Nandini-Amul: ನಂದಿನಿ Vs ಅಮುಲ್ ಹಾಲು ನಡುವೆ ಹಾಳು ಹಾಲಾಹಲದ ಗುಜರಾತ್ ಸಿಎಂ ಹೇಳಿದ್ದೇನು ಗೊತ್ತೇ ?

Nandini-Amul: ರಾಜ್ಯದೆಲ್ಲೆಡೆ ಚುನಾವಣೆ ಕಾವು ಗರಿಗೆದರಿದ್ದು ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಸೇವ್‌ ನಂದಿನಿ, ಗೋ ಬ್ಯಾಕ್‌ ಅಮುಲ್‌ (Nandini-Amul controversy) ಅಭಿಯಾನ ಜೋರಾಗಿ ಸದ್ದು ಮಾಡುತ್ತಿದೆ.

ಗುಜರಾತ್‌ (Gujarath) ಮೂಲದ ಅಮುಲ್‌ ಕರ್ನಾಟಕದ ಮಾರುಕಟ್ಟೆಯಲ್ಲಿ ತನ್ನ ಪಾರುಪತ್ಯ ಕಾಯ್ದುಕೊಳ್ಳಲು ಹವಣಿಸುತ್ತಿದೆ ಎಂಬ ಸುದ್ಧಿ ಕೇಳಿ ಬರುತ್ತಿದ್ದು, ಇದರಿಂದ ರಾಜ್ಯದ ರೈತರಲ್ಲಿ (former) ಆತಂಕ ಎದುರಾಗಿದೆ. ಈ ನಡುವೆ ರಾಜಕೀಯ ಪಕ್ಷಗಳ ನಡುವೆ ಅಮುಲ್‌, ನಂದಿನಿ (Nandini-Amul) ವಿಚಾರದಲ್ಲಿ ವಾಗ್ಸಮರ ನಡೆಯುತ್ತಿದೆ.

ಇದೀಗ ಈ ಬಗ್ಗೆ ದಕ್ಷಿಣ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Bhupendrabhai Patel) ಮಾತನಾಡಿದ್ದು, ದಕ್ಷಿಣ ರಾಜ್ಯದಲ್ಲಿ ಅಮುಲ್ ಬಹಿಷ್ಕರಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

“ನನ್ನ ದೃಷ್ಟಿಯಲ್ಲಿ ಅಮುಲ್ ಬಹಿಷ್ಕರಿಸುವ ಅಗತ್ಯವಿಲ್ಲ ನೀವು ಏನು ಮಾಡಬೇಕೆಂದು ಬಯಸುತ್ತೀರೋ ಅದನ್ನು ಮಾಡುತ್ತಿರಿ.
ಅಮುಲ್ ಏನನ್ನಾದರೂ ಕಸಿದುಕೊಳ್ಳುತ್ತಿದ್ದರೆ, ಅದು ಪ್ರತಿಭಟನೆಯ ವಿಷಯವಾಗಿದೆ” ಎಂದು ಸಿಎಂ ಹೇಳಿದರು.

ಬಿಜೆಪಿ ದಕ್ಷಿಣ ರಾಜ್ಯದಲ್ಲಿ ಅಮುಲ್‌ಗೆ ಅವಕಾಶ ನೀಡಲು ಹೊರಟಿದ್ದು, ಈ ಮೂಲಕ ನಂದಿನಿಯನ್ನು ಕೊಲ್ಲಲು ಬಯಸಿದೆ ಎಂದು ಕರ್ನಾಟಕದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜನತಾ ದಳ (ಜಾತ್ಯತೀತ) ಆರೋಪ ಮಾಡಿದೆ.

ನಂದಿನಿ ಉತ್ಪನ್ನಗಳ ಕೊರತೆ ಸೃಷ್ಟಿಸಿ ಈ ಮೂಲಕ ಅಮುಲ್ ಗೆ ದಾರಿ ಮಾಡಿಕೊಡಲಾಗುತ್ತದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಬಿಜೆಪಿ ಸರ್ಕಾರವು ಈ ಆರೋಪ ನಿರಾಕರಿಸಿದ್ದು, ನಂದಿನಿಗೆ ಅಮುಲ್‌ ನಿಂದ ಯಾವುದೇ ಬೆದರಿಕೆ ಇಲ್ಲ ಎಂದು ಹೇಳಿದೆ ಎಂದು ಹೇಳಿದರು.

ಇದನ್ನೂ ಓದಿ :  D.K. Shivakumar: 141400000000 ಸಾಮ್ರಾಜ್ಯದ ಸಾಹುಕಾರ್ ಈ ಡಿಕೆ ಶಿವಕುಮಾರ್!!

Leave A Reply

Your email address will not be published.