Siddaramaiah : ರಾಜ್ಯದ ಮಾನ, ಮರ್ಯಾದೆ, ಗೌರವವನ್ನು ಹಾಳು ಮಾಡಿದ್ದು ಕಾಂಗ್ರೆಸ್! ಶಾಕಿಂಗ್ ಹೇಳಿಕೆ ನೀಡಿದ ಸಿದ್ದರಾಮಯ್ಯ
Siddaramaiah : ರಾಜ್ಯದ ಮಾನ, ಮರ್ಯಾದೆ, ಗೌರವವನ್ನು ಹಾಳು ಮಾಡಿದ್ದೇ ಕಾಂಗ್ರೆಸ್(Congress) ನವರ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು ಎಡವಟ್ಟಿನ ಭಾಷಣವನ್ನು ಮಾಡಿದ್ದಲ್ಲದೆ ಕೆಲ ಸಮಯ ನೆರೆದಿದ್ದ ಜನರಲ್ಲಿ ಗೊಂದಲ ಉಂಟುಮಾಡಿದರು.
ಹೌದು, ಕೋಲಾರ(Kolara)ದಲ್ಲಿ ಭಾನುವಾರ (ಏ. 16) ಏರ್ಪಡಿಸಲಾಗಿದ್ದ ಜೈ ಭಾರತ್ ಸಮಾವೇಶದಲ್ಲಿ ಮಾತನಾಡಿದ ಅವರು ಬಿಜೆಪಿ(BJP)ಯನ್ನು ಧೂಷಿಸುವ ಭರದಲ್ಲಿ ಬಾಯಿ ತಪ್ಪಿ ಕಾಂಗ್ರೆಸ್ ಹೆಸರನ್ನು ತಂದು ಎಡವಟ್ಟಿನ ಭಾಷಣ ಮಾಡಿದರು. ಆದರೆ, ವೇದಿಕೆಯಲ್ಲಿದ್ದ ಯಾವುದೇ ಮುಖಂಡರು ಹಾಗೂ ಕಾರ್ಯಕರ್ತರೂ ಸಹ ಇದನ್ನು ಸರಿಪಡಿಸುವ ಗೋಜಿಗೆ ಹೋಗಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ತಾವಾಡಿದ ಮಾತಿನ ಬಗ್ಗೆಯೂ ಗೊತ್ತಾಗಲಿಲ್ಲ. ಹಾಗೇ ಅವರು ತಮ್ಮ ಭಾಷಣವನ್ನು ಮುಂದುವರಿಸಿದರು.
ತಮ್ಮ ಭಾಷಣದಲ್ಲಿ ಮಾತನಾಡಿದ ಅವರು ಮೇ ೧೦ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಅಧಿಕಾರ ನಡೆಸಲು ಅವಕಾಶ ಕೊಟ್ಟರೆ ಈ ರಾಜ್ಯದ ಜನರ ನೆಲ ಜಲ ಭಾಷೆಯನ್ನು ರಕ್ಷಣೆ ಮಾಡ್ತಾರೆ ಎಂಬುದನ್ನು ವಿಚಾರ ಮಾಡಬೇಕು. ಬಿಜೆಪಿ ಸರ್ಕಾರ ಬಂದ ಮೇಲೆ ರಾಜ್ಯ ಹಿಂದೆಂದೂ ಇಲ್ಲದ ಕೆಟ್ಟ ಹೆಸರು ತೆಗೆದುಕೊಂಡಿದೆ ಎಂದು ಆಕ್ರೋಶ ಹೊರಹಾಕಿದರು.
ಅಲ್ಲದೆ ಕೇಂದ್ರದಲ್ಲಿ ಬಿಜೆಪಿಯು 9 ವರ್ಷಗಳಿಂದ ಸರ್ಕಾರವನ್ನು ನಡೆಸುತ್ತಾ ಬಂದಿದೆ. ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿದ್ದಾರೆ. ಕರ್ನಾಟಕದಲ್ಲಿ ಐದು ವರ್ಷದಲ್ಲಿ 3 ಜನ ಮುಖ್ಯಮಂತ್ರಿಗಳನ್ನು ಕಾಣಬೇಕಾಯಿತು. 1 ವರ್ಷ 2 ತಿಂಗಳು ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. 2 ವರ್ಷ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದರು. ಬಳಿಕ ಸುಮಾರು 2 ವರ್ಷಗಳ ಕಾಲ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿ ಕಾರ್ಯನಿರ್ವಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ(PM Modi) ಮತ್ತು ಸಿಎಂ ಬೊಮ್ಮಾಯಿ(CM Bommai)ಅವರು ತಮ್ಮದು ಡಬಲ್ ಎಂಜಿನ್ ಸರ್ಕಾರ ಎಂದು ಹೇಳಿಕೊಳ್ಳುತ್ತಿದ್ದರು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ರಾಜ್ಯದ ಅಭಿವೃದ್ಧಿ ವೇಗವಾಗಿ ಆಗುತ್ತದೆ ಎಂದು ಹೇಳಿದ್ದರು. ಆದರೆ, ರಾಜ್ಯ ಹಿಂದೆಂದೂ ಇಷ್ಟೊಂದು ಕೆಟ್ಟ ಹೆಸರನ್ನು ತೆಗೆದುಕೊಂಡಿರಲಿಲ್ಲ. ಈ ಡಬಲ್ ಎಂಜಿನ್ ಸರ್ಕಾರ ಬಂದ ಮೇಲೆ ಹೀಗಾಗಿದೆ. ರಾಜ್ಯದ ಮಾನ, ಮರ್ಯಾದೆ ಹಾಗೂ ಗೌರವವನ್ನು ಕಾಂಗ್ರೆಸ್ನವರು ಹಾಳು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಬಾಯಿ ತಪ್ಪಿ ಹೇಳಿದ್ದಾರೆ.
ಇದರೊಂದಿಗೆ ಇದೀಗ ನಂದಿನಿ ಹಾಲಿಗೆ ಸಂಚಕಾರ ತರೋಕೆ ಹೊರಟಿದ್ದಾರೆ. ರಾಜ್ಯದಲ್ಲಿ ಅಮುಲ್ ಹಾಲು ತರಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಜನ ಅಮುಲ್ ಹಾಲನ್ನು ತಿರಸ್ಕರಿಸಿ ಕೇಂದ್ರ ಸರ್ಕಾರಕ್ಕೆ ಬುದ್ಧಿ ಗಳಿಸಬೇಕು ಎಂದು ಮನವಿ ಮಾಡಿದರು.
ಅಂದಹಾಗೆ ಸಿದ್ದು ಬಾಯಿ ತಪ್ಪಿ ಕಾಂಗ್ರೆಸ್ ಅಂದದ್ದು ಇದೇ ಮೊದಲೇನಲ್ಲ. ಇದಕ್ಕೂ ಮುಂಚಿತವಾಗಿ ಅನೇಕ ಕಾರ್ಯಕ್ರಮಗಳಲ್ಲಿ, ಸಮಾವೇಶಗಳಲ್ಲಿ ಬಿಜೆಪಿ ಬದಲು ಕಾಂಗ್ರೆಸ್, ಕಾಂಗ್ರೆಸ್ ಬದಲು ಬಿಜೆಪಿ ಎಂದು ಹೇಳುವ ಮೂಲಕ ಗೊಂದಲಗಳನ್ನು ಸೃಷ್ಟಿಸಿ, ಎಲ್ಲರೂ ನಗುವಂತೆಯೂ ಮಾಡಿದ್ದಾರೆ. ಒಂದೊಮ್ಮೆ ದಿವಂಗತ ಇಂಧಿರಾ ಗಾಂಧಿ ಅನ್ನುವ ಬದಲು ದಿವಂಗತ ಸೋನಿಯಾ ಗಾಂಧಿ ಅಂದದ್ಧು ಉಂಟು!