Reliance Jio: ಸೂಪರ್ ಡೂಪರ್ ಪೂರ್ತಿ ಫ್ಯಾಮಿಲಿಗಾಗಿ ಜಿಯೋ ಪ್ಲಾನ್!100GB ಡೇಟಾ , ನೆಟ್ ಫ್ಲಿಕ್ಸ್ ಇನ್ನೂ ಹಲವು ಸೌಲಭ್ಯ ಲಭ್ಯ!
Reliance Jio: ಟೆಲಿಕಾಮ್ ಕಂಪನಿಗಳಲ್ಲಿ (Telicom Company)ರಿಲಯನ್ಸ್ ಜಿಯೋ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್ ವನ್ ಸಂಸ್ಥೆಯಾಗಿದ್ದು, ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯಲು ಸಿದ್ಧವಾಗುತ್ತಿದೆ. ಈ ನಡುವೆ ಉಳಿದ ಟೆಲಿಕಾಂ ಕಂಪನಿಗಳು ಕೂಡ ಜಿದ್ದಿಗೆ ಬಿದ್ದಂತೆ ಮುಂಚೂಣಿ ಸಾಧಿಸಲು ಹೊಸ ಆಫರ್ ಗಳನ್ನ ನೀಡುತ್ತಿದೆ.
ಭಾರತದ ಅತಿ ದೊಡ್ದ ಟೆಲಿಕಾಮ್ ಸಂಸ್ಥೆಯಾಗಿ ಗುರುತಿಸಿ ಕೊಂಡಿರುವ ರಿಲಯನ್ಸ್ ಜಿಯೋ ಬಳಕೆದಾರರಿಗೆ ಹಲವು ಉತ್ತಮ ಪ್ರಿಪೇಯ್ಡ್ ಯೋಜನೆ(Prepaid Plans) ಮೂಲಕ ಜನರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಗ್ರಾಹಕರ ಪ್ರಯೋಜನದ ವಿಷಯದಲ್ಲಿ ಕಂಪನಿಯ ಪೋಸ್ಟ್ಪೇಯ್ಡ್ ಯೋಜನೆಗಳು ಕೂಡ ಉತ್ತಮವಾಗಿವೆ. ಜಿಯೋ ಇಡೀ ಕುಟುಂಬಕ್ಕೆ ಉತ್ತಮ ಯೋಜನೆಯನ್ನು ನೀಡುತ್ತಿದ್ದು, ಕಂಪನಿಯ ಈ ಪೋಸ್ಟ್ಪೇಯ್ಡ್ ಯೋಜನೆ 699 ರೂಗಳಾಗಿದೆ. ಜಿಯೋದ ಈ ಕುಟುಂಬ ಯೋಜನೆಯು ಮೂರು ಹೆಚ್ಚುವರಿ ಸಿಮ್ಗಳೊಂದಿಗೆ ಬರುತ್ತದೆ.
ರಿಲಯನ್ಸ್ ಜಿಯೋ 699ರೂ. ಪೋಸ್ಟ್‌ಪೇಯ್ಡ್ ಯೋಜನೆ :
ಜಿಯೋ ಟೆಲಿಕಾಂನ 699ರೂ. ಪೋಸ್ಟ್‌ಪೇಯ್ಡ್ ಯೋಜನೆಯು ಬೆಸ್ಟ್ ಪ್ಲಾನ್ ಗಳಲ್ಲಿ ಒಂದಾಗಿದ್ದು, ಈ ಯೋಜನೆಯ ಮೂಲಕ 100 GB ಡೇಟಾ ಸೌಲಭ್ಯ ಪಡೆಯಬಹುದು. ಇದಲ್ಲದೇ ಅನಿಯಮಿತ ಉಚಿತ ವಾಯಿಸ್ ಕರೆಯ ಪ್ರಯೋಜನದ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯವನ್ನು ಪಡೆಯಬಹುದು. ಡೇಟಾ ಮಿತಿ ಮುಗಿದ ನಂತರ ಬಳಕೆದಾರರು 1GB ಡೇಟಾಕ್ಕಾಗಿ ರೂ 10 ಖರ್ಚು ಮಾಡಬೇಕಾಗುತ್ತದೆ. ಫ್ಯಾಮಿಲಿ ಸಿಮ್ ಕಾರ್ಡ್, 3 ಸಿಮ್ ವರೆಗೆ ಆಡ್ ಆನ್ ಫ್ಯಾಮಿಲಿ ಸಿಮ್ ಸೌಲಭ್ಯ ಕೂಡ ಪಡೆದುಕೊಳ್ಳಬಹುದು. ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಚಂದಾದಾರಿಕೆ ಕೂಡ ಪಡೆದುಕೊಳ್ಳಬಹುದು.
ಈ ರಿಲಯನ್ಸ್ ಜಿಯೋ (Reliance Jio) ಯೋಜನೆಯು ಜಿಯೋ ಟಿವಿ ಮತ್ತು ಜಿಯೋ ಸಿನಿಮಾದಂತಹ ಅಪ್ಲಿಕೇಶನ್ಗಳಿಗೆ ಉಚಿತ ಪ್ರವೇಶವನ್ನು ಒದಗಿಸುತ್ತದೆ. ಈ ರಿಲಯನ್ಸ್ ಜಿಯೋ ಯೋಜನೆಯಲ್ಲಿ ಕುಟುಂಬದ ಸದಸ್ಯರು ಪ್ರತಿ ತಿಂಗಳು 5GB ಡೇಟಾವನ್ನು ಪಡೆಯಬಹುದು. ಈ ಯೋಜನೆಯಲ್ಲಿ ಕಂಪನಿಯು ದೇಶಾದ್ಯಂತ ಎಲ್ಲಾ ನೆಟ್ವರ್ಕ್ಗಳಿಗೆ ಅನಿಯಮಿತ ಕರೆಗೆ ಅವಕಾಶ ಕಲ್ಪಿಸುತ್ತದೆ. ಇದರ ಜೊತೆಗೆ ಕಂಪನಿಯು ಈ ಯೋಜನೆಯ 30 ದಿನಗಳ ಪ್ರಯೋಗಕ್ಕೂ ಕೂಡ ಅವಕಾಶ ಕಲ್ಪಿಸಿದೆ. ಹೆಚ್ಚಿನ ಡೇಟಾದ ಪ್ರಯೋಜನ ಬೇಕು ಎನ್ನುವುದಾದರೆ ನೀವು ಜಿಯೋದ ರೂ 1499 ಪೋಸ್ಟ್ಪೇಯ್ಡ್ ಯೋಜನೆಗೆ ಚಂದಾದಾರರಾಗಬಹುದಾಗಿದೆ.
ರಿಲಯನ್ಸ್ ಜಿಯೋ 1499ರೂ. ಪೋಸ್ಟ್‌ಪೇಯ್ಡ್ ಯೋಜನೆ :
ಜಿಯೋ ಟೆಲಿಕಾಂನ 1499ರೂ. ಪೋಸ್ಟ್‌ಪೇಯ್ಡ್ ಯೋಜನೆಯು ಆಕರ್ಷಕ ಪ್ಲ್ಯಾನ್‌ಗಳಲ್ಲಿ ಒಂದಾಗಿದ್ದು, ಈ ಯೋಜನೆಯ ಮೂಲಕ 300 GB ಡೇಟಾ ಸೌಲಭ್ಯ ಪಡೆಯಬಹುದು. ರಿಲಯನ್ಸ್ ಜಿಯೋ (Reliance Jio) ಯೋಜನೆಯು ಯಾವುದೇ ಹೆಚ್ಚುವರಿ ಸಿಮ್ ಅನ್ನು ನೀಡುವುದಿಲ್ಲ. ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ, ಅನಿಯಮಿಯ ಉಚಿತ ವಾಯಿಸ್ ಕರೆಯ ಪ್ರಯೋಜನದ ಜೊತೆಗೆ ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್(Netflix) ಅಮೆಜಾನ್ ಪ್ರೈಮ್ ಚಂದಾದಾರಿಕೆ ಕೂಡ ದೊರೆಯಲಿದೆ. ಜಿಯೋದ ಈ ಯೋಜನೆಯ ಮೂಲಕ ಜಿಯೋ ಟಿವಿ ಮತ್ತು ಜಿಯೋ ಸಿನಿಮಾಗಳಿಗೆ ಉಚಿತ ಪ್ರವೇಶವನ್ನು ಸಹ ನಿಮಗೆ ಲಭ್ಯವಿರುತ್ತದೆ.
ಇದನ್ನೂ ಓದಿ: Actress Prema:ಆ ಒಂದು ಆರೋಪಕ್ಕೆ ಸಿಟ್ಟುಕೊಂಡ ನಟಿ ಪ್ರೇಮ! ಇದೊಂದು ನಡಿಬಾರದಿತ್ತು ಎಂದ ಮೋಹಕ ನಟಿ!