುವಾರಿಕೆ ಸಲ್ಲಿಸಿದ್ದಾರೆ. ಈ ನಾಮಿನೇಷನ್ ಜೊತೆಗೆ ಡಿ.ಕೆ.ಶಿವಕುಮಾರ್ ತಮ್ಮ ಆಸ್ತಿ ವಿವರಗಳನ್ನೂ ಘೋಷಣೆ ಮಾಡಿದ್ದಾರೆ.

ಡಿಕೆಶಿ (D.K. Shivakumar ) ಅವರ ಆಸ್ತಿ ಮೌಲ್ಯ ಕಳೆದ ವಿಧಾನಸಭಾ ಚುನಾವಣೆಯಿಂದ ಇಲ್ಲಿಯ ತನಕ ಬಲೂನಿನ ತರ ಉಬ್ಬಿಕೊಂಡು ನಿಂತಿದೆ. ಈಗ ಅವರ ಒಟ್ಟು ಆಸ್ತಿ ಮೌಲ್ಯ ಈಗ 1,414 ಕೋಟಿ ರೂಪಾಯಿಗಳು. ಕಳೆದ 2018 ರ ಚುನಾವಣೆಯ ವೇಳೆ 840 ಕೋಟಿ ರೂ. ಬಾಳುತ್ತಿದ್ದ ಅವರು ಈಗ ಸಾವಿರ ಕೋಟಿಯನ್ನೂ ಹಿಂದಕ್ಕೆ ಹಾಕಿ ಮೀರಿ ಮುಂದೆ ಹೋಗಿದ್ದಾರೆ. ಏಕ ಸಹಸ್ರ ಕೋಟಿಯ ಗಡಿಯನ್ನು ದಾಟಿ ಮುನ್ನುಗ್ಗಿದ ಸಾಹುಕಾರ್ ಈ ಶಿವಕುಮಾರ್. ಹಾಗಿದ್ದರೆ ಶಿವಕುಮಾರ್‌ ಆಸ್ತಿಯ ಒಟ್ಟಾರೆ ಲೆಕ್ಕಾಚಾರ ಹೇಗಿದೆ? ಇಲ್ಲಿದೆ ಫುಟ್‌ ಡಿಟೇಲ್ಸ್‌ !

ಡಿ.ಕೆ.ಶಿವಕುಮಾರ್ ಆಸ್ತಿ ವಿವರ:
ಒಟ್ಟು ಆಸ್ತಿ ಮೌಲ್ಯ: 1214 ಕೋಟಿ ರೂಪಾಯಿಗಳು
ಪತ್ನಿ ಆಸ್ತಿ ಮೌಲ್ಯ: 153.30 ಕೋಟಿ ರೂಪಾಯಿಗಳು
ಅವಿಭಜಿತ ಕುಟುಂಬದ ಆಸ್ತಿ: 61 ಕೋಟಿ ರೂಪಾಯಿಗಳು
ಕುಟುಂಬದ ಒಟ್ಟು ಆಸ್ತಿ ಮೌಲ್ಯ 1415 ಕೋಟಿ ರೂಪಾಯಿಗಳು

ಚರಾಸ್ತಿ ಮೌಲ್ಯ:
ಒಟ್ಟು ಮೌಲ್ಯ- 244 ಕೋಟಿ ರೂಪಾಯಿಗಳು
ಪತ್ನಿ ಉಷಾ ಹೆಸರಲ್ಲಿ- 20.30 ಕೋಟಿ ರೂಪಾಯಿಗಳು
ಅವಿಭಜಿತ ಕುಟುಂಬದ ಆಸ್ತಿ- 6.74 ಕೋಟಿ ರೂಪಾಯಿಗಳು
ಮಗ ಆಕಾಶ್ ಹೆಸರಲ್ಲಿ 1.29 ಲಕ್ಷ ರೂಪಾಯಿಗಳು
ಮಗಳ ಹೆಸರಲ್ಲಿ 12 ಲಕ್ಷ ರೂಪಾಯಿಗಳು

ಸ್ಥಿರಾಸ್ತಿ ಮೌಲ್ಯ:
ಒಟ್ಟು ಮೌಲ್ಯ: 970 ಕೋಟಿ ರೂಪಾಯಿಗಳು
ಪತ್ನಿ ಉಷಾ:113 ಕೋಟಿ ಆಸ್ತಿಯ ಒಡತಿ
ಅವಿಭಜಿತ ಕುಟುಂಬದ ಆಸ್ತಿ: 54.33 ಕೋಟಿ ರೂ.ಗಳು

ಆದಾಯ ಮೂಲ:
ಕೃಷಿ, ಬಾಡಿಗೆ ಮತ್ತು ವಿವಿಧ ಕಂಪನಿಗಳಲ್ಲಿ ಷೇರು, ಉದ್ದಿಮೆ

ಸಹಸ್ರ ಕೋಟಿಗೂ ಅಧಿಕ ಸಂಪತ್ತಿಗೆ ಅಧಿಪತಿಯಾದ ಡಿಕೆ ಶಿವಕುಮಾರ್ ಅವರ ಬಳಿ ಇರುವುದೊಂದೇ ಕಾರು ಎಂದರೆ ಆಶ್ಚರ್ಯ ಪಡ್ತೀರ. ಅಚ್ಚರಿ ಎಂದರೆ, ಇಷ್ಟೆಲ್ಲ ಶ್ರೀಮಂತರಾಗಿದ್ದರೂ ಡಿಕೆ ಶಿವಕುಮಾರ್ ಅವರ ಹೆಸರಲ್ಲಿ ಇರುವುದು ಒಂದೇ ಕಾರು. ಅದೂ ಕೂಡಾ 8 ಲಕ್ಷ 30 ಮೌಲ್ಯದ ಟಯೊಟ ಕಾರು !

ಡಿ.ಕೆ.ಶಿವಕುಮಾರ್ ಅವರ ಬಳಿ 2.184 ಕೆ.ಜಿ ಚಿನ್ನ, 12.600 ಕೆಜಿ ಬೆಳ್ಳಿ, 1.066 ಕೆ.ಜಿ ಚಿನ್ನಾಭರಣ, 324 ಗ್ರಾಂ ಡೈಮಂಡ್, 24 ಗ್ರಾಂ ರೂಬಿಗಳು, 195 ಗ್ರಾಂ ವಜ್ರ, 87 ಗ್ರಾಂ ರೂಬಿ, ರೊಲೆಕ್ಸ್ ವಾಚ್, ಹ್ಯೂಬ್ಲಾಟ್ ವಾಚ್‌ಗಳಿವೆ. ಪತ್ನಿ ಹೆಸರಿನಲ್ಲಿ 2.600 ಕೆ.ಜಿ ಚಿನ್ನ, 20 ಕೆ.ಜಿ ಬೆಳ್ಳಿ, ಕುಟುಂಬದ ಆಸ್ತಿ 1 ಕೆ.ಜಿ ಚಿನ್ನ, 10 ಕೆ.ಜಿ ಬೆಳ್ಳಿ, ಮಗನ ಹೆಸರಿನಲ್ಲಿ 675 ಗ್ರಾಂ ಚಿನ್ನ, ಮಗಳ ಹೆಸರಿನಲ್ಲಿ 675 ಗ್ರಾಂ ಚಿನ್ನ ಹಾಗೂ ಅವಿಭಜಿತ ಕುಟುಂಬದ ಹೆಸರಿನಲ್ಲಿ 1.ಕೆಜಿ ಚಿನ್ನ, 10 ಕೆಜಿ ಬೆಳ್ಳಿಗಳಿವೆ ಎನ್ನಲಾಗಿದೆ.

ಡಿಕೆ ಶಿವಕುಮಾರ್ ಮೇಲಿರುವ ಪ್ರಕರಣಗಳು:
1) ಆದಾಯ ಮತ್ತು ತೆರಿಗೆ ಇಲಾಖೆಯಲ್ಲಿ 4 ಪ್ರಕರಣಗಳು
ಜಾರಿ ನಿರ್ದೇಶನಾಲಯದಲ್ಲಿ ಎರಡು ಕೇಸ್​ಗಳಿವೆ
2) ಕರ್ನಾಟಕ ಲೋಕಾಯುಕ್ತದಲ್ಲೂ ಶಿವಕುಮಾರ್ ವಿರುದ್ಧ ಒಂದು ಇದೆ
3)ಕೋವಿಡ್ ನಿಯಮಾವಳಿ ಉಲ್ಲಂಘಟನೆ ಸಂಬಂಧ 6 ಪ್ರಕರಣ ಸೇರಿ ಒಟ್ಟು 19 ಕೇಸ್​ಗಳು ಇವೆ.

ಡಿ.ಕೆ.ಶಿವಕುಮಾರ್ ಒಟ್ಟು ಸಾಲ: 226 ಕೋಟಿ ರೂಪಾಯಿ ಸಾಲವನ್ನು ಶಿವಕುಮಾರ್ ಮಾಡಿದ್ದಾರೆ. ಅವರ ಪತ್ನಿ ಉಷಾ ಹೆಸರಲ್ಲಿ 34.53 ಕೋಟಿ ರೂಪಾಯಿ ಇದ್ದರೆ, ಪುತ್ರ ಆಕಾಶ್ ಹೆಸರಲ್ಲಿ 3.81 ಕೋಟಿ ರೂಪಾಯಿ ಸಾಲ ಇದೆ. ಡಿ.ಕೆ.ಶಿವಕುಮಾರ್ ವಾರ್ಷಿಕ ಆದಾಯ 14.24 ಕೋಟಿ ರೂ ಆಗಿದೆ.

ಇದನ್ನೂ ಓದಿ : ಎಂಟಿಬಿ ನಾಗರಾಜ್ ನಾಮಪತ್ರ ಸಲ್ಲಿಕೆ: ಎಂಟಿಬಿ ಆಸ್ತಿ ಎಷ್ಟು ಹೆಚ್ಚಳ ಗೊತ್ತಾ?

Leave A Reply

Your email address will not be published.