Government Programme: ನಿಮ್ ಖಾತೆ ಖಾಲಿ ಆಯ್ತಾ? ಸರ್ಕಾರ ನೀಡುತ್ತೆ 10000 ರೂಪಾಯಿ, ತಕ್ಷಣ ಹೀಗೆ ಅರ್ಜಿ ಸಲ್ಲಿಸಿ

Pradhan Mantri Jan-Dhan Yojana: ಸರ್ಕಾರ ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು(Government programme) ರೂಪಿಸಿದೆ. ಅವುಗಳಲ್ಲಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ(Pradhan Mantri Jan-Dhan Yojana) ಕೂಡ ಒಂದಾಗಿದ್ದು, ನೀವು ಖಾತೆಯಲ್ಲಿ ಹಣ ಇಲ್ಲ ಎಂದರು ಕೂಡ ಚಿಂತಿಸಬೇಕಾದ ಅವಶ್ಯಕತೆ ಇಲ್ಲ. ಈ ಯೋಜನೆಯ ಮೂಲಕ ಲಭ್ಯವಾಗುವ ಪ್ರಯೋಜನಗಳ ಬಗ್ಗೆ ಹೆಚ್ಚಿನವರಿಗೆ ತಿಳಿಯದೇ ಇರುವುದರಿಂದ ಅದರ ಪ್ರಯೋಜನ ಪಡೆಯದೆ ವಂಚಿತರಾಗುತ್ತಿದ್ದಾರೆ. ಇದರ ನಡುವೆ ದೇಶದಲ್ಲಿ 47 ಕೋಟಿಗೂ ಹೆಚ್ಚು ಖಾತೆಗಳನ್ನ ತೆರೆಯಲಾಗಿದೆ. ಹಾಗಿದ್ರೆ, ಈ ಯೋಜನೆಯ ಪ್ರಯೋಜನಗಳೇನು ಎಂಬ ಮಾಹಿತಿ ಇಲ್ಲಿದೆ ನೋಡಿ.

 

ಇದು ಪ್ರಮುಖವಾಗಿ ಮಹಿಳೆಯರಿಗೆ (Women)ಧನ ಸಹಾಯ ಮಾಡುವ ನಿಟ್ಟಿನಲ್ಲಿ ಆರಂಭ ಮಾಡಲಾದ ಯೋಜನೆಯಾಗಿದೆ. ಜನ್ ಧನ್ ಖಾತೆದಾರರಿಗೆ ಈ ಯೋಜನೆಯ ಮೂಲಕ ಬ್ಯಾಂಕಿಂಗ್(Banking), ಉಳಿತಾಯ(Savings), ಠೇವಣಿ(Deposits) ಖಾತೆ, ಹಣ ರವಾನೆ(Money Transfer), ಪಿಂಚಣಿ, ಕ್ರೆಡಿಟ್ ವಿಮೆ ಮಾಡಲಾಗುತ್ತದೆ. ಯಾವುದೇ ಬ್ಯಾಂಕ್‌ನಲ್ಲಿ ಪ್ರಧಾನ ಮಂತ್ರಿ ಜನ-ಧನ ಯೋಜನೆ ಖಾತೆಯನ್ನು ತೆರೆಯಲು ಅವಕಾಶವಿದೆ.ಜನ್ ಧನ್ ಖಾತೆದಾರರಿಗೆ ಸರ್ಕಾರ 10 ಸಾವಿರ ರೂಪಾಯಿ ನೀಡುತ್ತಿದೆ. ಆದರೆ, ಇದಕ್ಕಾಗಿ ನೀವು ನಿಮ್ಮ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬೇಕಾಗಿದ್ದು, ಇದಲ್ಲದೇ, ಈ ಖಾತೆಯಲ್ಲಿ 1 ಲಕ್ಷದ 30,000 ವರೆಗಿನ ವಿಮೆಯ ಪ್ರಯೋಜನ ದೊರೆಯಲಿದೆ.

ಗ್ರಾಹಕರು ತಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತವನ್ನ ಕಾಯ್ದುಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಹೆಚ್ಚುವರಿಯಾಗಿ ರುಪೇ ಡೆಬಿಟ್ ಕಾರ್ಡ್ ನೀಡಲಾಗುತ್ತದೆ. ಈ ಖಾತೆಯಲ್ಲಿ ಓವರ್‌ಡ್ರಾಫ್ಟ್’ಗಾಗಿ (Overdraft) ಬ್ಯಾಂಕ್‌ಗೆ 10,000 ಅರ್ಜಿ ಸಲ್ಲಿಸಬಹುದಾಗಿದ್ದು, ಇದಕ್ಕಾಗಿ ನೀವು ನಿಮ್ಮ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬೇಕಾಗುತ್ತದೆ.ಪಿಎಂಜೆಡಿವೈ ಅಡಿಯಲ್ಲಿ ಬ್ಯಾಂಕ್‌ನಲ್ಲಿ (Bank) ತೆರೆಯಲಾಗುವ ಖಾತೆಯಲ್ಲಿ ಡೆಪಾಸಿಟ್ ಮಾಡಲಾಗುವ ಹಣದ ಮೇಲೆ ಬಡ್ಡಿದರ ದೊರೆಯಲಿದೆ. ಈ ಪ್ರಯೋಜನಗಳನ್ನು ಪಡೆಯಲು, ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಯಲ್ಲಿ ನೀವು ಜನ್ ಧನ್ ಖಾತೆಯನ್ನು ತೆರೆಯಬಹುದಾಗಿದ್ದು, ಇದಕ್ಕಾಗಿ ನೀವು ಆಧಾರ್ ಕಾರ್ಡ್(AadharCard) ಮತ್ತು ಪ್ಯಾನ್ ಕಾರ್ಡ್(Pan Card) ಹೊಂದಿರಬೇಕಾಗುತ್ತದೆ.

ಒಂದು ವೇಳೆ, ಆಕಸ್ಮಿಕವಾಗಿ ಮರಣ (Death)ಹೊಂದಿದರೆ,ಜನ್ ಧನ್ ಖಾತೆದಾರರಿಗೆ 1 ಲಕ್ಷ ರೂಪಾಯಿ ಅಪಘಾತ ವಿಮಾ ಪಾಲಿಸಿ ಸೇರಿದಂತೆ ಹೆಚ್ಚುವರಿಯಾಗಿ 30,000 ರೂಪಾಯಿ ಜೀವ ವಿಮಾ ಪಾಲಿಸಿ(Life Insurance Policy) ಲಭ್ಯವಾಗಲಿದೆ. ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ ಖಾತೆದಾರರ ಕುಟುಂಬಕ್ಕೆ 1 ಲಕ್ಷ ರೂಪಾಯಿ ವಿಮಾ ಸೌಲಭ್ಯ ದೊರೆಯಲಿದ್ದು, ಸಾಮಾನ್ಯ ಸಂದರ್ಭಗಳಲ್ಲಿ ಮೃತಪಟ್ಟ ಸಂದರ್ಭದಲ್ಲಿ 30,000 ರೂಪಾಯಿ ವಿಮಾ ರಕ್ಷಣೆಯ ಮೊತ್ತವನ್ನು ನೀಡಲಾಗುತ್ತದೆ.

Leave A Reply

Your email address will not be published.