Most Precious Lizard: ಈ ಹಲ್ಲಿಯ ಬೆಲೆ ಕೇಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ! ಹಲ್ಲಿಯ ಬೆಲೆಗೆ ಬಿಎಂಡಬ್ಲ್ಯೂ ಕಾರನ್ನೇ ಖರೀದಿ ಮಾಡಬಹುದು!

Most Precious Lizard: ಹಲ್ಲಿ(Lizard) ಎಂದರೇ ಸಾಕು ಮಾರು ದೂರ ಹೋಗುವ ಮಂದಿಯೇ ಹೆಚ್ಚು. ಆದರೆ, ಹಲ್ಲಿಗೂ ಭಾರೀ ಡಿಮ್ಯಾಂಡ್ ಇದೆ ಅನ್ನೋದು ಗೊತ್ತಾ? ಈ ಹಲ್ಲಿಯ ಬೆಲೆ ಕೇಳಿದರೆ ಅಚ್ಚರಿಯಾಗೋದು ಪಕ್ಕಾ! ಯಾಕೆ ಅಂತೀರಾ?

 

ಗಿಕ್ಕೋ ಹೆಸರಿನ ಅಪರೂಪದ ಹಲ್ಲಿಯನ್ನ(World’s Most Precious and Rare Lizard) ಖರೀದಿ ಮಾಡಲು ನೀವು ಹೊರಟರೆ ನೀವು ಅದರ ಬದಲಿಗೆ ಒಂದು ಬಿಎಂಡಬ್ಲ್ಯೂ ಕಾರೋ(BMW) ಇಲ್ಲವೇ ಐಷಾರಾಮಿ ಮನೆಯನ್ನೋ ಕೊಂಡುಕೊಳ್ಳಬಹುದು ಎಂದು ನೀವು ಯೋಚಿಸಿದರು ಆಶ್ಚರ್ಯವೇನಿಲ್ಲ. ಕೇಳುವಾಗ ನಿಮಗೆ ವಿಚಿತ್ರ ಎಂದೆನಿಸಿದರೂ ಕೂಡ ತೀರಾ ಅಪರೂಪ (Rare)ಹಾಗೂ ವಿರಳವಾಗಿ ಕಂಡುಬರುವ ಹಲ್ಲಿಯಾಗಿರುವ ಗಿಕ್ಕೊ, ಒಂದು ಸಾಮಾನ್ಯ ಹಲ್ಲಿ ಬರೋಬ್ಬರಿ ರೂ. 70 ರಿಂದ 80 ಲಕ್ಷ ರೂ.ಗಳಿಗೆ ಮಾರಾಟವಾಗುತ್ತದಂತೆ. ಇಷ್ಟೊಂದು ದುಬಾರಿನಾ(Costly) ಎಂದು ನೀವು ಮೂಗು ಮುರಿಯುತ್ತಿರಬಹುದು.ಆದರೆ, ಕೇಳಲು ಅಚ್ಚರಿಯಾದರೂ ನಿಜ. ಹಲ್ಲಿಯ ಸೈಜ್ ಆಧರಿಸಿ ಇವುಗಳ ಬೆಲೆ ನಿರ್ಣಯ ಮಾಡಲಾಗುತ್ತದೆ. ನಿಮಗೀಗ ಒಂದು ಸಂದೇಹ ಕಾಡುವುದು ಸಹಜ. ಒಂದು ಹಲ್ಲಿಗೆ ಇಷ್ಟೊಂದು ದುಡ್ಡು ಸುರಿಯಬೇಕಾ? ಅಂತಹದ್ದೇನು ವಿಶೇಷವಿದೆ ಎಂದು ನೀವು ಯೋಚಿಸುತ್ತಿರಬಹುದು. ಇದಕ್ಕೆ ಉತ್ತರ ಇಲ್ಲಿದೆ ನೋಡಿ!

ಹಲವು ರೀತಿಯ ಕಾಯಿಲೆಗಳ ಔಷಧಿ (Medicine) ತಯಾರಿಕೆಗೆ ಗಿಕ್ಕೋ ಹಲ್ಲಿಯನ್ನು ಉಪಯೋಗಿಸಲಾಗುತ್ತದಂತೆ. ಈ ಹಲ್ಲಿಯ ಮಾಂಸ, ನಪುಂಸಕತೆ, ಡಯಾಬಿಟಿಸ್, ಏಡ್ಸ್ ಹಾಗೂ ಕ್ಯಾನ್ಸರ್ (Cancer)ನಂತಹ ಗಂಭೀರ ಮಾರಣಾಂತಿಕ ಕಾಯಿಲೆಗಳಲ್ಲಿ ಭಾರಿ ದೊಡ್ಡ ಮಟ್ಟದ ಲಾಭವನ್ನು ತಂದುಕೊಡುತ್ತದೆ. ಚೀನಾದಲ್ಲಿ ಹಲವು ಸಾಂಪ್ರದಾಯಿಕ ಔಷಧಿಗಳ ತಯಾರಿಕೆಗೆ ಈ ಹಲ್ಲಿಯನ್ನು ಉಪಯೋಗಿಸಲಾಗುತ್ತದೆ. ಇದೇ ರೀತಿಯ ಹಲವು ಕಾರಣಗಳಿಂದ ಈ ಹಲ್ಲಿಗೆ ಡಿಮ್ಯಾಂಡೋ ಡಿಮ್ಯಾಂಡ್!.

ಭಾರತದಲ್ಲಿ ಈ ಹಲ್ಲಿಯ ಖರೀದಿ ಹಾಗೂ ಮಾರಾಟ ಕಾನೂನುಬಾಹಿರ ಎಂದು ಪರಿಗಣಿಸಲಾಗಿದೆ.ಈ ಹಲ್ಲಿ ದುಬಾರಿ ಬೆಲೆಗೆ ಮಾರಾಟವಾಗಲೂ ಮತ್ತೂಂದು ಕಾರಣವಿದೆ. ಇಡೀ ವಿಶ್ವದಲ್ಲಿ ಕೇವಲ ಭಾರತದ ಬಿಹಾರ್ ಮತ್ತು ಬಿಹಾರ್ ಗೆ ಹೊಂದಿಕೊಂಡಂತೆ ಇರುವ ನೇಪಾಳದಲ್ಲಿ ಮಾತ್ರ ಈ ಹಲ್ಲಿ ಕಾಣಸಿಗುತ್ತವೆ. ಇವುಗಳ ಸಂತತಿ ದಿನೇ ದಿನೇ ಕಡಿಮೆ ಆಗುತ್ತಿದ್ದು, ಹೀಗಾಗಿ, ಇವುಗಳನ್ನು Wildlife Protection Act, 1972ನ ಶೆಡ್ಯೂಲ್ 3ರ ಅಡಿ ಪಟ್ಟಿ ಮಾಡಲಾಗಿದೆ. ಇವುಗಳ ಸಂಖ್ಯೆ ಕ್ಷೀಣಿಸುತ್ತಿರುವ ಜೊತೆಗೆ ಇವುಗಳ ಉಳಿವಿಗಾಗಿ ಇವುಗಳ ಬೇಟೆ, ಮಾರಾಟ ಮತ್ತು ಖರೀದಿಯನ್ನು ನಿಷೇಧ ಹೇರಲಾಗಿದ್ದು, ಸಂಪೂರ್ಣ ಕಾನೂನುಬಾಹಿರ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ.ನಿಷೇಧ ವಿರುವ ಹಿನ್ನೆಲೆ ಸ್ಮಗ್ಲರ್ಗಳು ಈ ಹಲ್ಲಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ಭರ್ಜರಿ ಹಣ ಪಡೆಯುತ್ತಾರೆ. ವರದಿಗಳ ಪ್ರಕಾರ, ಗಿಕ್ಕೋ ಹಲ್ಲಿಯ ಬೆಲೆ ಅವುಗಳ ಸೈಜ್ ಅನ್ನು ಆಧರಿತವಾಗಿದ್ದು, ಒಂದು ವೇಳೆ ಹಲ್ಲಿಯ ಗಾತ್ರ ದೊಡ್ಡದಾಗಿದ್ದರೆ, ಅದು ಒಂದು ಕೋಟಿಗೂ ಅಧಿಕ ಬೆಲೆಗೆ ಮಾರಾಟವಾಗುತ್ತದಂತೆ.

ಇದನ್ನೂ ಓದಿ: ACCA Course : ನಿಮಗೆಲ್ಲ ಸಿಎ ಗೊತ್ತು, ಆದರೆ ಎಸಿಸಿಎ ಬಗ್ಗೆ ತಿಳಿದಿದೆಯೇ? ಕಲಿತರೆ ಸಿಗಲಿದೆ ಬಹುರಾಷ್ಟ್ರೀಯ ಕಂಪನಿಯಲ್ಲಿ ಉನ್ನತ ಹುದ್ದೆ!

Leave A Reply

Your email address will not be published.