Congress 4th list released: ಕಾಂಗ್ರೆಸ್ ನ 4ನೇ ಪಟ್ಟಿ ಬಿಡುಗಡೆ! 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದ KPCC

Congress 4th list released : ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದ್ದು ನಿರೀಕ್ಷೆಯಂತೆಯೇ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿ 7 ಮಂದಿಗೆ ಟಿಕೆಟ್ ಘೋಷಿಸಲಾಗಿದೆ. ಆ 7 ಅಭ್ಯರ್ಥಿಗಳು (Congress 4th list released) ಯಾರೆಂದು ನೋಡೋಣ ಬನ್ನಿ.

 

ಲಿಂಗಸುಗೂರು- ದುರ್ಗಪ್ಪ ಎಸ್ ಹೊಲಗೇರಿ
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ – ಜಗದೀಶ್ ಶೆಟ್ಟರ್
ಹುಬ್ಬಳ್ಳಿ ಧಾರವಾಡ ಪಶ್ಚಿಮ – ದೀಪಕ್ ಚಿಂಚೋರೆ
ಶಿಗ್ಗಾಂವಿ – ಮೊಹಮದ್ ಯೂಸುಫ್ ಸವಣೂರು
ಹರಿಹರ -ನಂದಗಾವಿ ಶ್ರೀನಿವಾಸ
ಚಿಕ್ಕಮಗಳೂರು – ಹೆಚ್ ಡಿ ತಮ್ಮಯ್ಯ
ಶ್ರವಣಬೆಳಗೊಳ- ಎಂ.ಎ ಗೋಪಾಲಸ್ವಾಮಿ

ಬಿಜೆಪಿಯಲ್ಲಿ ಟಿಕೆಟ್ ಸಿಗದ್ದಕ್ಕೆ ಮುನಿಸಿಕೊಂಡು ಕಾಂಗ್ರೆಸ್ ಪಕ್ಷ ಸೇರಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಟಿಕೆಟ್ ನೀಡಲಾಗಿದೆ. ಅವರ ವಿರುದ್ಧ ಅಲ್ಲಿ ಬಿಜೆಪಿ ಈಗಾಗಲೇ ಮಹೇಶ್ ಟೆಂಗಿನಕಾಯಿ ಅವರಿಗೆ ಟಿಕೆಟ್ ನೀಡಿದೆ.

ಒಟ್ಟು 224 ಕ್ಷೇತ್ರಗಳಲ್ಲಿ 223 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಉದ್ದೇಶಿಸಿರುವ ಕಾಂಗ್ರೆಸ್ ಇನ್ನು 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲು ಬಾಕಿ ಉಳಿಸಿಕೊಂಡಿದೆ. ಪುಲಕೇಶಿ ನಗರ, ಸಿವಿ ರಾಮನ್ ನಗರ. ಮುಳಬಾಗಿಲು. ರಾಯಚೂರು ನಗರ, ಅರಕಲಗೂಡು, ಮಂಗಳೂರು ಉತ್ತರ, ಶಿಡ್ಲಘಟ್ಟ, ಕೆ ಆರ್ ಪುರಂ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಬಾಕಿ ಇದ್ದು ಬುಧವಾರವೇ ಅಂತಿಮ ಪಟ್ಟಿಯನ್ನು ಘೋಷಿಸುವ ಸಾಧ್ಯತೆಗಳಿವೆ.

ಇದನ್ನೂ ಓದಿ : ಇಶಾನ್ ಕಿಶನ್ ಔಟ್ ಆದ ಕೂಡಲೆ ‘ಆ’ ತರದ ಕೆಟ್ಟ ಪದ ಬಳಸಿದ ಶಾರುಖ್ ಪುತ್ರಿ ಸುಹಾನಾ!

Leave A Reply

Your email address will not be published.